ಬೆಳಗಾವಿ: ಪಂಚಾಯತ ನೌಕರರಿಗೆ ಕನಿಷ್ಠ 38 ಸಾವಿರ ವೇತನ ಜಾರಿಮಾಡಬೇಕು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ (ಸಿ.ಐ.ಟಿ.ಯು) ಸಂಘಟನೆ ನೇತೃತ್ವದಲ್ಲಿ ಸೋಮವಾರ ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ಚೆನ್ನಮ್ಮ ವೃತ್ತದಿಂದ ಸೇರಿದ ಪ್ರತಿಭಟನಾಕಾರರು ಜಿಲ್ಲಾ ಪಂಚಾಯತ್ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಅವರು ನಿಗದಿಪಡಿಸಲು ಸೇವಾ ಹಿರಿತನದ ಆಧಾರದಲ್ಲಿ ವೇತನ ನಿಗದಿಪಡಿಸಬೇಕೆಂದು ಆಗ್ರಹಿಸಿದರು.
ರಾಜ್ಯದ ಪ್ರತಿ ಪಂಚಾಯತಗೆ ಎಸ್.ಡಿ.ಎ. ಹುದ್ದೆ ನೇಮಕಮಾಡಿಕೊಳ್ಳಬೇಕು, ಈಗಿರುವ ಡಾಟಾ ಎಂಟ್ರಿ ಆಪರೇಟರಗಳಿಗೆ ಅನುಮೋದನೆ ನೀಡಬೇಕು, ಪಂಚಾಯತ ನೌಕರರಿಗೆ ಪಿಂಚಣೆ ಜಾರಿಗೊಳಿಸಬೇಕು, ಸ್ವಚ್ಛ ವಾಹಿನಿ ನೌಕರರ ವೇತನ ಹೆಚ್ಚಳಕ್ಕಾಗಿ ಮತ್ತು ತರಬೇತಿ ಪಡೆದಿರುವ ಎಲ್ಲರಿಗೂ ಕೆಲಸ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಸಂಘಟನೆ ಮುಖಂಡರಾದ ಜಿ. ಎಮ್. ಜೈನೆಖಾನ್, ವೀರಭದ್ರ, ಮಡ್ಡೆಪ್ಪ ಭಜಂತ್ರಿ, ದಿಲಿಪ ಬೋವಿ, ಎಸ್.ಐ.ಸಿದ್ನಾಳ, ಯಲ್ಲನಗೌಡ ಪಾಟೀಲ, ಬಾಳೇಶ ದುಂಡಾನಟ್ಟಿ, ರಮೇಶ ಹೋಳಿ, ಯಲ್ಲಪ್ಪ ನಾಯಕ, ಗಣಪತಿ ಗುರವ,ಮಹಾಂತೇಶ ಪಾಟೀಲ, ಹನಮಂತ ಸತ್ತಿ, ಬಾಬು ಗೇಣಾನಿ,ಜಿತೇಂದ್ರ ಕಾಗನಕರ, ಮಂಜುನಾಥ ಕರ್ಕಿ ಸೇರಿದಂತೆ ಇತರರು ಇದ್ದರು.