Monday, December 23, 2024
Google search engine
Homeಅಂಕಣಹುದಲಿ ಗ್ರಾಮದಲ್ಲಿ 11 ವರ್ಷಗಳ ನಂತರ ಗ್ರಾಮದೇವತೆಯ ಜಾತ್ರಾ ಮಹೋತ್ಸವದ ಸಂಭ್ರಮಾಚರಣೆ

ಹುದಲಿ ಗ್ರಾಮದಲ್ಲಿ 11 ವರ್ಷಗಳ ನಂತರ ಗ್ರಾಮದೇವತೆಯ ಜಾತ್ರಾ ಮಹೋತ್ಸವದ ಸಂಭ್ರಮಾಚರಣೆ

ಬೆಳಗಾವಿ : ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ಪ್ರತಿ 11 ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆ ಮೇ.14 ರಿಂದ 22 ರ ವರಗೆ ನಡೆಯಲಿದೆ.

ಜಾತ್ರೆ ನಿಮಿತ್ಯ ವಿವಿಧ ಕಾರ್ಯಕ್ರಮಗಳ ಪಟ್ಟಿ:

ಮೇ. 14 ರಂದು ಬೆಳಿಗ್ಗೆ 6. ಘಂಟೆಗೆ ಶ್ರೀದೇವಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಪೂಜೆ ನೆರವೇರಲಿದೆ.
ಬೆಳಿಗ್ಗೆ 8.15ಕ್ಕೆ ಉಡಿ ತುಂಬುವ ಕಾರ್ಯಕ್ರಮ, ರಾತ್ರಿ 9. ಘಂಟೆಗೆ ಸಂಗ್ಯಾ ಬಾಳ್ಯಾ ನಾಟಕ ಪ್ರದರ್ಶನಗೊಳ್ಳಲಿದೆ.

ಮೇ.15 ರಂದು ಮದ್ಯಾಹ್ನ 1.45 ಗಂಟೆಯಿಂದ ಶ್ರೀ ದೇವಿಯ ಹೊನ್ನಾಟ ಬಳಿಕ ಮದ್ಯಾಹ್ನ 4.ಗಂಟೆಗೆ ಅಂಕಲಗಿಯ ಸಂಸ್ಥಾನಮಠದ ಶ್ರೀ ಮ.ನಿ.ಪ್ರ.ಸ್ವ. ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಗಳು, ಶ್ರೀ ಅಡವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಅರಳಿಕಟ್ಟಿ ವಿರಕ್ತಮಠದ ಶ್ರೀ ಮ.ನಿ.ಪ್ರ ಶಿವಮೂರ್ತಿ ಮಹಾಸ್ವಾಮಿಗಳ ಅಮೃತ ಹಸ್ತದಿಂದ ರಥೋತ್ಸವ ಉದ್ಘಾಟನೆಗೊಳ್ಳಲಿದೆ.

ಬಳಿಕ ಸಕಲ ವಾದ್ಯ ಮೇಳಗಳೊಂದಿಗೆ ರಥೋತ್ಸವ ಪ್ರಾರಂಭವಾಗಿ ಸಂಜೆ 6. ಗಂಟೆಗೆ ಶ್ರೀ ರೇಣುಕಾದೇವಿ(ಯಲ್ಲಮ್ಮನ) ಗುಡಿಯ ಎದುರಿಗೆ ರಥದ ವಾಸ್ತವ್ಯ.

ಗ್ರಾಮದ ಗಾಂಧಿ ಅಗಸಿ ಹತ್ತಿರ ರಾತ್ರಿ 10.ಗಂಟೆಗೆ “ಧರ್ಮದ ನುಡಿ ಬೆಂಕಿಯ ಕಿಡಿ” ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

16 ರಂದು ಪುನ: 12 30ಕ್ಕೆ ರಥೋತ್ಸವ ಪ್ರಾರಂಭವಾಗಿ ಆಲದ ಗಿಡದ ಶ್ರೀ ಕರೆಮ್ಮ ದೇವಿಗೆ ದೈವಾಚಾರಿಯಿಂದ ಉಡಿ ತುಂಬಿ ಮತ್ತೆ ರಥೋತ್ಸವ ಮುಂದುವರೆದು ಸಂಜೆ 6. ಗಂಟೆಗೆ ಜಿಡ್ಡಿಯಲ್ಲಿ ಮೂಲ ಪಾದ ಗಟ್ಟಿ ವಾಸ್ತವ್ಯ. ರಾತ್ರಿ 10.ಗಂಟೆಗೆ ರಥದ ಹತ್ತಿರ “ಸಂಗ್ಯಾಬಾಳ್ಯಾ” ನಾಟಕ ಪ್ರದರ್ಶನವಾಗಲಿದೆ.

17 ರಂದು ಮದ್ಯಾಹ್ನ 12.15ಕ್ಕೆ ಪಾದಗಟ್ಟೆಯಿಂದ ರಥೋತ್ಸವ ಪ್ರಾರಂಭವಾಗಿ ಶಾಲೆಯ ಆವರಣದಲ್ಲಿನ ಭವ್ಯ ಮಂಟಪದ ಹತ್ತಿರ ರಥೋತ್ಸವ ಮುಕ್ತಾಯವಾಗಿ ಶ್ರೀ ದೇವಿಯ ಹೋನ್ನಾಟದ ನಂತರ ಶೃಂಗರಿದ ಭವ್ಯ ಮಂಟಪದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪಣೆ ಗೊಳಿಸುವುದು.ಚಚಡಿ ಕಲಾತಂಡದವರಿಂದ ರಾತ್ರಿ 10. ಗಂಟೆಗೆ “ರೈತ ಚಲ್ಲಿದ ರಕ್ತ” ನಾಟಕ ಪ್ರದರ್ಶನಗೊಳ್ಳಲಿದೆ.

18 ರಂದು ಬೆಳಿಗ್ಗೆ 9 ಗಂಟೆಗೆ ಕುದುರೆ ಶರ್ಯತ್ತುಗಳು
(ರೌಂಡ ರೇಸ್ 5 ಕ್ಕಿಂತ ಹೆಚ್ಚು ಜೋಡಿಗಳು ಕೂಡಿದರೆ ಮಾತ್ರ) ಸಂಜೆ 5.ಗಂಟೆಗೆ ಶಿರಗುಪ್ಪಿಯ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ಸ್ವಾಮಿ ವಿವೇಕಾನಂದ ಯೋಗ ಮತ್ತು ಮಲ್ಲಕಂಭ ತರಬೇತಿ ಕೇಂದ್ರ ವತಿಯಿಂದ ಮಲ್ಲಕಂಭ,ರಾತ್ರಿ 9.ಗಂಟೆಗೆ ಕೊಲ್ಲಾಪೂರ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

19 ರಂದು ಬೆಳಿಗ್ಗೆ 9 ಗಂಟೆಗೆ ಜೋಡತ್ತಿನ ಖಾಲಿ ಭಂಡಿ ಶರ್ಯತ್ತುಗಳು,ಮದ್ಯಾಹ್ನ 3 ಗಂಟೆಗೆ ಕುಸ್ತಿಗಳು ನಡೆಯಲಿವೆ. ರಾತ್ರಿ 9 ಗಂಟೆಗೆ ದಾವೂದ ತಾಳಿಕೋಟಿ ತಂಡದವರಿಂದ “ಕಟಕ ರೊಟ್ಟಿ ಕಲ್ಲವ್ವ” ನಾಟಕ ಪ್ರದರ್ಶನವಾಗಲಿದೆ. 20 ರಂದು ಮುಂಜಾನೆ 9 ಗಂಟೆಗೆ ಸ್ಲೋ ಬೈಕ್ ಸ್ಪರ್ಧೆ, ಮದ್ಯಾಹ್ನ 3. ಗಂಟೆಯಿಂದ ಪ್ರಸಿದ್ದ ಕುಸ್ತಿಪಟುಗಳಿಂದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ.

ರಾತ್ರಿ10 ಗಂಟೆಗೆ ದಾವೂದ ತಾಳಿಕೊಟಿ ತಂಡದವರಿಂದ ಹಳ್ಳಿ ಹುಡುಗಿ ಮೊಸರು ಗಡಗಿ ನಾಟಕ ಮತ್ತು ಹೊನಲು ಬೆಳಕಿನಲ್ಲಿ ಕಬಡ್ಡಿಗಳು ನಡೆಯಲಿವೆ.

21 ರಂದು ಮುಂಜಾನೆ 9. ಗಂಟೆಗೆ ಟೇಲರ್ ಸಹಿತ ಟ್ರ್ಯಾಕ್ಟರ ರಿವರ್ಸ ಓಡಿಸುವ ಸ್ಪರ್ಧೆ, ರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಸವದತ್ತಿಯ ಶ್ರೀ ನಾಗಲಿಂಗ ಸಾಹಿತ್ಯ ಜಾಣಪದ ಕಲಾ ಪೋಷಕರ ಯುವ ಬಳಗ ಹಿರೇಬೂದನೂರ ಇವರ ಆಶ್ರಯದಲ್ಲಿ ಜಾಣಪದ ಉತ್ಸವ ಹಾಗೂ ಬಯಲಾಟ ಸಂಭ್ರಮ, ಗೀ ಗೀ ಪದ, ಜಾಣಪದ ಸಂಗೀತ, ಡೊಳ್ಳಿನ ಪದ, ಭಜನಾ ಪದ, ಖಣಿವಾದನ, ದೀಪನೃತ್ಯ, ಬಯಲಾಟ ಪದ, ಜೋಗತಿ ನೃತ್ಯ, ಸನ್ನಾಟದ ಪದ, ಶ್ರೀ ನಿಜಗುಣ ಶಿವಯೋಗಿ ಪೌರಾನಿಕ ನಾಟಕ ಸೇರಿದಂತೆ ಸೋಬಾನಪದಗಳು ನಡೆಯಲಿವೆ.

ಜಾತ್ರೆಯ ಕೊನೆಯ ದಿನ 22 ರಂದು ಮುಂಜಾನೆ 9 ಗಂಟೆಗೆ ವಿವಿಧ ಮಹನೀಯರಿಗೆ ಸತ್ಕಾರ ಸಮಾರಂಭ ನಡೆಯಲಿದೆ.

ಸಂಜೆ 4 ಗಂಟೆಯಿಂದ ದೇವಿಯ ಹೊನ್ನಾಟವು ಪ್ರಾರಂಭವಾಗಿ ಸಂಜೆಗೆ ಸಿಮೋಲಂಘನ ಮಾಡಿ ಜಾತ್ರೆಗೆ ಕೊನೆಗೊಳ್ಳಲಿದೆ ಎಂದು ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಕಮಿಟಿ ಹುದಲಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES
- Advertisment -spot_img

Most Popular

error: Content is protected !!