ಹಿಂದೂ ಮುಸ್ಲಿಂ ಭಾಂದವ್ಯದ ಬೆಸುಗೆಯ ಮೊಹರಂ ಹಬ್ಬ..
ಗ್ರಾಮಸ್ಥರೆಲ್ಲ ಒಂದಾಗಿ ಅನ್ಯೋನ್ಯತೆಯಿಂದ ಆಚರಿಸುವ ಆತ್ಮೀಯ ಹಬ್ಬ..
ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಅತ್ಯಂತ ಶೃದ್ಧಾ ಭಕ್ತಿ, ಹಾಗೂ ಬಾಂಧವ್ಯದ ಭಾವನೆಯಿಂದ ಆಚರಣೆ ಮಾಡುತ್ತಾರೆ..
ಇದು ಮುಸ್ಲಿಂ ಹಬ್ಬವಾದರೂ ಕೂಡಾ , ಡೋಲಿ ಹಾಗೂ ಕೈ ದೇವರುಗಳನ್ನು ಹಿಂದೂಗಳೇ ಹೋರುವರು, ಈ ಗ್ರಾಮದಲ್ಲಿ ಒಂದೇ ಮುಸ್ಲಿಂ ಮನೆತನ ಇದ್ದು, ಬಹುತೇಕ ಹಬ್ಬದ ಕಾರ್ಯಗಳನ್ನು ಹಿಂದೂ ಸಮುದಾಯದ ಜನರೇ ಮೊದಲಿನಿಂದಲೂ ಭಕ್ತಿ ಭಾವದಿಂದ ನೆರವೇರಿಸುವರು.
ಬೆಳಿಗ್ಗೆ 5 ಗಂಟೆಗೆ ದೇವರು ಎದ್ದು, ಗ್ರಾಮದ ಎಲ್ಲಾ ದೇವಸ್ಥಾನಗಳಲ್ಲಿ ಬೇಟಿ ನೀಡಿ, ದೇವರ ಹೆಸರಿನಲ್ಲಿ ದೂಪ ಹಾಕಲಾಗುತ್ತದೆ, ಕಿಚ್ಚ ಹಾಯ್ದು, ಊರೆಲ್ಲ ಭಕ್ತರಿಂದ ಪೂಜೆ ಸ್ವೀಕರಿಸಿ ನಂತರ ಪಕ್ಕದ ಊರಿನ ದೇವರನ್ನು ಭೇಟಿಯಾಗುವ ಸಂಪ್ರದಾಯವಿದೆ..
ದೇವರಿಗೆ ಬೇಡಿಕೊಂಡ ಗ್ರಾಮದ ಭಕ್ತರು ಕೆಲವರು ಮಾಂಸಾಹಾರಿ, ಕೆಲವರು ಸಸ್ಯಾಹಾರಿ (ಮಾದೆಲಿ) ಮಾಡಿ, ನೈವೇದ್ಯ ಮಾಡುವರು, ಯಾವುದೇ ಜಾತಿ ಧರ್ಮದ ಬೇದಬಾವ ಇಲ್ಲದೇ, ಚಿಕ್ಕ ಮಕ್ಕಳಿಂದ ವಯೋವೃದ್ಧರ ವರೆಗೆ ಹೊಸ ಬಟ್ಟೆಗಳನ್ನು ಧರಿಸಿ, ವೈಭವಯುತವಾಗಿ ಮೊಹರಂ ಹಬ್ಬವನ್ನು ಆಚರಣೆ ಮಾಡುವರು..
ಭಕ್ತರ ಸಮಸ್ಯೆಗಳು, ಬೇಡಿಕೆಗಳು ಏನೇ ಇದ್ದರೂ ಡೋಲಿಯ ಕೆಳಗೆ ಕುಳಿತು ಬೇಡಿಕೊಂಡಾಗ ಈಡೇರುತ್ತವೆ ಎಂಬ ನಂಬಿಕೆ ಇದ್ದು, ನೂರಾರು ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ದೇವರಿಗೆ ಮೊರೆ ಹೋಗುತ್ತಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ.