ಬೆಳಗಾವಿ: ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಬೆಳಗಾವಿ ಡಿಸಿಪಿಯಾಗಿ ನಾರಾಯಣ ಬರಮನಿ ಅವರು ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದರು.
ಅಧಿಕಾರ ಸ್ವೀಕರಿಸುತ್ತಿದ್ದಂತೆ ಶುಭಕೋರಲು ಹರಿದು ಬಂದ ಅಭಿಮಾನಿಗಳು, ಬೆಳಗಾವಿಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಅನುಭವ ನಾರಾಯಣ ಬರಮನಿ ಅವರಿಗೆ ಇದು, ಬೆಳಗಾವಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಕೊಟ್ಟ ರಾಜ್ಯ ಸರ್ಕಾರ.
ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮ ಜೊತೆ ಮಾತನಾಡಿದ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಾಗೂ ನಮ್ಮ ಸಹೋದ್ಯೋಗಿಗಳ ಸಹಕಾರದೊಂದಿಗೆ ಸಾರ್ವಜನಿಕರ ರಾಜಕೀಯ, ಸಾಮಾಜಿಕ ಧಾರ್ಮಿಕ ಮುಖಂಡರ ಸಹಕಾರದೊಂದಿಗೆ ಉತ್ತಮ ಬೆಳಗಾವಿ, ಸುರಕ್ಷಿತ ಬೆಳಗಾವಿ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೆ ಅದಕ್ಕಾಗಿ ಸಾರ್ವಜನಿಕರ ಹಾಗೂ ತಮ್ಮೆಲ್ಲರ ಸಹಕಾರ ಬೇಕೆಂದು ಬೆಳಗಾವಿ ಡಿಸಿಪಿ ಬರಮನಿ ಹೇಳಿದರು.