ಬೆಳಗಾಗಿ: ಇತಿಹಾಸ ತಿರುಚುವ ಕೆಲಸವನ್ನು ಯಾರು ಮಾಡಬಾರದು, ನಾವೆಲ್ಲರೂ ಒಂದೇ ಎಂಬ ಬಾವನೆ ಇರಬೇಕು ಎಂದು ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು
ನಗರದ ಕನ್ನಡ ಭವನದಲ್ಲಿ ಶಿವಾಜಿ ಮಹಾರಾಜರ ಕುರಿತಾದ ಸರಜೂ ಕಾಟ್ಕರ್ ಬರೆದ ಪುಸ್ತಕ ಛತ್ರಪತಿ “ಶಿವಾಜಿ ದಿ ಗ್ರೇಟ್ ಮರಾಠಾ” ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಶಿವಾಜಿ ಮಹಾರಾಜ ಸೈನ್ಯದಲ್ಲೂ ಹಿಂದೂಗಳು, ಮುಸ್ಲಿಮರು ಇದರು, ಔರಂಗಜೇಬ್ ನ ಸೈನ್ಯದಲ್ಲೂ, ಹಿಂದೂಗಳು, ಮುಸ್ಲಿಮರು ಇದರು ಆದರೆ ಇವಾಗ ಇರುವ ಪ್ರಸ್ತುತ ಸಮಾಜ ಬೇರೆಯದ್ದರ ಕಡೆಗೆ ಹೊರಟಿದು,ನೈಜವಾದ ಸ್ಥಿತಿಗಳು ಪುಸ್ತಕದ ಓದುವುದರ ಮೂಲಕ ತಿಳಿಯಬೇಕಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಶಿವಾಜಿ ಮಹಾರಾಜರ ಕುರಿತು ಈ ಪುಸ್ತಕದಲ್ಲಿ ನೈಜ ರೂಪದಲ್ಲಿ ಹೇಳುವ ಪ್ರಯತ್ನ ಡಾ. ಸರಜೂ ಕಾಟ್ಕರ್ ಅವರು ಮಾಡಿದ್ದಾರೆ.
ಬ್ರಿಟಿಷ್ ರೊಂದಿಗೆ ಡಚ್ಚರೊಂದಿಗೆ ಪೋರ್ಚುಗೀಸ್ ರೊಂದಿಗೆ ಇತರರೊಂದಿಗೆ ಹೋರಾಡಿದರು. ಛತ್ರಪತಿ ಶಿವಾಜಿ ಮಹಾರಾಜರು ಇತಿಹಾಸ ಜಗತ್ತಿಗೆ ಪರಿಚಯಿಸಿದರು ಜ್ಯೋತಿಬಾ ಪುಲೆ ಅವರು, ಶಿವಾಜಿ ಜೊತೆಗೆ ಹಿಂದುಗಳಿಗಿಂತ ಮುಸ್ಲಿಮರೇ ಹೆಚ್ಚಾಗಿದ್ದರು. ಶಿವಾಜಿ ರಕ್ಷಣೆಗೆ ನಿಂತವರೇ ಮುಸ್ಲಿಂ ಸಮುದಾಯದವರು, ಅಫ್ಜಲ್ ಖಾನ್ ನ್ನು ಮುಗಿಸಲು ಮುಸ್ಲಿಂರ ಸಹಾಯ ಇದೆ. ಇದನ್ನು ತಿರುಚುವ ಪ್ರಯತ್ನ ಆಗಬಾರದು. ಇದು ಸಮಾಜಕ್ಕೆ ಮಾರಕ ಎಂದು ಹೇಳಿದರು.
ಮೋಘಲರಿಂದ ದೇಶವನ್ನು ರಕ್ಷಿಸುವ ಪ್ರಯತ್ನ ಮಾಡಿದವರು ಶಿವಾಜಿ ಮಹಾರಾಜರು, ಇಂದು ಲೆಫ್ಟ್, ಹೋದವರು ರೈಟ್ ಬರಲಾ ರೈಟ್ ಹೋದವರು ಲೆಫ್ಟ್ ಬರುವುದಿಲ್ಲ ಇದರಿಂದ ದೇಶ ಬೆಳೆಯಲು ಮಾರಕವಾಗಿದೆ. ಅವರು ಈ ಕಡೆ ಬರುವುದಿಲ್ಲ, ಇವರು ಆ ಕಡೆ ಬರುವುದಿಲ್ಲ ಎಂದೂ ಅವರು ಹೇಳಿದರು.
ಅವರೊಬ್ಬ ದೂರದೃಷ್ಟಿಯ ನಾಯಕರಾಗಿದ್ದರು. ಶೂದ್ರ ಎನ್ನುವ ಕಾರಣಕ್ಕೆ ಪಟ್ಟಾಭಿಷೇಕ ಮಾಡಲು ತಡೆಯಲಾಗಿತ್ತು. ಹೆಸರು ಮಾಡುತ್ತಾನೆ ಎಂದು ಸಮಾಧಿಯನ್ನು ಮುಚ್ಚಿಡಲಾಗಿತ್ತು. ಇಂದು ಅವರ ಪರವಾಗಿರುವವರೇ ಅಂದು ಅವರ ವಿರೋಧಿಗಳಾಗಿದ್ದರು. ನಿಜವಾದ ಇತಿಹಾಸ ತಿಳಿದುಕೊಳ್ಳುವವರೆಗೆ ಗೊಂದಲ, ಹೊಡೆದಾಟ ಇರುತ್ತದೆ. ಮೊಬೈಲ್ ಬಂದ ಮೇಲೆ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚಾಗುತ್ತಿದೆ ಎಂದು ವಿವರಿಸಿದರು.
ಶಿವಾಜಿಯನ್ನು ಕೇವಲ ಮರಾಠಾ ಎಂದು ನೋಡದೆ ನಮ್ಮ ರಕ್ಷಕರು ಎಂದು ನೋಡಬೇಕು. ಅವರು ಇಡೀ ದೇಶದ ಆಸ್ತಿ. ಅವರೊಬ್ಬ ಗ್ರೇಟ್ ಇಂಡಿಯನ್ ಎಂದು ಸತೀಶ್ ಜಾರಕಿಹೊಳಿ ಹೇಳಿದರು.