ಬಿಜೆಪಿ ವರಿಷ್ಠರು ಗುರ್ತಿಸಿದ ಪಕ್ಷದ ನಿಷ್ಠಾವಂತ ಕಾರ್ಯಕರ್ತ..
ಪಕ್ಷದ ಹೊಸ ಜವಾಬ್ದಾರಿ ಹೊತ್ತ ನಗರ ಸೇವಕ ಜಯತೀರ್ಥ ಸವದತ್ತಿ..
ಬೆಳಗಾವಿ : ಪಾಲಿಕೆಯ ವಾರ್ಡ್ ಸಂಖ್ಯೆ 4ರ ನಗರಸೇವಕರಾದ ಬಿಜೆಪಿಯ ಜಯತೀರ್ಥ ಸವದತ್ತಿ ಅವರು ಈಗಾಗಲೇ ಪಕ್ಷದ ಸಂಘಟನೆ ಹಾಗೂ ಪ್ರಚಾರದಲ್ಲಿ ಸದಾ ಕ್ರಿಯಾಶೀಲರಾಗಿದ್ದು, ನಗರ ಸೇವಕರಾಗಿಯೂ ತಮ್ಮ ಉತ್ತಮ ಕಾರ್ಯದ ಮೂಲಕ ಜನಸೇವೆಗೆ ಹಾಗೂ ಅಭಿವೃದ್ಧಿಗೆ ಹೆಸರಾಗಿದ್ದಾರೆ.
ಇಂತಹ ಜನಪರ, ಪಕ್ಷನಿಷ್ಠೆಯ ಹಾಗೂ ಬಹುಮುಖ ವ್ಯಕ್ತಿತ್ವದ ಜಯತೀರ್ಥ ಸವದತ್ತಿ ಅವರನ್ನು ಪಕ್ಷದ ವರಿಷ್ಠರು ಗುರ್ತಿಸಿ ಈಗ ಹೊಸದೊಂದು ಜವಾಬ್ದಾರಿಯನ್ನು ನೀಡಿದ್ದು ಸಂತಸದ ಸಂಗತಿಯಾಗಿದೆ.
ಮೊನ್ನೆ ದಿನಾಂಕ 12/07/2024 ರಂದು ಬೆಂಗಳೂರಿನ ಬಿಜೆಪಿ ಪಕ್ಷದ ಕಚೇರಿಯಲ್ಲಿ, ಬಿಜೆಪಿಯ ನಗರಾಡಳಿತ ಪ್ರಕೋಷ್ಟದ ರಾಜ್ಯ ಸಂಚಾಲಕರಾದ ಎಂ ಕೆ ಗುಣಶೇಖರ್
ಅವರು, ಬೆಳಗಾವಿಯ ಬಿಜೆಪಿ ನಗರ ಸೇವಕರಾದ ಜಯತೀರ್ಥ ಸವದತ್ತಿ ಅವರಿಗೆ ಬಿಜೆಪಿಯ “ನಗರಾಡಳಿತ ಪ್ರಕೋಷ್ಟದ ರಾಜ್ಯ ಸಮಿತಿಯ ಸದಸ್ಯರನ್ನಾಗಿ” ಆಯ್ಕೆ ಮಾಡಿ ಆದೇಶ ಪತ್ರ ನೀಡಿದ್ದಾರೆ..
ಇದೇ ವೇಳೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಉಪಸ್ಥಿತರಿದ್ದು, ಜಯತೀರ್ಥ ಸವದತ್ತಿ ಅವರಿಗೆ ಅಭಿನಂದಿಸಿ, ಪಕ್ಷ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ, ಪಕ್ಷದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ತಮ್ಮಿಂದಾಗಲಿ ಎಂದು ಕಿವಿಮಾತು ಹೇಳಿದ್ದಾರೆ..
ವರದಿ ಪ್ರಕಾಶ ಬಸಪ್ಪ ಕುರಗುಂದ..