ಬೆಳಗಾವಿ: ಕೇಂದ್ರ ಸಚಿವರ ಹೇಳಿಕೆ ಕುರಿತು ಗೋವಾ ಸಿಎಂ ಹೇಳಿಕೆ ಸಂಪೂರ್ಣ ತಪ್ಪು ಎಂದು ಬೆಳಗಾವಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಗೋವಾ ಸಿಎಂ ಹೇಳಿಕೆ ಸಂಪೂರ್ಣ ತಪ್ಪಾಗಿದ್ದು ಕೇಂದ್ರ ಸಚಿವರು ಎಲ್ಲಿಯೂ ಅನುಮತಿ ಕೊಡಲ್ಲ ಎಂದು ಹೇಳಿಲ್ಲ ಮಾಧ್ಯಮಗಳಿಗೆ ಹೇಳಿಲ್ಲ, ಸದನದಲ್ಲೂ ಹೇಳಿಲ್ಲ. ನಿಮ್ಮ ಹಕ್ಕು ನೀವು ಕೇಂದ್ರ ಬಳಿ ಹೇಳಿಕೊಳ್ಳಿ ಗೋವಾ ಸಿಎಂ ಹೇಳಿಕೆಯಿಂದ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ ನಾವು ಆಂತರಿಕವಾಗಿ ಎಲ್ಲೆಲ್ಲಿ ಒತ್ತಡ ತರಬೇಕು ತಂದಿದ್ದೇವೆ ಎಂದರು.
ಶೀಘ್ರದಲ್ಲೇ ಒಳ್ಳೆಯ ನಿರ್ಧಾರ ಕೇಂದ್ರ ಸರ್ಕಾರ ಮಾಡಲಿದೆ.ಕುಡಿಯುವ ನೀರಿಗಾಗಿ ಕಳಸಾ, ಬಂಡೂರಿ ಯೋಜನೆ ಇಂದಿಲ್ಲ ನಾಳೆ ಆಗೇ ಆಗುತ್ತದೆ. ಅನುಮತಿ ಕೊಡದೇ ಇದ್ರೆ ಡಿಕೆಶಿ ಕಾಮಗಾರಿ ಮಾಡ್ತಿವಿ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ
ಕಾಮಗಾರಿಗೆ ನಾವು ಯಾವುದೇ ವಿರೋಧ ಮಾಡಲ್ಲ ನಮ್ಮ ರಾಜ್ಯದ ನೀರು ನಾವು ತಿರುವು ಮಾಡಿಕೊಳ್ಳಬಹುದು ಮಾಡಲಿ ಬಿಡಿ ಎಂದು ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದರು.