ಹುಕ್ಕೇರಿ: ಹುಕ್ಕೇರಿ ತಾಲೂಕಿನ ಅಬಕಾರಿ ಇಲಾಖೆ ನಿರೀಕ್ಷಕ ವಿಜಯಕುಮಾರ ಮೇಳವಂಕಿ ಯವರ ಪ್ರಯತ್ನದಿಂದ ಆಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 30 ಲೀಟರ ಕಳ್ಳ ಭಟ್ಟಿ ಸಾರಾಯಿ ಮತ್ತು ಸಾಗಟಕ್ಕೆ ಬಳಸಿದ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಹುಕ್ಕೇರಿ ತಾಲೂಕಿನ ಬಸ್ಸಾಪೂರ ಗ್ರಾಮದಿಂದ ದ್ವಿಚಕ್ರ ವಾಹನ ಮೇಲೆ ಸುಮಾರು 30 ಲೀಟರ ಕಳ್ಳಭಟ್ಟಿ ಸಾರಾಯಿಯನ್ನು ಮೋಟರ ಟ್ಯೂಬ ದಲ್ಲಿ ಸಾಗಿಸುವಾಗ ಕರಗುಪ್ಪಿ ಗ್ರಾಮದ ಹತ್ತಿರ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಗೋಕಾಕ ತಾಲೂಕಿನ ನೆಲಗಂಟೆ ಗ್ರಾಮದ ಬಸವರಾಜ ತಳವಾರ ಎಂಬುವವನ್ನು ಬಂಧಿಸಿ ಆತನಿಂದ ಸುಮಾರು 28 ಸಾವಿರ ರೂಪಾಯಿಯ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪ ನಿರಿಕ್ಷಕ ತೋರಪ್ಪ ಗಾರಡೆ, ಅಬಕಾರಿ ಇಲಾಖೆ ಸಿಬ್ಬಂದಿಗಳಾದ ಬಸಪ್ಪ ಉರಬಿನಟ್ಟಿ, ಮಂಜುನಾಥ ನೇಸರಗಿ, ಬಸನಗೌಡ ಪಾಟೀಲ, ಕಾಡೇಶಿ ಗಡದ, ಶಶಿಕಾಂತ ಉರಬಿನಟ್ಟಿ, ರಾಜು ಅಂಬಾರಿ ಭಾಗವಹಿಸಿ ಪ್ರಕರಣ ಧಾಖಲಿಸಿದ್ದಾರೆ.