ಬೆಳಗಾವಿ: ನಗರ ಪೊಲೀಸ ಆಯುಕ್ತಾಲಯದ ಸಿಸಿಆರ್ ಬಿ ವಿಭಾಗದ ಡಬ್ಲ್ಯೂ. ಎಫ್. ಮುಜಾವರ್ ಅವರಿಗೆ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ.
ಪೊಲೀಸ್ ಇಲಾಖೆಯಲ್ಲಿ ಸಾಧನೆ ಮಾಡಿದ ಅಧಿಕಾರಿ-ಸಿಬ್ಬಂದಿಗಳಿಗೆ ಕೊಡಮಾಡುವ ಮುಖ್ಯಮಂತ್ರಿ ಪದಕವನ್ನು (ಏ. 2) ರಂದು ನಗರದ ಪೊಲೀಸ ಆಯುಕ್ತಾಲಯದ ಸಿಸಿಆರ್ ಬಿ ವಿಭಾಗದ ಡಬ್ಲ್ಯೂ. ಎಫ್. ಮುಜಾವರ್ ಪಡೆದಿದ್ದಾರೆ.
ತಮ್ಮದೆ ಆದ ಕಾರ್ಯ ವೈಖರಿ ಮುಖಾಂತರ ಹೆಸರು ಮಾಡಿದ ಇವರು 2024 ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ. ಇವರ ಸಾಧನೆಗೆ ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಕೃತಜ್ಞತೆ ಸಲ್ಲಿಸಿದ್ದಾರೆ.