ಬೆಳಗಾವಿ : ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯ ಹುಚ್ಚಾಟ ಪ್ರೇಯಸಿಯನ್ನು ಕೊಂದು ತಾನೂ ಕೂಡ ಚಾಕುವಿನಿಂದ ಕುತ್ತಿಗೆ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಶಹಾಪುರದ ನಾವಿ ಗಲ್ಲಿಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ನಿವಾಸಿಯಾದ ಪ್ರಶಾಂತ್ ಯಲ್ಲಪ್ಪ ಕುಂಡೇಕರ(29) ಶಹಪೂರದ ನಾವಿ ಗಲ್ಲಿಯ ಐಶ್ವರ್ಯ ಮಹೇಶ್ ಲೋಹಾರ(18) ಎಂಬ ಯವತಿಯನ್ನು ಪ್ರೀತಿಸುತ್ತಿದ್ದ.
ಪಾಗಲ್ ಪ್ರೇಮಿಯು ಇಬ್ಬರ ನಡುವೆ ಇರುವ ಪ್ರೀತಿಯ ವಿಷಯವನ್ನು ಐಶ್ವರ್ಯ ಅವರ ತಾಯಿಗೆ ಹೇಳಿ ಮದುವೆ ಮಾಡಿಕೊಡಲು ಕೇಳಿದನ್ನು ಆಗ ಹುಡಗಿಯ ತಾಯಿಯು ಒಂದು ಒಳ್ಳೆಯ ಕೆಲಸವನ್ನು ಹಿಡಿದು ಜೀವನವನ್ನು ರೂಪಿಸಿಕೊಳ್ಳಲು ಬುದ್ಧಿವಾದ ಹೇಳಿದ್ದರಂತೆ.
ಇಂದು ಸಂಜೆ 5 ಗಂಟೆಗೆ ಚಿಕ್ಕಮ್ಮಳ ಮನೆಗೆ ಜೋಡಿಯಾಗಿ ಬಂದಿದ್ದು, ಮೊದಲು ಮನೆಗೆ ಬರುವಾಗಲೇ ವಿಷದ ಬಾಟಲ್ ತೆಗೆದುಕೊಂಡು ಬಂದಿದ್ದ ಪ್ರಶಾಂತ ಐಶ್ವರ್ಯಗೆ ಮದುವೆ ಪ್ರಸ್ತಾಪ ಮಾಡಿದ್ದಾನೆ ಅವಳು ಮದುವೆಗೆ ನಿರಾಕರಿಸಿದಾಗ ಅವಳಿಗೆ ಮೊದಲು ವಿಷ ಕುಡಿಸಲು ಯತ್ನಿಸಿದ್ದಾನೆ.
ಯಾವಾಗ ಪ್ರೇಯಸಿಯು ಕುಡಿಯಲು ನಿರಾಕರಿಸಿದ್ದಾಳೆ. ತನ್ನ ಜೇಬಿನಲ್ಲಿ ಇದ್ದ ಚಾಕುವಿನಿಂದ ಅವಳ ಕುತ್ತಿಗೆ ಚುಚ್ಚಿ ಹತ್ಯೆ ಮಾಡಿದ್ದಾನೆ.
ಅನಂತರ ತಾನೂ ಕೂಡ ಕುತ್ತಿಗೆ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಬೆಳಗಾವಿಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ.