ಬೆಳಗಾವಿ : ಕೆ ಎಸ್ ಆರ್ ಟಿ ಸಿ ಇಲಾಖೆಯ ಗೋಕಾಕ ಬಸ್ ಘಟಕದಿಂದ ಗೋಕಾಕಯಿಂದ ಸಾವಳಗಿ ಮಾರ್ಗವಾಗಿ ಹಳ್ಳಿಗಳಿಗೆ ಹೋಗಲು ಪ್ರಯಾಣಿಕರಿಗೆ ಹಳೆ ಬಸ್‌ಗಳನ್ನು ಬಿಡಲಾಗುತ್ತಿದ್ದು, ಬಸಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರು ತಮ್ಮ ಪ್ರಾಣವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವಂತ ಪರಿಸ್ಥಿತಿ ಎದುರಾಗಿದೆ.
ಫೆಬ್ರುವರಿ ೧೨ ರಂದು ಇಂದು ಮುಂಜಾನೆ ಸುಮಾರು ೮ ಗಂಟೆಗಳ ಸಮಯದಲ್ಲಿ ಗೋಕಾಕ ಸಾವಳಗಿ ಬಸ್ ಗೋಕಾಕ ಹೊರ ವಲಯದಲ್ಲಿ ಎಕ್ಸೆಲ್ ಪಾಟ ಕಟ್ ಆಗಿ ರಸ್ತೆ ಬಿಟ್ಟು ಹೊಲ ಗದ್ದೆಗೆ ಬಸ್ ನುಗ್ಗಿದೆ ಚಾಲಕನ ಸಮಯ ಪ್ರಜ್ಞೆಯಿಂದ ಬಸನಲ್ಲಿ ಇದ್ದ 60 ಜನರಿಗೂ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ಕೆಟ್ಟು ನಿಲ್ಲುವ ಬಸ್‌ಗಳಿಂದ ವಿದ್ಯಾರ್ಥಿಗಳು, ಪಟ್ಟಣಕ್ಕೆ ಬರುವ ಪ್ರಯಾಣಿಕರು ಹೈರಾಣಾಗಿದ್ದಾರೆ. ಇನ್ನೂ ತಾಲ್ಲೂಕಿನ ಭಾಗದ ಹಳ್ಳಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಯೇ ಇಲ್ಲದಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.