Tuesday, December 24, 2024
Google search engine
Homeಸಂಪಾದಕೀಯಜು.18 ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವ..

ಜು.18 ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವ..

ಜು.18 ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವ..

ಕುಲಪತಿ, ಡಾ.ಎಸ್.ವಿದ್ಯಾಶಂಕರ..

ಬೆಳಗಾವಿ : ಜು.15: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವವು ಜು.18 ರಂದು ಜ್ಚಾನ ಸಂಗಮ ಆವರಣದ ಎ.ಪಿ.ಜಿ. ಅಬ್ದುಲ ಕಲಾಂ ಸಭಾಂಗಣದಲ್ಲಿ ಮುಂಜಾನೆ 11.30 ಗಂಟೆಗೆ ಆಯೋಜಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ ಅವರು ತಿಳಿಸಿದರು.

ವಿಶ್ವವಿದ್ಯಾಲಯ ಅವರಣದ ಸೆನೆಟ್ ಸಭಾಂಗಣದಲ್ಲಿ ಸೋಮವಾರ (ಜು.15) ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜು.18 ರಂದು ಜರುಗಲಿರುವ 24ನೇ ಘಟಿಕೊತ್ಸವದ ಅಧ್ಯಕ್ಷತೆಯನ್ನು ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೊಟ್ ಅವರು ವಹಿಸುವರು. ಭಾರತೀಯ ವಿಜ್ಣಾನ ಮಂದಿರ (ಐ.ಐ.ಎಸ್ಸಿ) ನಿರ್ದೆಶಕರಾದ ಪ್ರೋ.ಗೋವಿಂದನ್ ರಂಗರಾಜನ್ ಅವರು ಘಟಿಕೋತ್ಸವದ ಭಾಷಣ ಮಾಡುವರು.

ಚಿಕ್ಕಬಳ್ಳಾಪುರದ ಶ್ರೀ ಮಧುಸೂಧನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಮಧುಸೂಧನ್ ಸಾಯಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ಸೊಮನಾಥ್, ಬೆಂಗಳೂರ ಇಂಟರನ್ಯಾಷನಲ್ ಏರ್ ಪೋರ್ಟ ಲಿ.ವ್ಯವಸ್ಥಾಪನಾ ನಿರ್ದೆಶಕರು ಹಾಗೂ ಸಿ.ಜ.ಓ ಆದ ಹರಿ ಕೆ ಮರಾರ್ ಅವರುಗಳಿಗೆ ಡಾಕ್ಟರ್ ಆಫ್ ಸೈನ್ಸ ಗೌರವ ಪದವಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ವಿಶ್ವವಿದ್ಯಾಲಯದ 24ನೇ ವಾರ್ಷಿಕ ಘಟಿಕೋತ್ಸವದ ಸಂದರ್ಭದಲ್ಲಿ ಬಿ.ಇ/ಬಿ.ಟೆಕ್ ವಿಭಾಗದಲ್ಲಿ ಅಟೋನೋಮಸ್ ಸೇರಿದಂತೆ 51,129 ವಿಧ್ಯಾರ್ಥಿಗಳಿಗೆ, ಬಿ.ಪ್ಲಾನ ವಿಭಾಗದಲ್ಲಿ 08, ಬಿ.ಆರ್ಚ ವಿಭಾಗದಲ್ಲಿ ಅಟಾನೋಮಸ್ ಸೇರಿದಂತೆ 1,138 ವಿಧ್ಯಾರ್ಥಿಗಳಿಗೆ ಹಾಗೂ ಸಂಶೋಧನಾ ವಿಭಾಗದಲ್ಲಿ 340 ಪದವಿಗಳನ್ನು ವಿತರಿಸಲಾಗುವದು.

ಚಿನ್ನದ ಪದಕ ವಿಜೇತರು:

ಬೆಳಗಾವಿಯ ಕೆ.ಎಲ್.ಇ. ಡಾ. ಎಂ.ಎಸ್ ಶೇಷಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಾಜಿ ಕಾಲೇಜಿನ ವಿಧ್ಯಾರ್ಥಿ ಸಾಹಿಲ್ ಎಂ. ಸೋಮನಾಚೆ ಅವರಿಗೆ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 12 ಚಿನ್ನದ ಪದಕ, ಬೆಂಗಳೂರಿನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಜಿ.ವಿಷ್ಣು ಪ್ರಿಯಾ ಅವರಿಗೆ ಕಂಪ್ಯೂಟರ ಸೈನ್ಸ ಮತ್ತಿ ಇಂಜಿನಿಯರಿಂಗ್ ವಿಭಾಗದಲ್ಲಿ 10, ಬೆಂಗಳೂರಿನ ಎಸ್.ಜೆ.ಬಿ. ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಾಜಿ ಕಾಲೇಜಿನ ರೇಷ್ಮಾ ಜಿ. ಅವರಿಗೆ ಎಲೆಕ್ಟಾçನಿಕ್ಸ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ 7, ಬೆಂಗಳೂರಿನ ಎಸ್.ಜೆ.ಬಿ. ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಾಜಿ ಕಾಲೇಜಿನ ಮೋಹನಕುಮಾರ ಎಲ್ ಅವರಿಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ 7, ಬಳ್ಳಾರಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಹೃತಿಕಾ ಜಿ. ಅವರಿಗೆ ಎಲೆಕ್ಟಿçಕಲ್ಸ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ 7, ಬೆಂಗಳೂರಿನ ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಕೃತಿಕಾ ಸೆಂಥಿಲ್ ಅವರಿಗೆ ಮಾಹಿತಿ ವಿಜ್ಞಾನ ಮತ್ತು ವಿಂಜಿನಿಯರಿಂಗ ವಿಭಾಗದಲ್ಲಿ 4, ಬೆಂಗಳೂರಿನ ಆರ್.ಎನ್.ಎಸ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಅನುಶ್ರೀ ಪಿ ಅವರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್ ವಿಭಾಗದಲ್ಲಿ 4, ಕೆ.ಜಿ.ಎಫ್. ನ ಡಾ.ಟಿ.ತಿಮ್ಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಮಾಲತೇಶ ಎನ್ ಅವರಿಗೆ ಮೈನಿಂಗ್ ಇಂಜನಿಯರಿಂಗ್ ವಿಭಾಗದಲ್ಲಿ 2, ದಾವಣೆಗೆರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಜನನಿ ಡಿ ಅವರಿಗೆ ಬಯೋ-ಟೆಕ್ನಾಲಾಜಿ ಇಂಜಿನಿಯರಿಂಗ್ ವಿಭಾಗದಲ್ಲಿ 2 ಹಾಗೂ ಮಂಗಳೂರಿನ ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಸೌರವ ವಿ.ಇಂಗಲ್ ಅವರಿಗೆ 2 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವದು ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ 24ನೇ ವಾರ್ಷಿಕ ಘಟಿಕೋತ್ಸವವನ್ನು ಬೇಗನೆ ಜರುಗಿಸಿ ವಿದ್ಯಾರ್ಥಿಗಳಿಗೆ ಶೀಘ್ರವೇ ಪ್ರಮಾಣ ಪತ್ರಗಳನ್ನು ವಿತರಿಸಲು ಕ್ರಮ ಜರುಗಿಸಲಾಗುತ್ತಿದೆ.
ಪರೀಕ್ಷೆಗಳು ಜರುಗಿ ಮೂರು ಗಂಟೆಯೊಳಗೆ ವಿಶ್ವವಿದ್ಯಾಲಯದ ಪರೀಕ್ಷಾ ಫಲಿತಾಂಶ ನೀಡಿರುವದು ದೇಶದಲ್ಲಿಯೇ ಪ್ರಥಮ. ಇದೇ ರೀತಿ ಇನ್ನೂ ಹೆಚ್ಚಿನ ಬದಲಾವಣೆಗಳನ್ನು ತರಲು ಪ್ರಯತ್ನಿಸಲಾಗುತ್ತಿದೆ. ವಿಧ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಅನುಕೂಲವಾಗಲು ಮುಂದಿನ ದಿನಗಳಲ್ಲಿ ಅಮೇರಿಕಾದ ಸುಮಾರು ಐವತ್ತು ಕಂಪನಿಗಳನ್ನು ಕ್ಯಾಂಪಸ್ ಒಳಗೆ ತರಲು ಪ್ರತ್ನಿಸಲಾಗುತ್ತಿದ್ದು ಜೊತೆಗೆ ಅನೇಕ ಕಂಪನಿಗಳ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವದೇ ಈ ವಿಶ್ವವಿದ್ಯಾಲಯದ ಧ್ಯೇಯವಾಗಿದ್ದು ಆ ನಿಟ್ಟಿನಲ್ಲಿ ವಿಶ್ವಿವಿದ್ಯಾಲಯದಲ್ಲಿ ಇನ್ನೂ ಹಲವಾರು ಮಹತ್ತರ ಬದಲಾವಣೆಗಳನ್ನು ತರುವ ನಿಟ್ಟಿನಲ್ಕಿ ಪ್ರಯತ್ನಿಸಲಾಗುತ್ತಿದೆ ಎಂದು ಕುಲಪತಿಗಳಾದ ಡಾ.ಎಸ್. ವಿದ್ಯಾಶಂಕರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಟಿ.ಎಸ್.ಶ್ರೀನಿವಾಸ, ಪ್ರೊ.ಬಿ.ಇ.ರಂಗಸ್ವಾಮಿ ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular

error: Content is protected !!