Tuesday, April 29, 2025
Google search engine
Homeಕ್ರೈಂಬೆಳಗಾವಿ ಕೆಎಸ್ಆರ್ ಟಿಸಿ ಬಸ್‌ ಕಂಡಕ್ಟರ್ ಮೇಲೆ ಮರಾಠಿ ಪುಂಡರಿಂದ‌ ಹಲ್ಲೆ...!
spot_img

ಬೆಳಗಾವಿ ಕೆಎಸ್ಆರ್ ಟಿಸಿ ಬಸ್‌ ಕಂಡಕ್ಟರ್ ಮೇಲೆ ಮರಾಠಿ ಪುಂಡರಿಂದ‌ ಹಲ್ಲೆ…!

ಬೆಳಗಾವಿ:  ಬೆಳಗಾವಿ ತಾಲೂಕಿನ ಸುಳೇಭಾವಿ ಬಾಳೇಕುಂದ್ರಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಕೆ ಎಸ್ ಆರ್‌ ಟಿ ಸಿ ಬಸನಲ್ಲಿ‌ ಮತ್ತೆ ಕನ್ನಡ-ಮರಾಠಿ‌ ಭಾಷಾವಾರು ಘಟಣೆ ನಡೆದಿದೆ.‌

ಘಟನೆ ವಿವರ:

ಸುಳೇಭಾವಿ ಬಸನಲ್ಲಿ ಸಿಬಿಟಿಯಿಂದ ಬಾಳೇಕುಂದ್ರಿಗೆ ಪ್ರಯಾಣ ನಡೆಸುತ್ತಿದ್ದ ಯುವತಿಯು ಎರಡು  ಟಿಕೇಟನ್ನು ಉಚಿತವಾಗಿ ಕೊಡಿ ಎಂದು ಮರಾಠಿಯಲ್ಲಿ ಕೇಳಿದ್ದಾಳೆ. ಎರಡು ಟಿಕೆಟ್ ಯಾರಿಗೆ ಎಂದು ಕೇಳಿದಾಗ ಯುವತಿಯೊಂದಿಗೆ ಪ್ರಯಾಣ ಮಾಡುತ್ತಿರುವ ಯುವಕನ ಟಿಕೆಟ್ ಎಂದು ಹೇಳಿದಾಗ ಕಂಡಕ್ಟರ್ ಅವರು ಯುವಕನಿಗೆ ಉಚಿತ ಟಿಕೆಟ ನೀಡಲು ಬರುವುದಿಲ್ಲ ನೀಡಿದರೆ ನನ್ನ ನೌಕರಿ ಹೋಗುತ್ತೆ ಎಂದು ಕನ್ನಡದಲ್ಲಿ ಹೇಳಿದ್ದಾರೆ.

ಯುವತಿಯು ನಿನಗೆ ಮರಾಠಿ ಬರುವುದಿಲ್ಲವೇ ಎಂದು ಕೇಳಿದಾಗ ವೇಳೆ ಕಂಡೆಕ್ಟರ್ ಮಹಾದೇವ್ ತನಗೆ ಮರಾಠಿ ಬರೊಲ್ಲ‌ ಕನ್ನಡದಲ್ಲಿ ಮಾತಾಡುವಂತೆ ಹೇಳಿದ್ದಾನೆ. ಕಂಡೆಕ್ಟರ್ ಮರಾಠಿ ಬರಲ್ಲ ಎನ್ನುತ್ತಿದ್ದಂತೆ ಚಲಿಸುತ್ತಿದ್ದ ಬಸ್ ನಿಲ್ಲಿಸಿ ಬಸ್ ಕಂಡೆಕ್ಟರ್ ಮಹಾದೇವ್ ಮೇಲೆ ಮರಾಠಿ ಪುಂಡರ ಗುಂಪೊಂದು ಮನ ಬಂದಂತೆ  ಹಲ್ಲೆ‌ ಮಾಡಿದ್ದಾರೆ.

ಸದ್ಯ ಹಲ್ಲೆಗೊಳಗಾದ ಬಸ್ ಕಂಡೆಕ್ಟರ್ ಮಾರೀಹಾಳ ಪೋಲಿಸ್ ಠಾಣೆಗೆ ದೂರು ಕೊಡಲು ‌ಹೋದರೆ ದೂರು‌ ತಗೆದುಕೊಳ್ಳದ‌ ಕಾರಣ ಕಂಡೆಕ್ಟರ್ ಅವರು ಜಿಲ್ಲಾ ಆಸ್ಪತ್ರೆಗೆ ಬಂದು ಎಮ್ ಎಲ್‌ಸಿ ಮಾಡಿಸಿದ ಬಳಿಕೆ ಮಾಳಮಾರುತಿ  ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.‌

ಕನ್ನಡದ ನೆಲದಲ್ಲಿಯೇ ಕನ್ನಡ ಮಾತಾಡು ಎಂದಿದ್ದಕ್ಕೆ ಹಲ್ಲೆ‌ ಮಾಡಿರೋದನ್ನು ಕನ್ನಡಪರ ಸಂಘಟನೆಗಳು ಖಂಡಿಸಿವೆ. ಇನ್ನು ಮರಾಠಿ ಪುಂಡರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಕನ್ನಡಿಗರು ಒತ್ತಾಯಿಸಿದ್ದಾರೆ.

 

RELATED ARTICLES
- Advertisment -spot_img

Most Popular

error: Content is protected !!