ವರದಿಗಾರರು: ತುಕಾರಾಂ ಮದಲೆ
ರಾಯಬಾಗ: ರಾಯಬಾಗ ತಾಲೂಕಿನ ರಾಯಬಾಗ ರೈಲ್ವೇ ಸ್ಟೇಷನ್ ಪಕ್ಕದಲ್ಲಿ ಕಳೆದ 20 ವರ್ಷಗಳಿಂದ ಒಂದು ಜಾಗದಲ್ಲಿ ವಾಸ ಮಾಡುತ್ತಿರುವ ಬಡ ಕುಟುಂಬಗಳ ಗೋಳು ಕೇಳುವರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ..?
ಪಡಿತರ ಚೀಟಿ, ಆಧಾರ್ ಕಾರ್ಡ್ ಚುನಾವಣೆ ಗುರುತಿನ ಚೀಟಿ ಎಲ್ಲವೂ ನಿಡಗುಂದಿ ಗ್ರಾಮ ಪಂಚಾಯತಿಯ ರಾಯಬಾಗ ರೈಲ್ವೇ ಸ್ಟೇಷನನಲ್ಲಿ ಇದ್ದು ಖಾಲಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದ ಜನರು ಜಾಗದ ಬಾಡಿಗೆ ಸಹ ಕೊಡುತ್ತಿದ್ದ ಕುಟುಂಬಗಳು ಏಕಾ ಏಕಿ ಗುಡಿಸಲು ತೆರವುಗೊಳಿಸಿದ ಜಾಗದ ಮಾಲಿಕ.
ಕಳೆದ ಬೆಳಗಾವಿ ವಿಧಾನ ಸಭೆಯ ಅಧಿವೇಶನದಲ್ಲಿ ಈ ಎಲ್ಲಾ ಕುಟುಂಬಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಭೇಟಿಯಾಗಿ ನಮಗೆ ಪಡಿತರ ಚೀಟಿ, ಆಧಾರ್ ಕಾರ್ಡ್ ಚುನಾವಣೆ ಗುರುತಿನ ಚೀಟಿ ಎಲ್ಲವೂ ಇವೆ ಆದರೆ ಇರೋದಕ್ಕೆ ಮನೆ ಇಲ್ಲ ದಯವಿಟ್ಟು ಸೂಕ್ತ ಸ್ಥಳ ನೀಡಿ ಮನೆ ನಿರ್ಮಿಸಿ ಕೊಡಿ ಎಂದು ಕೇಳಿಕೊಂಡಿದ್ದಾರೆ…
ಆದರೆ ಜಾಗದ ಮಾಲೀಕ ತನ್ನದೇ ಜಾಗದಲ್ಲಿ ಸರ್ಕಾರಕ್ಕೆ ಮನೆ ನಿರ್ಮಿಸಿ ಕೊಡಿ ಎಂದು ಕೊಟ್ಟಿದ್ದಾರೆ ಎಂದು ಆಕ್ರೋಶ ಹೋರ ಹಾಕಿ 20 ಕ್ಕೂ ಕುಟುಂಬಗಳನ್ನು ತೆರವು ಗೊಳಿಸಿದ್ದಾರೆ ಇದರಿಂದ ಇವರು ಬೀದಿಗೆ ಬಿದ್ದಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ತಹಶೀಲ್ದಾರ್ ಗ್ರಾಮ ಪಂಚಾಯತಿಯ ಪಿಡಿಒ,ಗ್ರಾಮ ಲೆಕ್ಕಾಧಿಕಾರಿ,ಕಂದಾಯ ಸಚಿವರು, ಈ ಬಡ ಕುಟುಂಬಗಳಿಗೆ ಆಸರೆ ಎನ್ನುವ ಭಾಗ್ಯ ಯಾವಾಗ್ ಕರುಣಿಸುತ್ತೀರಾ ಎಂದು ಸಂತ್ರಸ್ಥರು ಎರಡು ಕೈ ಚಾಚಿ ಕೇಳಿಕೊಳ್ಳುತ್ತಿದ್ದಾರೆ..
ಆಸರೆ ಭಾಗ್ಯ ಪಡೆಯುವುದು ಅವರ ಹಕ್ಕು ಬೀದಿಗೆ ಬಿದ್ದ ಕುಟುಂಬಗಳಿಗೆ ಅಣ್ಣ ಭಾಗ್ಯ ಸೇರಿದಂತೆ ಇತರೆ ಗ್ಯಾರಂಟಿ ಭಾಗ್ಯದ ಜೊತೆಗೆ ಆಸರೆ ಭಾಗ್ಯ ಕೊಡಿ ಸರ್… ಎನ್ನುವುದು ಈ ನಿರ್ಗತಿಕ ನಿರಾಶ್ರಿತರ ಕೊರಗು ಆಗಿದೆ.
ಈ ನಿರಾಶ್ರಿತರ ಕೂಗೂ ಕೇಳಿ ಸರ್ಕಾರ ಇವರಿಗೆ ಆಸರೆ ಭಾಗ್ಯ ನೀಡುವರಾ ಕಾಯ್ದು ನೋಡಬೇಕಾಗಿದೆ.