Friday, October 10, 2025
Google search engine
Homeಜಿಲ್ಲಾಶಾಸಕ ರಾಜು ಕಾಗೆ ಸಮಸ್ಯೆ ಏನು
spot_img

ಶಾಸಕ ರಾಜು ಕಾಗೆ ಸಮಸ್ಯೆ ಏನು

ಬೆಳಗಾವಿ: ಅಸಮಾಧಾನಿತ ಕಾಂಗ್ರೆಸ್ ಶಾಸಕರ ಜೊತೆಗೆ ಸುರ್ಜೇವಾಲಾ ಮೀಟಿಂಗ್ ‌ಕರೆದಿದ್ದಾರೆ, ಭೇಟಿ ಆಗಿ ನನ್ನ ಸಮಸ್ಯೆ ಬಗ್ಗೆ ಸುರ್ಜೇವಾಲಾ ಅವರಿಗೆ ಹೇಳುತ್ತೇನೆ  ಎಂದು ಶಾಸಕ ರಾಜು ಕಾಗೆ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೋತೆ ಮಾತನಾಡಿದ ಅವರು ಸುರ್ಜೇವಾಲಾ ಸಭೆಗೆ ಬರುವಂತೆ ನಿನ್ನೆ ರಾತ್ರಿಯಷ್ಟೇ ನನಗೂ ಮಾಹಿತಿ ಬಂದಿದು, ಇಂದು ಮಧ್ಯಾಹ್ನ 2 ಕ್ಕೆ ಭೇಟಿಯಾಗುವಂತೆ ಸುರ್ಜೆವಾಲಾ ಹೇಳಿದರು ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಇದೆ, ಇಂದು ಹೋಗಲು ಆಗಲ್ಲ ಎಂದು ಹೇಳಿದರು.

ಸಾರಿಗೆ ನಿಗಮದ ಸಭೆ ಮೊದಲೇ ನಿಗದಿ ಆಗಿತ್ತು, ಇಂದು ಇಡೀ ದಿನ ಸಭೆಯಲ್ಲಿ ಭಾಗಿಯಾಗುವೆ. ಇಂದು ಮಧ್ಯಾಹ್ನ ಬದಲು ನಾಳೆ ಬೆಳಗ್ಗೆ 11 ಕ್ಕೆ ಸುರ್ಜೆವಾಲಾ ಅವರನ್ನು ಭೇಟಿ ಆಗುವೆ

ಸುರ್ಜೆವಾಲಾ ಏಕೆ ಕರೆದಿದ್ದಾರೆ, ಏನು ಹೇಳುತ್ತಾರೆ ನನಗೆ ಗೊತ್ತಿಲ್ಲ. ನನ್ನ ಅಸಮಾಧಾನವನ್ನು ನಾನು ಮೊನ್ನೆ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.

ರಣದೀಪಸಿಂಗ್ ಸುರ್ಜೆವಾಲಾ ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವೆ ಉಳಿದ ಅಸಮಾಧಾನಿತ ಶಾಸಕರ ಸಮಸ್ಯೆಗಳೇನು ನನಗೆ ಗೊತ್ತಿಲ್ಲ.ನನ್ನ ಸಮಸ್ಯೆಗಳಿವೆ, ನಾನು ಸುರ್ಜೆವಾಲಾ ಮುಂದೆ ತಿಳಿಸಿವೆ. ಬೇರೆ ಶಾಸಕರ ಸಮಸ್ಯೆ ಬಗ್ಗೆ ನಾನೇಕೆ ಮಾತನಾಡಲಿ ನನ್ನ ತೊಂದರೆಗಳೇನು ಅವುಗಳ ಬಗ್ಗೆಯಷ್ಟೇ ಮಾತನಾಡ್ತಿನಿ, ಅವರು ಕೇಳಿದ ಪ್ರಶ್ನೆಗೆ ಉತ್ತರಿಸುವೆ ಎಂದರು.

ನನ್ನ ಸಮಸ್ಯೆಗಳ ಬಗ್ಗೆ ಮೊನ್ನೆ ಮಾಧ್ಯಮಗಳ ಎದುರು ಹೇಳಿರುವೆ ಈಗಲೂ ಕೂಡ ಈ ಎಲ್ಲ ಸಮಸ್ಯೆಗಳನ್ನು ಸುರ್ಜೆವಾಲಾ ಮುಂದೆ ಹೇಳುವೆ. ಸುರ್ಜೆವಾಲಾ ಭೇಟಿ ಬಳಿಕ ಮತ್ತೆ ಮಾತಮಾಡುವೆ ಎಂದ ರಾಜು ಕಾಗೆ ಹೇಳಿದರು.

RELATED ARTICLES
- Advertisment -spot_img

Most Popular

error: Content is protected !!