IPL 2024: ವಿರಾಟ್ ಕೊಹ್ಲಿ ಯಾವಾಗ ಕ್ರಿಕೆಟ್‌ಗೆ ಮರಳುತ್ತಾರೆ? ನೀವು ಐಪಿಎಲ್‌ನಲ್ಲಿ ಆಡುತ್ತೀರಾ? ಅಥವಾ ಐಪಿಎಲ್‌ನಿಂದ ದೂರವಾಗಿರಬೇಕು? ಈ ಪ್ರಶ್ನೆಗಳು ಕಳೆದ ಹಲವು ದಿನಗಳಿಂದ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಆದರೆ ಈಗ ಇದರ ಬಗ್ಗೆ ಒಂದು ಸ್ಪಷ್ಟನೆ ದೊರಕಿದಂತಾಗಿದೆ.
ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಕ್ರಿಕೆಟ್ ನಿಂದ ದೂರವಾಗಿ ಬಹಳ ದಿನಗಳಾಗಿವೆ. ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಸಂಪೂರ್ಣ ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದರು. ನಂತರ ಅವರು ಇನ್ನೂ ಕ್ರಿಕೆಟ್‌ಗೆ ಮರಳಲಿಲ್ಲ. ಆದರೆ ಇದೀಗ ಕೆಲ ದಿನಗಳಲ್ಲಿ ಅವರು ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ.
ಕೊಹ್ಲಿ ತಮ್ಮ ಎರಡನೇ ಮಗುವಿನ ಜನನದ ಸಮಯದಲ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಇರಲು ಭಾರತ ತಂಡದಿಂದ ರಜೆ ತೆಗೆದುಕೊಂಡರು. ನಂತರ ವಿರಾಟ್-ಅನುಷ್ಕಾ ಜೋಡಿಗೆ ಗಂಡು ಮಗುವಾಯಿತು. ಇದೇ ಕಾರಣದಿಂದ ಅವರು ಕ್ರಿಕೆಟ್ ನಿಂದ ದೂರವಾಗಿದ್ದರು. ಆದರೆ ಇದೀಗ ಅವರು ಐಪಿಎಲ್ ಮೂಲಕ ಮರಳಲಿದ್ದಾರೆ.
ಹೌದು, ವಿರಾಟ್ ಕೊಹ್ಲಿ ಅವರ ಐಪಿಎಲ್ ಫ್ರಾಂಚೈಸಿಯಾದ ಆರ್‌ಸಿಬಿ ಈ ಬಗ್ಗೆ ಮಾಹಿತಿ ನೀಡಿದ್ದು, ಟೂರ್ನಿಯ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ತಯಾರಿ ಶಿಬಿರವನ್ನು ಸೇರಿಕೊಳ್ಳಲಿದ್ದಾರೆ ಎಂದು ಆರ್‌ಸಿಬಿ ಮೂಲಗಳು ತಿಳಿಸಿವೆ. ಈ ಸುದ್ದಿ ಹೊರಬೀಳುತ್ತಲೇ ಕೊಹ್ಲಿ ಅಭಿಮಾನಿಗಳಲ್ಲಿ ಸಂತಸದ ಮನೆ ಮಾಡಿದೆ.
ಆದರೆ ಆರ್‌ಸಿಬಿ ಈವರೆಗೂ ಕೊಹ್ಲಿ ಯಾವುದೇ ನಿರ್ದಿಷ್ಟ ದಿನಾಂಕದಂದು ತಂಡ ಸೇರಲಿದ್ದಾರೆ ಎಂದು ಹೇಳಿಲ್ಲ. ಮಾರ್ಚ್ 17ರೊಳಗೆ ಕೊಹ್ಲಿ ತಯಾರಿ ಶಿಬಿರವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. 19ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ಕೊಹ್ಲಿ ಪಾಲ್ಗೊಳ್ಳಲಿದ್ದಾರೆ.
ಮಾರ್ಚ್ 22ರಿಂದ ಚೆನ್ನೈನಲ್ಲಿ ಐಪಿಎಲ್ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ CSK ಮತ್ತು RCB ಮುಖಾಮುಖಿಯಾಗಲಿವೆ. ಧೋನಿ ಮತ್ತು ಕೊಹ್ಲಿ ನಡುವಿನ ಹಣಾಹಣಿಯನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಅಲ್ಲದೇ ಉದ್ಘಾಟನಾ ಪಂದ್ಯದಿಂದಲೇ ಐಪಿಎಲ್ ಜ್ವರ ಶುರುವಾಗಲಿದೆ.
ಇದರ ನಡುವೆ ಮುಂಬರುವ ಐಪಿಎಲ್‌ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಯೋಜನೆ ಆಗಿರುವ ಪಂದ್ಯಗಳನ್ನು ನಡೆಸಲು ಕೆಎಸ್ಸಿಎ ವಿಶ್ವಾಸ ವ್ಯಕ್ತಪಡಿಸಿದ್ದು, ಯಾವುದೇ ನೀರಿನ ಕೊರತೆ ಎದುರಾಗುವುದಿಲ್ಲ. ಅಗತ್ಯ ನೀರು ಲಭ್ಯತೆಯನ್ನು ಖಚಿತಪಡಿಸಿದ್ದು, ಆರ್‌ಸಿಬಿ ಪಂದ್ಯಗಳನ್ನು ಬೆಂಗಳೂರಿನಲ್ಲಿ ವೀಕ್ಷಿಸಬಹುದಾಗಿದೆ.
2024 RCB ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.