Thursday, June 19, 2025
Google search engine
Homeಸಂಪಾದಕೀಯರಾತ್ರಿ ಶಾಲೆಗಳಿಗೆ ನುಗ್ಗಿ ಕಂಪ್ಯೂಟರ್ ಕಳ್ಳತನ ಮಾಡುತ್ತಿದ್ದವನ್ನುನ್ನು ಬಂದಿಸಿದ ಮಾಳ ಮಾರುತಿ ಠಾಣೆಯ ಪೊಲೀಸರು!
spot_img

ರಾತ್ರಿ ಶಾಲೆಗಳಿಗೆ ನುಗ್ಗಿ ಕಂಪ್ಯೂಟರ್ ಕಳ್ಳತನ ಮಾಡುತ್ತಿದ್ದವನ್ನುನ್ನು ಬಂದಿಸಿದ ಮಾಳ ಮಾರುತಿ ಠಾಣೆಯ ಪೊಲೀಸರು!

ಬೆಳಗಾವಿ :ದಿನಾಂಕ: 27-12-2024 ರಂದು ನಸುಕಿನ ಜಾವ 3 ಗಂಟೆಯ ಸುಮಾರಿಗೆ ಬೆಳಗಾವಿ ಮಹಾಂತೇಶ ನಗರದಲ್ಲಿರುವ ಲವ್ ಡೇಲ್ ಸ್ಕೂಲ್ ಒಳಗೆ ಹೋಗಿ ಲವ್ ಡೇಲ್ ಸ್ಕೂಲ್‌ದ ಕಂಪ್ಯೂಟರ ಸರ್ವರ ರೂಮದಲ್ಲಿ ಇಟ್ಟಿದ್ದ ಒಂದು ಸಿ.ಪಿ.ಯು. ಸರ್ವರ್ ಮತ್ತು ದಿನಾಂಕ: 13-01- 2025 ರಂದು ಗುಡ್ ಶಫರ್ಡ ಕಾಲೇಜಿನ ಕಂಪ್ಯೂಟರ ರೂಮದ ಕಿಟಕಿಯ ಗ್ಲಾಸ್‌ನ್ನು ಸರಿಸಿ ಕಂಪ್ಯೂಟರ ರೂಮ ಒಳಗೆ ಹೋಗಿ ಕಂಪ್ಯೂಟರ ರೂಮದಲ್ಲಿ ಇಟ್ಟಿದ್ದ ಸುಮಾರು 2,25,000/- ರೂ ಕಿಮ್ಮತ್ತಿನ ಕಂಪ್ಯೂಟರ ಮತ್ತು ಸರ್ವರನ್ನು ಕಳ್ಳತನ ಮಾಡುತ್ತಿದ್ದ ಆರೋಪಿತನಾದ ಅಬು ಸೂಫಿಯಾನ ತಂದೆ ಅಬ್ದುಲಅಜೀಜ ಕೊತ್ವಾಲ ವಯಸ್ಸು: 18 ವರ್ಷ 6 ತಿಂಗಳು ವರ್ಷ ಸಾ: ಸುಭಾಷ ನಗರ 2 ನೇ ಕ್ರಾಸ್ ಬೆಳಗಾವಿ ಶ್ರೀ ಜೆ.ಎಮ್.ಕಾಲಿಮಿರ್ಚಿ ಪೊಲೀಸ್ ಇನ್ಸಪೆಕ್ಟರ ಮಾಳಮಾರುತಿ ಪೊಲೀಸ್ ಠಾಣೆ ಬೆಳಗಾವಿರವರು ದಸ್ತಗೀರ ಮಾಡಿ ಸದರಿಯವನ ತಾಬಾದಲ್ಲಿಂದ ಸುಮಾರು 2,50,000/- ರೂ ಕಿಮ್ಮತ್ತಿನ 1) ಏಸರ ಕಂಪನಿಯ ಮಾನಿಟರ ಎರಡು, 2) ಆರ್ಟಿಸ್ ಕಂಪನಿಯ ಸಿ.ಪಿ.ಯು ಎರಡು, 3) ಲೆನೋವೋ ಕಂಪನಿಯ ಸಿ.ಪಿ.ಯು ಸರ್ವರ್ ಒಂದು, 4) ಡೆಲ್ ಕಂಪನಿಯ ಮೌಸ್ ಎರಡು, 5) ಡೆಲ್ ಕಂಪನಿಯ ಕೀ ಬೋರ್ಡ ನೇದ್ದವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

ಸದರಿ ಪ್ರಕರಣದ ಕಾರ್ಯಾಚರಣೆಯಲ್ಲಿ ಶ್ರೀ ಹೊನ್ನಪ್ಪ ತಳವಾರ ಪಿ.ಎಸ್.ಐ. ಶ್ರೀ ಶ್ರೀಶೈಲ್ ಹುಳಗೇರಿ ಪಿ.ಎಸ್.ಐ, ಮತ್ತು ಸಿಬ್ಬಂದಿ ಜನರಾದ ಶ್ರೀ ಸಿ.ಜೆ.ಚಿನ್ನಪ್ಪಗೋಳ, ಶ್ರೀ ಬಿ.ಎಫ್.ಬಸ್ತವಾಡ, ಶ್ರೀ ಜಗನ್ನಾಥ ಭೋಸಲೆ, ಶ್ರೀ ಬಸವರಾಜ ಕಲ್ಲಪ್ಪನವರ, ಶ್ರೀ ಸಿ.ಐ.ಚಿಗರಿ, ಶ್ರೀ ಕೆ.ಬಿ.ಗೌರಾಣಿ, ಶ್ರೀ ಮಲ್ಲಿಕಾರ್ಜುನ ಗಾಡವಿ, ಶ್ರೀ ಮಹೇಶ ಒಡೆಯರ ಇವರು ಪ್ರಶಂಸನಿಯ ಕೆಲಸ ಮಾಡಿರುತ್ತಾರೆ.

RELATED ARTICLES
- Advertisment -spot_img

Most Popular

error: Content is protected !!