ಬೆಂಗಳೂರು: ಇಂದಿರಾನಗರದಲ್ಲಿ ಆದಿತ್ಯಾ ಬಿರ್ಲಾ ಗ್ರೂಫ್‌ನಿಂದ ಬಿರ್ಲಾ ಓಪಸ್ ಪೇಂಟ್ಸ್ ತನ್ನಹೊಸ ಬಿರ್ಲಾ ಓಪಸ್ ಪೇಂಟ್ ಸ್ಟುಡಿಯೋವನ್ನು ಆರಂಭಿಸಿದೆ.
ಗುರುಗ್ರಾಮ್, ಲಖನೌ, ಮುಂಬೈ ಮತ್ತು ನವಿ ಮುಂಬೈಗಳಲ್ಲಿ ಯಶಸ್ವಿಯಾಗಿ ಸ್ಟುಡಿಯೊ ಆರಂಭದ ಬಳಿಕ ಬೆಂಗಳೂರಿನಲ್ಲಿ ವಿಸ್ತರಿಸಿದೆ. ಬಿರ್ಲಾ ಓಪಸ್ ಪೇಂಟ್ ಬೆಂಗಳೂರು ಸ್ಟುಡಿಯೊವನ್ನು ರೀಟೇಲ್ ಪ್ರಯಾಣವನ್ನು ಸ್ಪೂರ್ತಿದಾಯಕ, ತಲ್ಲೀನಗೊಳಸುವ ಅನುಭವವಾಗಿ ಪರಿವರ್ತಿಸಲು ಆಲೋಚನಾಪೂರ್ವಕವಾಗಿ ರೂಪಿಸಲಾಗಿದೆ.
ಈ ಪೇಂಟ್ ಸ್ಟುಡಿಯೊವನ್ನು ಸೃಜನಶೀಲತೆಯ ಕೇಂದ್ರಗಳಾಗಿ ವಿನ್ಯಾಸಗೊಳಿಸಿದ್ದು, ಸಾಂಪ್ರದಾಯಿಕ ಪೇಂಟ್ ಮಳಿಗೆಗಳಿಂದ ಹೊರತಾಗಿದೆ. ಇದು ಗ್ರಾಹಕರಿಗೆ ಹೊಸ ಐಡಿಯಾಗಳನ್ನು ಕಂಡುಕೊಳ್ಳಲು ಅವಕಾಶ ಕಲ್ಪಿಸುವುದೇ ಅಲ್ಲದೆ ಬಣ್ಣಗಳನ್ನು ನಿಜ ಜೀವನದ ಪರಿಸರದಲ್ಲಿ ಮುಟ್ಟುವ, ಭಾವಿಸುವ ಮತ್ತು ಅನುಭವ ಪಡೆದುಕೊಳ್ಳಲು ಅವಕಾಶ ನೀಡುತ್ತದೆ.
ಪರಿಣಿತರಿಂದ ಉಚಿತ ಮಾರ್ಗದರ್ಶನ : ಬಿರ್ಲಾ ಓಪಸ್ ಪೇಂಟ್‌ನ ಸಿಇಒ ರಕ್ಷಿತ್ ಹರ್ಗವೆ ಮಾತನಾಡಿ, ಗ್ರಾಹಕರು ಬಣ್ಣದ ಆಯ್ಕೆ, ರಚನೆಗಳು ಮತ್ತು ಬಳಕೆಯ ತಂತ್ರಗಳ ಕುರಿತು ವೈಯಕ್ತಿಕಗೊಳಿಸಿದ ಸಲಹೆಗಳು ಮೂಲಕ ಉಚಿತ ಪರಿಣಿತರ ಮಾರ್ಗದರ್ಶನ ಪಡೆದುಕೊಳ್ಳಬಹುದು.
ಈ ಮಳಿಗೆಯು ಪೂರ್ಣ ಶ್ರೇಣಿಯ 170+ ಉತ್ಪನ್ನಗಳನ್ನು ಪ್ರದರ್ಶಿಸುವುದಲ್ಲದೆ ವಿಶೇಷ ಸೇವೆಗಳನ್ನೂ ಒದಗಿಸುತ್ತದೆ, ಅದರಲ್ಲಿ ಬಣ್ಣದ ಆಯ್ಕೆ, ಆವಿಷ್ಕಾರಕ ಬಳಕೆ ತಂತ್ರಗಳು ಮತ್ತು ಶ್ರೀಮಂತ ಸ್ಥಳೀಯ ಪರಂಪರೆಯಿಂದ ಸ್ಫೂರ್ತಿ ಪಡೆದ ಕ್ಯುರೇಟೆಡ್ ಡೆಕ್ಟರ್ ಪರಿಹಾರಗಳನ್ನು ಕುರಿತು ಪರಿಣಿತರ ಸಲಹೆಗಳನ್ನೂ ಪಡೆಯಬಹುದು.
ಬೆಂಗಳೂರಿನಲ್ಲಿ ನಮ್ಮ ಮೊದಲ ಪೇಂಟ್ ಸ್ಟುಡಿಯೊ ಪ್ರಾರಂಭಿಸುವುದು ಬಿರ್ಲಾ ಓಪಸ್ ಪೇಂಟ್ಸ್ಗೆ ಪ್ರಮುಖ ಮೈಲಿಗಲ್ಲಾಗಿದೆ ಎಂದರು.