ಶಾಸಕ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾದ ಕಾಂಗ್ರೆಸ್ಸಿನ ನಿಗಮ ಮಂಡಳಿ ಅಧ್ಯಕ್ಷೆ..

0
37

ಶಾಸಕ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾದ ಕಾಂಗ್ರೆಸ್ಸಿನ ನಿಗಮ ಮಂಡಳಿ ಅಧ್ಯಕ್ಷೆ..

ಬೆಳಗಾವಿ : ಶನಿವಾರ ದಿನಾಂಕ 13/07/2024ರಂದು ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾದ ಪಲ್ಲವಿ ಜಿ ಅವರು ಬೆಳಗಾವಿಯ ಪ್ರಭಾವಿ ರಾಜಕಾರಣಿ, ಶಾಸಕ ರಮೇಶ ಜಾರಕಿಹೊಳಿ ಅವರನ್ನು ಬೇಟಿ ಮಾಡಿ ಮಾತುಕತೆ ನಡೆಸಿದ್ದಾರೆ..

ನಿಗಮದ ಅಧ್ಯಕ್ಷೆಯವರು ನಿಗಮದ ಕಾರ್ಯ, ಯೋಜನೆಗಳಿಗಾಗಿ ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿದ್ದು, ಇಂದು ಮುಂಜಾನೆ ಸುದ್ದಿಗೋಷ್ಠಿಯನ್ನು ಕೂಡಾ ನಡೆಸಿದ್ದು ನಂತರ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ,  ಅಲೆಮಾರಿ ಸಮುದಾಯ ಕೆಲ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದರು..

ಈ ನಡುವೆ ಸ್ಥಳೀಯ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಬೇಟಿ ಆಗಿ ಮಾತನಾಡಲು ಪ್ರವಾಸಿ ಮಂದಿರಕ್ಕೆ  ಶಾಸಕ ರಮೇಶ ಜಾರಕಿಹೊಳಿ ಆಗಮಿಸಿದ್ದರು, ಅವರು ಆಗಮಿಸಿದ ಸುದ್ದಿ ತಿಳಿದ  ನಿಗಮ ಮಂಡಳಿ ಅಧ್ಯಕ್ಷೆಯವರು ಕೆಳಗೆ ಬಂದು ಸಹಜವಾಗಿ ಬೇಟಿ ಆಗಿ, ಜಿಲ್ಲೆಯಲ್ಲಿ ತಮ್ಮ ನಿಗಮದ ಕುರಿತಾಗಿ ನಡೆಸುತ್ತಿರುವ ಕ್ರಿಯಾಯೋಜನೆಗಳ ಬಗ್ಗೆ ಮಾತನಾಡಿದ್ದಾರೆ..

ಶಾಸಕರು ಕೂಡಾ ಆತ್ಮೀಯತೆಯಿಂದ ಮಾತನಾಡಿ, ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ, ಮೊದಲು ಒಂದೇ ಪಕ್ಷದಲ್ಲಿ ಇದ್ದಿರುವ ಕಾರಣಕ್ಕೆ ಆತ್ಮೀಯತೆಗೆ ಇಬ್ಬರೂ ಮಹನೀಯರು ಉಭಯ ಕುಶಲೋಪರಿ ವಿಚಾರಿಸುತ್ತಾ, ಈ ಆಕಸ್ಮಿಕ ಬೇಟಿಯಿಂದ ಖುಷಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..

 

LEAVE A REPLY

Please enter your comment!
Please enter your name here