ಬೆಳಗಾವಿ: ಬೆಳಗಾವಿಯಲ್ಲಿ ಟ್ರಾಫಿಕ್ ಪೊಲೀಸರು ವಿನೂತನವಾಗಿ ಹೆಲ್ಮೆಟ್ ಜಾಗೃತಿ ಅಭಿಯಾನ ಕೈಗೊಂಡಿದ್ದು, ಎಲ್ಲಾ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರು ಎಚ್ಚರಿಕೆ ನೀಡಿದ್ದಾರೆ.
ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಪ್ರಾಜೆಕ್ಟ್ ಹೆಲ್ಮೆಟ್ ಕಾರ್ಯಕ್ರಮ ಆರಂಭಿಸಲಾಗಿದೆ.
ಇದರಲ್ಲಿ ಮೊದಲನೆಯದಾಗಿ ಪೊಲೀಸ್ ಅಧಿಕಾರಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಪ್ರಾಜೆಕ್ಟ್ ಹೆಲ್ಮೆಟ್ ಅಭಿಯಾನದಲ್ಲಿ ಮೊದಲು ಪೊಲೀಸ್ ಅಧಿಕಾರಿಗಳ ಮೇಲೆ 6 ಕೇಸ್ ಹಾಕಲಾಗಿದೆ. ಮುಂದೆ ಸರ್ಕಾರಿ ಕಚೇರಿಗಳ ಮುಂದೆ ಹೆಲ್ಮೆಟ್ ಜಾಗೃತಿ ಮಾಡಲಿದ್ದೇವೆ.
ಮಾರ್ಚ್ ಅಂತ್ಯದಲ್ಲಿ ಸುಮಾರು 90% ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬುವುದು ನಮ್ಮ ಗುರಿಯಾಗಿದೆ.
ಈ ವೇಳೆ ಹೆಲ್ಮೆಟ್ ಹಾಕದೆ ಬೈಕ್ ಓಡಿಸುವ ಅಧಿಕಾರಿಗಳ ಮೇಲೆಯೂ ಕೇಸ್ ಹಾಕಲಿದ್ದೇವೆ. ಬಳಿಕ ಕಾಲೇಜುಗಳ ಮುಂದೆ ಹೆಲ್ಮೆಟ್ ಜಾಗೃತಿ ಮೂಡಿಸಲಿದ್ದೇವೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದು ಕರೆ ನೀಡಿದರು.