Tuesday, April 29, 2025
Google search engine
Homeಕ್ರೈಂಕಳ್ಳನ ಬಂಧಿಸಿದ ಮಾಳಮಾರುತಿ ಪೊಲೀಸರು
spot_img

ಕಳ್ಳನ ಬಂಧಿಸಿದ ಮಾಳಮಾರುತಿ ಪೊಲೀಸರು

ಬೆಳಗಾವಿ:  ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ ,ಉಪ-ಪೊಲೀಸ್ ಆಯುಕ್ತರಾದ ರೋಹನ ಜಗದೀಶ, ಅಪರಾಧ ಮತ್ತು ಸಂಚಾರ ಉಪ-ಪೊಲೀಸ್ ಆಯುಕ್ತರಾದ ನಿರಂಜನ ರಾಜ್ ಅರಸ, ಮಾರ್ಕೇಟ ಉಪ-ವಿಭಾಗ ಎ.ಸಿ.ಪಿ ಸಂತೋಷ ಸತ್ಯನಾಯ್ಕ,ಇವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ ಜೆ.ಎಮ್ ಕಾಲಿಮಿರ್ಚಿ ಮಾಳಮಾರುತಿ ಪೊಲೀಸ್ ಠಾಣೆ ಇವರ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡಿತು.

ಬೆಳಗಾವಿ ಶಹರದಲ್ಲಿ ನಿಲ್ಲಿಸಿದ ದುಬಾರಿ ಬೆಲೆಯ ಕಾರುಗಳನ್ನು  ಗುರಿಯಾಗಿಸಿಕೊಂಡು ಅವುಗಳಲ್ಲಿ ಯಾವುದಾದರೂ ಬ್ಯಾಗಗಳು ಹಾಗೂ ಅತ್ಯಮೂಲ್ಯ ವಸ್ತು ಇಟ್ಟಿದ್ದರ ಬಗ್ಗೆ ಖಾತ್ರಿಪಡಿಸಿಕೊಂಡು ಅವುಗಳ ಕಾರ ಗ್ಲಾಸ ಒಡೆದು ಕಾರ ಅಲ್ಲಿ ಇಟ್ಟಿದ್ದ ವಸ್ತುಗಳು ಕಳ್ಳತನ ಮಾಡುವ ಅಂತರ ರಾಜ್ಯ ಆರೋಪಿ ದೀನದಯಾಳನ ದೀನ್ ತಂದೆ ಜಯಶೀಲನ್ 20 ವರ್ಷ ಸಾ: ಮನೆ ನಂ: 105 ಮಿಲ್ ಕಾಲನಿ ರಾಮಜೀ ನಗರ ತಾ: ಶ್ರೀರಂಗಮ್ ಜಿ: ತ್ರಿಚಿ ರಾಜ್ಯ ತಮಿಳುನಾಡು ಈತನಿಗೆ ಪತ್ತೆ ಮಾಡುವ ಕುರಿತು ತಮಿಳುನಾಡಿಗೆ ಒಂದು ವಿಶೇಷ ತನಿಖಾ ತಂಡವನ್ನು ಕಳುಹಿಸಿ ಆರೋಪಿತನನ್ನು ತಮಿಳುನಾಡಿನ ತ್ರಿಚಿಯಲ್ಲಿ ಪತ್ತೆ ಹಚ್ಚಿದ್ದಾರೆ.

ಸದರಿ ಅವವನು ತಾಬಾದಲ್ಲಿಂದ ಸುಮಾರು 2 ಲಕ್ಷ ರೂ ಬೆಲೆಬಾಳುವ  ಎರಡು ಆ್ಯಪಲ್ ಕಂಪನಿಯ ಲ್ಯಾಪಟಾಪ, ಸುಮಾರು 1 ಲಕ್ಷ 50 ಸಾವಿರ ರೂ ಬೆಲೆಬಾಳುವ ಆ್ಯಪಲ್ ಕಂಪನಿಯ ಎರಡು ಐ ಪ್ಯಾಡ್ ಹಾಗೂ 50 ಸಾವಿರ  ರೂ ಬೆಲೆಬಾಳುವ ಆಟೋಸ್ಕೋಪ ಒಂದು ಹೀಗೆ ಒಟ್ಟು 4 ಲಕ್ಷ ರೂ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿತನಿಗೆ  ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ತನಿಖೆ ಮುಂದುವರೆದಿದೆ.

ಸದರಿ ಆರೋಪಿತನ ಜೊತೆಗೆ ಗುನ್ನೆ ಮಾಡಲು ಬೆಳಗಾವಿಗೆ ಬಂದಿದ್ದ ಅವನ ತಂದೆಯಾದ ಜಯಶೀಲನ ತಂದೆ ಗಣೇಶನ ಈತನು ಪರಾರಿ ಆಗಿದು ಇದ್ದು ಸದರಿ ಅವನ ಪತ್ತೆ ಮಾಡುವ ಕಾರ್ಯ ಮುಂದುವರೆದಿದೆ.

ಸದರಿ ಪ್ರಕರಣ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಹೊನ್ನಪ್ಪ ತಳವಾರ, ಪಿ.ಎಸ್.ಐ, ಶ್ರೀಶೈಲ್ ಹುಳಗೇರಿ, ಪಿ.ಎಸ್.ಐ. ಉದಯ ಪಾಟೀಲ, ಮತ್ತು ಸಿಬ್ಬಂದಿ ಜನರಾದ ಎಮ್.ಜಿ.ಕುರೇರ,  ಸಿ.ಜೆ.ಚಿನ್ನಪ್ಪಗೋಳ, ಬಿ.ಎಫ್.ಬಸ್ತವಾಡ, ಅರುಣ ಕಾಂಬಳೆ,  ಸಿ.ಐ.ಚಿಗರಿ, ಕೆ.ಬಿ.ಗೌರಾಣಿ, ಮಲ್ಲಿಕಾರ್ಜುನ ಗಾಡವಿ, ಮಹೇಶ ಒಡೆಯರ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಜನರಾದ ರಮೇಶ ಅಕ್ಕಿ ಹಾಗೂ ಮಹಾದೇವ ಕಾಸೀದ ಇವರು ಪ್ರಶಂಸನಿಯ ಕೆಲಸ ಮಾಡಿದ್ದು ಸದರಿ ಬೆಳಗಾವಿ ನಗರ ಪೊಲೀಸ್ ಆಯುಕ್ತರರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

RELATED ARTICLES
- Advertisment -spot_img

Most Popular

error: Content is protected !!