ಡಾ ಸೋನಾಲಿ ಸರ್ನೋಬತ್ ಅವರನ್ನು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ..
ಬೆಳಗಾವಿ : ನಗರದ ಪ್ರಸಿದ್ಧ ವೈದ್ಯೆ, ರಾಜಕೀಯ ಕಾರ್ಯಕರ್ತೆ, ಸಮಾಜ ಸೇವಕಿ ಹಾಗೂ ಲೋಕೋಪಕಾರಿಯಾದ ಡಾ. ಸೋನಾಲಿ ಸರ್ನೊಬತ್ ಅವರು ಸಾಮಾಜಿಕ ಸೇವಾ ರಂಗದಲ್ಲಿ ಮೊದಲಿನಿಂದಲೂ ಹೆಸರುವಾಸಿಯಾಗಿದ್ದಾರೆ..
ಸಮಾಜದ ತಳಮಟ್ಟದಿಂದ ಕೆಲಸ ಮಾಡುತ್ತಾ, ಬಡ ನಿರ್ಗತಿಕ ಜನರಿಗೆ ಸಹಕಾರ ಮಾಡುತ್ತಾ ಬಂದಿರುತ್ತಾರೆ, ಅದೇ ರೀತಿ ತಮ್ಮ ಸಂಸ್ಥೆಗಳಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವರು..
ಬಿಜೆಪಿ ಪಕ್ಷದಲಿಯೂ ಅವರು ಕ್ರಿಯಾಶೀಲ ಕಾರ್ಯಕರ್ತರಾಗಿ ಗುರ್ತಿಸಿಕೊಂಡು, ಪಕ್ಷ ಸಂಘಟನೆ ಹಾಗೂ ಪಕ್ಷದ ಸಿದ್ಧಾಂತಗಳನ್ನು ಸಾರ್ವಜನಿಕರಲ್ಲಿ ಮೂಡಿಸುವಲ್ಲಿ ನಿರಂತರ ಪ್ರಯತ್ನ ಮಾಡಿರುತ್ತಾರೆ.
ಇದರ ಫಲವಾಗಿಯೇ ಇಂದು ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ ಅವರು, ಸೋನಾಲಿ ಸರ್ನೊಬತ್ ಅವರನ್ನು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ.
ಈ ಹೊಸ ಜವಾಬ್ದಾರಿಯ ಕುರಿತಾಗಿ, ಡಾ ಸೋನಾಲಿ ಸರ್ನೊಬತ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ, ರಾಜ್ಯ ಮಹಿಳಾ ಮೋರ್ಚಾ ಬಿಜೆಪಿ ಅಧ್ಯಕ್ಷೆ ಸಿ.ಮಂಜುಳಾ, ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ್ ಪಾಟೀಲ್ ಹಾಗೂ ಬೆಳಗಾವಿ ಬಿಜೆಪಿಯ ಎಲ್ಲಾ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರಿಗೆ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..