Tuesday, April 29, 2025
Google search engine
Homeಅಂಕಣವಿಜಯ ಕರ್ನಾಟಕ ಬೆಳಗಾವಿ ಆವೃತ್ತಿಯ ಕಿರಿಯ ಸಹಾಯಕ ಸಂಪಾದಕ ಗಜಾನನ ಹೆಗಡೆ ಬೆಟ್ಟೆಣ್ಣೆ ಅವರಿಗೆ ಕೆಯುಡಬ್ಲುಜೆ...
spot_img

ವಿಜಯ ಕರ್ನಾಟಕ ಬೆಳಗಾವಿ ಆವೃತ್ತಿಯ ಕಿರಿಯ ಸಹಾಯಕ ಸಂಪಾದಕ ಗಜಾನನ ಹೆಗಡೆ ಬೆಟ್ಟೆಣ್ಣೆ ಅವರಿಗೆ ಕೆಯುಡಬ್ಲುಜೆ ಪ್ರಶಸ್ತಿ

ಬೆಳಗಾವಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಅಭಿಮಾನಿ ಪ್ರಕಾಶನ ಪ್ರಶಸ್ತಿಗೆ ವಿಜಯ ಕರ್ನಾಟಕ ಬೆಳಗಾವಿ ಆವೃತ್ತಿಯ ಕಿರಿಯ ಸಹಾಯಕ ಸಂಪಾದಕ ಗಜಾನನ ಹೆಗಡೆ ಭಾಜನರಾಗಿದ್ದಾರೆ.

ಕಳೆದ 9 ವರ್ಷಗಳಿಂದ ವಿಜಯ ಕರ್ನಾಟಕ ಸಂಪಾದಕೀಯ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಟ್ಟಣ್ಣೆಮನೆ ನಿವಾಸಿ. ಕೃಷಿ ವಿಷಯಗಳಲ್ಲಿ ಆಸಕ್ತರಾಗಿದ್ದು 120ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ.

ಕೃಷಿ ಸಂಬಂಧಿತ ಬರಹಗಳ ಮೂಲಕ ಅವರು ನಾಡಿನಲ್ಲೇ ಪರಿಚಿತರಾಗಿದ್ದಾರೆ. ಈ ಮೊದಲು ವಿಜಯವಾಣಿ ಮತ್ತು ಕನ್ನಡ ಪ್ರಭ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಅವರು ಈ ಮೊದಲು ಬೆಳಗಾವಿಯ ಸಾರ್ವಜನಿಕ ಗ್ರಂಥಾಲಯ ಕೊಡಮಾಡುವ ಗ.ಗೋ.ರಾಜ್ಯಾಧ್ಯಕ್ಷ ಪ್ರಶಸ್ತಿ ಹಾಗೂ ಎಚ್ಐವಿ ಬಗ್ಗೆ ಜಾಗೃತಿ ಮೂಡಿಸುವ ಲೇಖನಕ್ಕೆ ಸಿಡಿಎಲ್ – ಯುನಿಸೆಫ್ ಕೊಡ ಮಾಡುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!