ಬೆಳಗಾವಿ: ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಓಲಂಪಿಕ್ ರನ್ ಡೇಗೆ ಕಾರ್ಯಕ್ರಮಕ್ಕೆ ಮಾಜಿ ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜುರಿಂದ ಓಲಂಪಿಕ್ ಡೇ ರನ್ ಗೆ ರವಿವಾರ ಬೆಳಿಗ್ಗೆ ಚಾಲನೆ ನೀಡಿದರು.
ರಾಜ್ಯ ಓಲಂಪಿಕ್ ಸಂಸ್ಥೆ,ಯವ ಸಬಲೀಕರಣ ಕ್ರೀಡಾ ಇಲಾಖೆ ಆಶ್ರಯದಲ್ಲಿ ಬೆಳಗಾವಿ ನಗರದ ಕೋಟೆ ಕೆರೆ ಆವರಣದಿಂದ ಬೆಳಗಾವಿ ಜಿಲ್ಲಾ ಕ್ರೀಡಾಂಗಣವರೆಗೆ ಮ್ಯಾರಥಾನ್ ಜರುಗಿತ್ತು.
ಪ್ರಪಂಚದ ಎಲ್ಲ ಮೂಲೆಗಳಲ್ಲಿ ನಡೆಯುತ್ತಿರುವ ಓಲಂಪಿಕ್ ರನ್ ಡೇ ಆಚರಣೆ ಶಾಲಾ ಕಾಲೇಜು ಮಕ್ಕಳು, ವಿವಿಧ ಸಂಘ ಸಂಸ್ಥೆಗಳ ಜನರು, ಉತ್ತರ ಶಾಸಕ ಆಸೀಫ್ ಸೇಠ್, ಡಿಸಿ ಮಹಮ್ಮದ್ ರೋಷನ್, ಎಸ್ಪಿ ಡಾ.ಭೀಮಾಶಂಕರ ಗುಳೇದ ಸೇರಿ ಹಲವ ಗಣ್ಯರು ಭಾಗಿ ಆಗಿದ್ದರು