Monday, December 23, 2024
Google search engine
Homeಧಾರ್ಮಿಕಬಸವ ತತ್ವದ ಮೇಲೆಯೇ ರಾಜ್ಯ ಸರಕಾರದ ಆಡಳಿತ ನಡೆಯುತ್ತಿದೆ - ಲಕ್ಷ್ಮೀ ಹೆಬ್ಬಾಳಕರ್

ಬಸವ ತತ್ವದ ಮೇಲೆಯೇ ರಾಜ್ಯ ಸರಕಾರದ ಆಡಳಿತ ನಡೆಯುತ್ತಿದೆ – ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ : ಬಸವಣ್ಣನರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರಕಾರ ಘೋಷಣೆ ಮಾಡಿದೆ. ಅವರ ತತ್ವದ ಮೇಲೆಯೇ ನಮ್ಮ ಸರಕಾರದ ಆಡಳಿತ ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ವಿಶ್ವಗುರು ಜಗಜ್ಯೋತಿ ಶ್ರೀ ಬಸವಣ್ಣನವರ ಜಯಂತೋತ್ಸವದ ಅಂಗವಾಗಿ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವಡಗಾವಿ ಚಾವಡಿಗಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
 
ಬಸವಣ್ಣನವರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ. ಬಸವಣ್ಣನವರ ವಿಚಾರಗಳ ಕಡೆಗೆ ಜಗತ್ತು ತಿರುಗಿ ನೋಡುತ್ತಿದೆ. ನಮ್ಮ ಸರ್ಕಾರ ಬಸವಣ್ಣನವರ ಹಾದಿಯಲ್ಲೇ ನಡೆದುಕೊಂಡು ಬರುತ್ತಿದೆ ಎಂದು ಅವರು ಹೇಳಿದರು.

ನಮ್ಮ ಸರ್ಕಾರದ ಪ್ರತಿಯೊಂದು ಯೋಜನೆಯೂ ಬಸವಣ್ಣನವರ ಸರ್ವರಿಗೂ ಸಮಬಾಳು, ಸಮಪಾಲು ತತ್ವದಂತೆ ನಡೆಯುತ್ತಿದೆನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳು ಕೂಡ ಬಸವ ತತ್ವದಂತೆ ಜಾರಿಯಾಗಿದೆ. ಹಾಗಾಗಿ ನಾವು ಸಂಪೂರ್ಣ ಬಸವ ತತ್ವವನ್ನು ನಂಬಿ ನಡೆಯುವವರು ಎಂದು ಹೆಬ್ಬಾಳಕರ್ ತಿಳಿಸಿದರು.

 ಸ್ಥಳೀಯ ನಿವಾಸಿಗಳಾದ ಪರಶುರಾಮ ಢಗೆ, ಬಸವರಾಜ ಹತ್ತಿಮರದ, ನೀಲಕಂಠ ಹಂಚಿನಮನಿ, ಈರಪ್ಪ ತಿಗಡಿ, ಶ್ರೀಧರ್ ತಿಗಡಿ, ಈರಣ್ಣ ಹಲಗಿ, ಸುಭಾಷ್ ಮೂಡಲಗಿ, ನಿಜಗುಣಿ ಬಸ್ಸಾಪುರಿ, ಶಿವಪುತ್ರ ಹುಡೇದ್, ನಾಗಪ್ಪ ದೇವಗಾನಟ್ಟಿ, ಮಹೇಶ ಭರಮಯ್ಯನವರ, ಗುರಿಸಿದ್ದಪ್ಪ ತಿಗಡಿ, ರಮೇಶ ಹಳಿಜೋಳ, ಕಲ್ಲಪ್ಪ ತಿಗಡಿ ಸುಳೇಭಾವಿಯ ಗ್ರಾಮದ ಹಿರಿಯರಾದ ದತ್ತಾ ಬಂಡಿಗಣಿ, ಲಕ್ಷ್ಮಿನಾರಾಯಣ ಕಲ್ಲೂರ್ ಮೊದಲಾದವರು ಉಪಸ್ಥಿತರಿದ್ದರು.
RELATED ARTICLES
- Advertisment -spot_img

Most Popular

error: Content is protected !!