ಬೆಳಗಾವಿ : ಇಂದಿನ ತಾಂತ್ರಾಜ್ಞಾನ ಯುಗಕ್ಕೆ ತಕ್ಕಂತೆ ಮಹಿಳೇಯರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ರಮೇಶ ಹೆಡಗೆ ಹೇಳಿದರು.
ಸ್ಥಳೀಯ ತಾಲ್ಲೂಕ ಪಂಚಾಯತ ಸಭಾ ಭವನದಲ್ಲಿ ಶನಿವಾರ (ಮಾ.8) ರಂದು ಜರುಗಿದ ವಿಶ್ವ ಮಹಿಳಾ ದಿನಾಚರಣೆ ಉದ್ದೇಶಿಸಿ ಅವರು ಮಾತನಾಡಿ ಅವರು ಇದು ಎಐ ಯುಗದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾವಣೆ, ಬೆಳವಣಿಗೆ ಎಂಬುದು ವರ್ಷದಿಂದ ವರ್ಷಕ್ಕೆ ಅಲ್ಲದೇ ದಿನದಿಂದ ದಿನಕ್ಕೆ ಬದಲಾವಣೆಗೆ ತಕ್ಕಂತೆ ತಾವು ಬದಲಾಗಬೇಕು ಎಂದು ಹೇಳಿದರು.
ಇದೆ ವೇಳೆ ಮಹಿಳಾ ತಾಲ್ಲೂಕ ಪಂಚಾಯತ ಸಿಬ್ಬದಿಗಳಿಗೆ, ನರೇಗಾ ಸಿಬ್ಬಂಧಿಗಳಿಗೆ ಹಾಗೂ ಎನ್ಆರ್ಎಲ್.ಎಂ ಸಿಬ್ಬಂಧಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಬಿ.ಡಿ ಕಡೇಮನಿ, ಪಿಡಿಒಗಳಾದ ರಾಜೇಂದ್ರ ಮೊರಬದ, ಶ್ರೀಧರ ಸರದಾರ, ಹರ್ಷವರ್ಧನ್ ಅಗಸರ, ಸ್ವೇತಾ ಡಿ.ಆರ್. ಎಚ್.ಎಸ್.ಪೋಳ, ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು ಹಾಗೂ ಗ್ರಾಮ ಪಂಚಾಯತಿ, ಎನ್ಆರ್ಎಲ್.ಎಂ ಸಿಬ್ಬಂದಿಗಳು ಹಾಜರಿದ್ದರು.