Wednesday, October 15, 2025
Google search engine
Homeವೈರಲ ಸುದ್ದಿಗಾಳಿ ಸುದ್ದಿ...! ಕಣ್ಣಾರೆ ಕಂಡರು ಪ್ರಮಾಣಿಸಿ ನೋಡು.. ಎಂಬ ಗಾಧೆ ಹಾಗೆ....! ಬೆಳಗಾವಿ...
spot_img

ಗಾಳಿ ಸುದ್ದಿ…! ಕಣ್ಣಾರೆ ಕಂಡರು ಪ್ರಮಾಣಿಸಿ ನೋಡು.. ಎಂಬ ಗಾಧೆ ಹಾಗೆ….! ಬೆಳಗಾವಿ ಭೂ ದಾಖಲೆಗಳ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದ ನೌಕರರಿಂದ ಹಣ ವಸೂಲಿ….!

ಬೆಳಗಾವಿ : ಬೆಳಗಾವಿ ಜಿಲ್ಲೆಯ ಭೂ ದಾಖಲೆ ಇಲಾಖೆ ಜಂಟಿ ನಿರ್ದೇಶಕ  ಕಚೇರಿಯಲ್ಲಿ 120 ಜವಾನ ಹುದ್ದೆಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ   ನೌಕರರನ್ನು  25-26 ನೇ ಸಾಲಿನಲ್ಲಿ ಮುಂದೂವರಿಸಲು ಇಲಾಖೆಯಿಂದ ಟೆಂಡರ್ ಕರೆದು ಏಜೆನ್ಸಿಯನ್ನು ಸರ್ಕಾರದ ನಿಯಮಗಳ ಪ್ರಕಾರ ಆಯ್ಕೆ ಮಾಡಬೇಕಾಗಿತ್ತು.

ಆದರೇ ಈ ಕಚೇರಿಯಲ್ಲಿ ಅಧಿಕಾರಿಗಳೇ ಸರ್ವಾಧಿಕಾರಿಗಳಾಗಿದ್ದಾರೆ. ಅವರದೇ ನಿಯಮಗಳ ಪ್ರಕಾರ ಏಜೆನ್ಸಿಯನ್ನು‌ ಆಯ್ಕೆ ಮಾಡಿ ನಿಯಮ ಉಲ್ಲಂಘನೆ ಆರೋಪಗಳು ಕೇಳಿಬರುತ್ತಿದೆ.

ಸರ್ಕಾರದ ನಿಯಮಗಳನ್ನು ಗಾಳಿಗೆ ತೋರಿದ್ದಾರೆ ಸರ್ಕಾರದ ಸುತ್ತೋಲೆ ಪ್ರಕಾರ ಯಾವುದೇ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸಗಾರರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಇಲಾಖೆಯವರು ವಾರ್ತಾ ಇಲಾಖೆ ಮೂಲಕ  ಟೆಂಡರ್ ನ್ನು ಪತ್ರಿಕೆಯಲ್ಲಿ ಪ್ರಕಟವಾಗಬೇಕು ಇದು ಸರ್ಕಾರದ ನಿಯಮವಾಗಿದೆ‌.

ಆದರೇ ಈ ಇಲಾಖೆಯಲ್ಲಿ ಅಧಿಕಾರಿಗಳೇ ನೇರವಾಗಿ ತಮಗೆ ಬೇಕಾದ ಏಜೆನ್ಸಿಯನ್ನು ಆಯ್ಕೆ ಮಾಡಿಕೊಂಡಿದಲ್ಲದೇ ಏಜೆನ್ಸಿಯವರು ಮತ್ತು ಇಲಾಖೆ ಸಿಬ್ಬಂದಿಗಳು ಈಗಾಗಲೇ ಕೆಲಸ ಮಾಡುತ್ತಿರುವ‌ ಸಿಬ್ಬಂದಿಗಳಿಗೆ ಮುಂದುವರಿಕೆ ಪ್ರಮಾಣ ಪತ್ರ ನೀಡಲು ಪ್ರತಿಯೊಂದು ನೌಕರರ ಕಡೆಯಿಂದ 20-50 ಸಾವಿರ ರೂ.ಗಳ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಇಲ್ಲಿ ಸರ್ಕಾರಕ್ಕೆ ಮತ್ತು ಕೆಳವರ್ಗದ ನೌಕರರಿಗೆ ವಂಚನೆ ಮಾಡುತ್ತಿದ್ದಾರೆ. ಈ ಸುದ್ದಿಯನ್ನು ನೋಡಿ ಆದರೂ ಮೇಲಿನ‌ ಅಧಿಕಾರಿಗಳು ಯಾವ ರೀತಿಯಲ್ಲಿ ಕ್ರಮವನ್ನು ಜರುಗಿಸುತ್ತಾರೆ ಎಂದು ನೋಡೋಣ….!

RELATED ARTICLES
- Advertisment -spot_img

Most Popular

error: Content is protected !!