Tuesday, April 29, 2025
Google search engine
Homeವೈರಲ ಸುದ್ದಿಮಾರಕಾಸ್ತ್ರಗಳಿಂದ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು: ಡಾ....
spot_img

ಮಾರಕಾಸ್ತ್ರಗಳಿಂದ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು: ಡಾ. ಭೀಮಾಶಂಕರ್ ಗುಳೇದ

 ಬೆಳಗಾವಿ:ಮಾರಕಾಸ್ತ್ರಗಳಿಂದ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ  ಹರೆ ಬಿಡುವುದು ಹಾಗೂ ಸಾರ್ವಜನಿಕವಾಗಿ ಪ್ರದರ್ಶನ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ ಎಚ್ಚರಿಕೆ ಕೊಟ್ಟರು.

ಇಂದು ಮಾಧ್ಯಮ ಜೊತೆ ಮಾತನಾಡಿದ ಅವರು ,ಕೆಲ ವ್ಯಕ್ತಿಗಳು,  ಯುವಕರು ಕೈಯಲ್ಲಿ ಮಚ್ಚು, ಆಟಿಕೆ ತರಹ ಇರುವ ಗನ್ ಹಿಡಿದು ರೀಲ್ಸ್ ಮಾಡಿದ್ದು ನನಗೆ  ಸಾಮಾಜಿಕ ಮಾಧ್ಯಮಗಳ ಮೂಲಕ   ಗಮನಕ್ಕೆ ಬಂದಿದೆ. ಹಂತವರನು  ಪತ್ತೆಹಚ್ಚಿ ಬಂಧಿಸಿ ಅವರ ವಿರುದ್ಧ ಕಾನೂನು  ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಇಬ್ಬರು ನಟರು ಈ ರೀತಿ ಮಾಡಿದ್ದಕ್ಕಾಗಿ ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕವಾಗಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಮಾರಕಾಸ್ತ್ರಗಳ ಪ್ರದರ್ಶನ ನಿಷಿದ್ಧವಾಗಿದ್ದು ಅಕ್ಷಮ್ಯ ಅಪರಾಧವಾಗಿದೆ. ಹೀಗೆ ಯಾರೂ ಮಾಡಬಾರದೆಂದು ಅವರು ಮನವಿ ಮಾಡಿದರು. ಒಂದು ವೇಳೆ ಮಾಡಿದರೆ ಕ್ರಮ ಖಂಡಿತ ಎಂದು ಖಡಕ್‌ ಎಚ್ಚರಿಕೆಯನ್ನೂ ನೀಡಿದರು.

RELATED ARTICLES
- Advertisment -spot_img

Most Popular

error: Content is protected !!