ಬೆಳಗಾವಿ: ಪಾಲಿಕೆ ವ್ಯಾಪ್ತಿಯ ವರ್ಡ್ ಸಂಖ್ಯೆ 32ರ ನಗರ ಸೇವಕ ತಮ್ಮ ವಾರ್ಡ್ ನಿರಂತರ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಪ್ರತಿ ದಿನ ಬೆಳಿಗ್ಗೆ ತೆರಳಿ ಅಗತ್ಯ ಸ್ಥಳಗಳಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಂಡು ಸಂದೀಪ ಜೀರಗ್ಯಾಳ ಜನಸ್ನೇಹಿ ನಗರ ಸೇವೆಕ ಎಂದೆನಿಸಿಕೊಳ್ಳುತ್ತಿದ್ದಾರೆ.
ಮಳೆಗಾಲ ಇರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ, ರಸ್ತೆ ಬದಿ, ಪಾದಚಾರಿ ಮಾರ್ಗಗಳಲ್ಲಿ ಕಸ ಎಸೆದು ‘ಬ್ಲ್ಯಾಕ್ ಸ್ಪಾಟ್’ ಆಗಿರುವ ಸ್ಥಳಗಳನ್ನು ಸ್ವಚ್ಛಗೊಳಿಸಿ ಮತ್ತೆ ಸ್ಥಳದಲ್ಲಿ ಕಸ ಹಾಕದಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಮಧ್ಯದ ಬಾಟಲಿ, ರಸ್ತೆ ಪಕ್ಕದ ಹೆಚ್ಚುವರಿ ಗಿಡಗಂಟಿ ಕಟಾವು, ಪ್ಲಾಸ್ಟಿಕ್ ತಾಜ್ಯ, ಮುಳ್ಳುಕಂಟಿ, ನಿರುಪಯೋಗಿ ಬಟ್ಟೆಗಳ ರಾಶಿ ಸೇರಿದಂತೆ ಎಲ್ಲಾ ತಾಜ್ಯವನ್ನು ತೆರವುಗೊಳಿಸಲಾಗುತ್ತಿದೆ.
ವಾರ್ಡ್ ಸಂಖ್ಯೆ 32 ಹನುಮಾನ್ ನಗರ, ಕುಮಾರಸ್ವಾಮಿ ಬಡಾವಣೆ, ಜಾದವ್ ನಗರ, ಭಾರತ ನಗರ, ರಾಜೀವಗಾಂಧಿ ನಗರ ಸೇರಿದಂತೆ ಕುವೆಂಪು ನಗರ ವರೆಗೂ ನಿರಂತರ ಸ್ವಚ್ಛತೆ ನಿರ್ವಹಣೆ ಮಾಡಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದರ ನಗರ ಸೇವಕ ಸಂದೀಪ ಜೀರಗ್ಯಾಳ ವಾರ್ಡ್ ವ್ಯಾಪ್ತಿಯ ಸಾರ್ವಜನಿಕರು ಕರೆಗಳು ಬಂದಲ್ಲಿ ತಕ್ಷಣವೇ ಸ್ಥಳಗಳಿಗೆ ಧಾವಿಸಿ, ಅಗತ್ಯ ಸ್ವಚ್ಛತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರ ಸೇವೆಗಾಗಿ ಆಯ್ಕೆಯಾಗಿ ಕಾಲಹರಣ ಮಾಡದೆ ನಮ್ಮ ಅವಧಿಯಲ್ಲಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
***