ಕುಡಚಿ: ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಆರಪಿಎಫ ತುಕಡಿಯೊಂದಿಗೆ ಪಥಸಂಚಲನ ನಡೆಸಲಾಯಿತು.
ಪಟ್ಟಣದ ಪೊಲೀಸ್ ಠಾಣೆಯಿಂದ ಮಾಸಾಹೇಬಾ ವೃತ್ತ, ಕರ್ನಾಟಕ ವೃತ್ತ, ರೈಲು ನಿಲ್ದಾಣ, ದೌ ಹೊಟೇಲ್,ಬಜಾರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪೊಲೀಸ್ ಠಾಣೆಗೆ ಹೆಜ್ಜೆ ಹಾಕಿದರು.
ಸುಮಾರು 50ಜನ ಸಿಆರಪಿಎಫ್ ತುಕಡಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಕುಡಚಿ ಪಿಎಸ್ಐ ಮಾಳಪ್ಪ ಪೂಜೇರಿ, ಹಾರೂಗೇರಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ, ಕುಡಚಿ ತನಿಖಾ ಪಿಎಸ್ಐ ಕಲ್ಮೇಶ್ವರ ಬನ್ನೂರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.