ಬೆಳಗಾವಿ: ಇಂದು ದಿನಾಂಕ 15/04/2024 ರಂದು ಶ್ರೀ ಮಚ್ಚೇಂದ್ರ ವಿಠ್ಠಲ ಶಿಂದೆ ಸಾಕೀನ : ಮಾರೋಳೆ ತಾಲೂಕ ಮಂಗಳವಾಡ ಜಿಲ್ಲೆ ಸೋಲಾಪೋರ ಮಹಾರಾಷ್ಟ್ರ ಇವರು ಮುಚ್ಚಂಡಿಯಿಂದ ಬೆಳಗಾವಿ ಗೆ ವಾಹನ ಸಂಖ್ಯೆ : KA 25 MA 7731 ನೇದ್ದರ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಣಬರ್ಗಿ ಚಕ್ಕ್ ಪೋಸ್ಟ್ ನಲ್ಲಿ ದಾಖಲಾತಿ ಇಲ್ಲದೇ ಇರುವ 200000/- ಎರಡು ಲಕ್ಷ ರೂಪಾಯಿಗಳನ್ನು ಕಣಬರ್ಗಿ ಚಕ್ಕ್ ಪೋಸ್ಟ್ SST ಮುಖ್ಯಸ್ಥ ಶ್ರೀ ಹರ್ಷವರ್ಧನ್ ಅಗಸರ ಮತ್ತು ಮಾಳಮಾರುತಿ ಪೋಲಿಸ್ ಠಾಣೆಯ ಸಿಬ್ಬಂದಿ ಮಾರುತಿ ಮಾದರ ಇವರು ವಶ ಪಡಿಸಿಕೊಂಡಿರುತ್ತಾರೆ.
ಸೂಕ್ತ ದಾಖಲೆಗಳನ್ನು ನೀಡಿ ಹಣ ಪಡೆದುಕೊಳ್ಳಬಹುದು. ಇಲ್ಲವಾದರೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.