- ಹೈದರಾಬಾದ್ : ಹೈದರಾಬಾದ್‌ನಲ್ಲಿ ನಡೆದ ಪುಷ್ಪ 2 ಸಿನಿಮಾದ ಪ್ರೀಮಿಯರ್ ಶೋನಲ್ಲಿ ಕಾಲ್ತುಳಿತವಾಗಿದ್ದು. ಈ ಅವಘಡದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಆಕೆಯ ಮಗನ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ದೊರೆತಿದೆ.
ನೆನ್ನೆ (ಡಿಸೆಂಬರ್.04) ರಂದು ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರದಲ್ಲಿ ಪುಷ್ಪ ಸಿನಿಮಾದ ಪ್ರೀಮಿಯರ್ ಶೋವನ್ನು ಆರಂಭಿಸಲಾಗಿತ್ತು. ಇಲ್ಲಿಗೆ ಚಿತ್ರದ ನಾಯಕ ನಟ ಅಲ್ಲು ಅರ್ಜುನ್ ಕೂಡ ಆಗಮಿಸಿದ್ದರು. ಈ ವೇಳೆ ನಟನನ್ನು ನೋಡಲು ಭಾರೀ ಜನಸ್ತೋಮವೆ ನೆರೆದಿತ್ತು. ಈ ಸಮಯದಲ್ಲಿ ಥಿಯೇಟರ್ ಹೊರಭಾಗದಲ್ಲಿ ಕಾಲ್ತುಳಿತವಾಗಿದ್ದು. 39 ವರ್ಷದ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ ಹಾಗೂ ಆಕೆಯ ಮಗನ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ದೊರೆತಿದೆ.
ದಿಲ್‌ಸುಖ್‌ನಗರದ ನಿವಾಸಿ ರೇವತಿ (39) ಎಂಬ ಮಹಿಳೆ ತನ್ನ ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳಾದ ಶ್ರೀ ತೇಜ್ (9) ಮತ್ತು ಸಾನ್ವಿಕಾ (7) ಅವರೊಂದಿಗೆ ಪುಷ್ಪ 2 ರ ಪ್ರೀಮಿಯರ್ ಶೋ ವೀಕ್ಷಿಸಲು ಆರ್‌ಟಿಸಿ ಕ್ರಾಸ್ ರಸ್ತೆಯಲ್ಲಿರುವ ಸಂಧ್ಯಾ 70 ಎಂಎಂ ಥಿಯೇಟರ್‌ಗೆ ಹೋಗಿದ್ದಾಗ ಅವಘಡ ಸಂಭವಿಸಿದೆ ಎಂದು ಮಾಹಿತಿ ದೊರೆತಿದೆ.
ಜನರನ್ನು ನಿಯಂತ್ರಿಸಲಾಗದೆ ಪೋಲಿಸರು ಹರಸಾಹಸ ಪಟ್ಟಿದ್ದು. ಪೋಲಿಸರು ನೆರೆದಿದ್ದ ಜನರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.