ಬೆಳಗಾವಿ: ಬೆಳಗಾವಿಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ SSLC ಪರೀಕ್ಷಾ ಮೌಲ್ಯಮಾಪನ ಕೇಂದ್ರದಲ್ಲಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ನನ್ನನ್ನು ಪಾಸ್ ಮಾಡಿದರೆ ಅಷ್ಟೇ ನನ್ನ ಲವ್ ಮಾಡುತ್ತೇನೆ ಅಂದಿದ್ದಾಳೆ ಪ್ಲೀಸ್ ಪಾಸ್ ಮಾಡಿ ನನ್ನ ಲವ್ ನಿಮ್ಮ ಕೈಯಲ್ಲಿದೆ ಎಂದು ಬರವಣಿಗೆ ಜತೆ ಐದು ನೂರು ರುಪಾಯಿ ಹಣ ಇಟ್ಟಿರೋದು ಕಂಡು ಬಂದಿದೆ.
ಐದು ನೂರು ರುಪಾಯಿ ನೀವು ಚಹಾ ಕುಡಿಯಿರಿ ಸರ್ ರಿ ನನ್ನ ಪಾಸ್ ಮಾಡಿ. ಇನ್ನೊಂದು ಪತ್ರಿಕೆಯಲ್ಲಿ ನನ್ನ ಪಾಸ್ ಮಾಡಿದ್ರೆ ಹಣ ಕೊಡುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಮತ್ತೊಂದು ಪತ್ರಿಕೆಯಲ್ಲಿ ಪ್ಲೀಸ್ ಮಿಸ್ ಅಂಡ್ ಸರ್ ನನ್ನನ್ನು ಪಾಸ್ ಮಾಡಿ ಎಂದು ಬರವಣಿಗೆ ಪತ್ತೆ ಆಗಿದೆ
ನೀವು ಪಾಸ್ ಮಾಡದಿದ್ದರೆ ನನ್ನ ಅಪ್ಪ ಅಮ್ಮ ಮುಂದೆ ಕಾಲೇಜಿಗೆ ಕಳಿಸಲ್ಲ. ಹೀಗೆ ಹಲವು ಚಿತ್ರ ವಿಚಿತ್ರ ಬರವಣಿಗೆ ಮೂಲಕ ಉತ್ತರ ಬರೆದ ವಿದ್ಯಾರ್ಥಿಗಳು.