Thursday, October 16, 2025
Google search engine
Homeಜಿಲ್ಲಾರವಿ ಕೋಟಾರಗಸ್ತಿಗೆ ಚಂದ್ರಗಿರಿ ಮಹಾಜನ ಪ್ರಶಸ್ತಿ
spot_img

ರವಿ ಕೋಟಾರಗಸ್ತಿಗೆ ಚಂದ್ರಗಿರಿ ಮಹಾಜನ ಪ್ರಶಸ್ತಿ

ಬೆಳಗಾವಿ: ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕಾಸರಗೋಡು ಜಿಲ್ಲಾಮಟ್ಟದ ಏಳನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಬೆಳಗಾವಿಯ ಸಾಹಿತಿ ರವಿ ಕೋಟಾರಗಸ್ತಿ (ಎಸ್‌.ಸಿ.ಕೋಟಾರಗಸ್ತಿ) ಅವರಿಗೆ ಚಂದ್ರಗಿರಿ ಮಹಾಜನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

‘ಕರ್ನಾಟಕ–ಮಹಾರಾಷ್ಟ್ರದ ಗಡಿಭಾಗದ ಪರಿಸರದಲ್ಲೇ ಬೆಳೆದವನು ನಾ‌ನು. ಮೂರು ದಶಕಕ್ಕೂ ಅಧಿಕ ಕಾಲ ಬೆಳಗಾವಿಯಲ್ಲಿ ಸಲ್ಲಿಸಿದ ಸರ್ಕಾರಿ ಸೇವೆ ಹಾಗೂ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದಲ್ಲಿ ಮಾಡಿದ ಸಾಧನೆ ಪರಿಗಣಿಸಿ, ಕೇರಳದ ಗಡಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದು ಸಂತಸದ ವಿಚಾರ. ಇನ್ನೂ ಗಡಿಭಾಗದಲ್ಲಿ ಅದ್ದೂರಿಯಾಗಿ ಕನ್ನಡ ಕಾರ್ಯಕ್ರಮ ಆಯೋಜಿಸಿದ್ದು ಪ್ರಶಂಸನೀಯ’ ಎಂದು ರವಿ ಕೋಟಾರಗಸ್ತಿ ಹೇಳಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!