Thursday, October 16, 2025
Google search engine
Homeಜಿಲ್ಲಾಸವದತ್ತಿಯ ಯಲ್ಲಮ್ಮ ದೇವಸ್ಥಾನದಲ್ಲಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹ
spot_img

ಸವದತ್ತಿಯ ಯಲ್ಲಮ್ಮ ದೇವಸ್ಥಾನದಲ್ಲಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹ

ಬೆಳಗಾವಿ: ಸವದತ್ತಿಯ ಯಲ್ಲಮ್ಮ ದೇವಸ್ಥಾನದಲ್ಲಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ಕೇವಲ ಮೂರೇ ತಿಂಗಳಲ್ಲಿ ಬರೊಬ್ಬರಿ 3.81 ಕೋಟಿ ಕಾಣಿಕೆಯನ್ನು ಭಕ್ತರು ನೀಡಿದ್ದಾರೆ.

ಹೌದು, ಉತ್ತರಕರ್ನಾಟಕದ ಶಕ್ತಿ ದೇವತೆ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಲ್ಲಿ 2025ರ ಏಪ್ರಿಲ್ 1ರಿಂದ ಜೂನ್ 30ರ ಅವಧಿಯಲ್ಲಿ ಭಕ್ತರು ಹುಂಡಿಗೆ ಹಾಕಿದ್ದ ಹಣ, ಚಿನ್ನಾಭರಣ, ಬೆಳ್ಳಿ ಆಭರಣಗಳ ಎಣಿಕೆ ನಿನ್ನೆ ಮಾಡಲಾಗಿದೆ.

ಇನ್ನು 2023ರಲ್ಲಿ ಇದೇ ಅವಧಿಯಲ್ಲಿ 1.65 ಕೋಟಿ, 2024ರಲ್ಲಿ ಈ ಅವಧಿಯಲ್ಲಿ 1.96 ಕೋಟಿ ಕಾಣಿಕೆ ಸಂಗ್ರಹವಾಗಿತ್ತು. ಈ ಬಾರಿ ದುಪ್ಪಟ್ಟು ಕಾಣಿಕೆ ಸಂಗ್ರಹವಾಗಿದೆ. 3.81 ಕೋಟಿ ಕಾಣಿಕೆಯಲ್ಲಿ 3.39 ಕೋಟಿ ರೂ. ನಗದು, 32.94 ಲಕ್ಷ ರೂ. ಮೌಲ್ಯದ 340 ಗ್ರಾಂ ಚಿನ್ನಾಭರಣ, 9.79 ಲಕ್ಷ ರೂ. ಮೌಲ್ಯದ 8.7 ಕೆಜಿ ಬೆಳ್ಳಿ ಆಭರಣ ಸೇರಿದೆ.

ವಿವಿಧ ಸುಧಾರಣಾ ಕ್ರಮ ಅನುಸರಿಸಿದ್ದರಿಂದ ದೇವಸ್ಥಾನದ ಆದಾಯ ಹೆಚ್ಚಾಗಿದೆ. ಈ ಹಣವನ್ನು ಅಭಿವೃದ್ಧಿ ಕೆಲಸಕ್ಕೆ ಬಳಸಲಾಗುವುದು. ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ಸೇರಿ ಮೂಲಭೂತ ಸೌಕರ್ಯಗಳನ್ನು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ್ ದುಡಗುಂಟಿ ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!