Thursday, October 16, 2025
Google search engine
Homeಸಂಪಾದಕೀಯಮತದಾನ ಪ್ರಮಾಣ ಹೆಚ್ಚಿಸಿ: ಜಿಪಂ ಸಿಇಒ ರಾಹುಲ್ ಶಿಂಧೆ
spot_img

ಮತದಾನ ಪ್ರಮಾಣ ಹೆಚ್ಚಿಸಿ: ಜಿಪಂ ಸಿಇಒ ರಾಹುಲ್ ಶಿಂಧೆ

ಬೆಳಗಾವಿ: ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವುದು, 2019ರ ಲೋಕಸಭಾ ಚುಣಾವಣೆಯಲ್ಲಿ ಕಡಿಮೆ ಮತದಾನದ ಮತಗಟ್ಟೆಗಳನ್ನು ಗುರುತಿಸಿ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಬೇಕು. ಅದಕ್ಕೆ ಕಾರಣಗಳನ್ನು ಹುಡುಕಿ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರ ಚುನಾವಣಾಧಿಕಾರಿ ಆಗಿರುವ ಜಿಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದರು.

ನಗರದ ಹಳೆ ಜಿಪಂ ಸಭಾಭವನದಲ್ಲಿ (ಮಾ.11) ಸೋಮವಾರ ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಸಂಬಂಧಿಸಿದಂತೆ ಪೂರ್ವ ತಯಾರಿ ಕುರಿತು ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.

ಹಿರಿಯ ನಾಗರಿಕರು, ವಿಶೇಷಚೇತನರಿಗೆ ಆದ್ಯತೆ ಮೇಲೆ ಮತದಾನದ ಜಾಗೃತಿ ಮೂಡಿಸುವುದು. ಸ್ವೀಪ್ ಚಟುವಟಿಕೆಗಳನ್ನು ಕಾಟಾಚಾರಕ್ಕೆ ಮಾಡದೇ, ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಾರದ ಹಾಗೂ ತಿಂಗಳ ಯೋಜನೆ ಮಾಡಿಕೊಂಡು ಜಿಲ್ಲೆಯಾದ್ಯಂತ ಸ್ವೀಪ್ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ತಾಲ್ಲೂಕಾವಾರು ಹಮ್ಮಿಕೊಳ್ಳುವ ಸ್ವಿಪ್ ಚಟುವಟಿಕೆಗಳ ಕ್ರಿಯಾ ಯೋಜನೆಗಳನ್ನು ಎರಡು ದಿನದೊಳಗಾಗಿ ಸಲ್ಲಿಸಲು ತಿಳಿಸಿದರು. ನಗರ ಹಾಗೂ ಗ್ರಾಮಿಣ ಪ್ರದೇಶದಲ್ಲಿ ಸ್ವಚ್ಛ ವಾಹಿನಿಯ ಧ್ವನಿವರ್ಧಕಗಳ ಮೂಲಕ ಪ್ರತಿದಿನ ಬೆಳಗ್ಗೆ ಮತದಾನದ ಜಾಗೃತಿ ಮೂಡಿಸಬೇಕು. 80, 90 ಹಾಗೂ 100 ವರ್ಷದ ಮೇಲಿನ ಮತದಾರರನ್ನು ಗುರುತಿಸಬೇಕು. ಪೋಸ್ಟಲ್ ಬ್ಯಾಲೆಟ್ ಗೆ ಸಂಬಂಧಿಸಿದಂತೆ ಮತಗಟ್ಟೆಗಳಿಗೆ ಬಂದು ಮತದಾನ ಮಾಡಲು ಆಗದೇ ಇರುವ 85 ವರ್ಷ ಮೇಲ್ಪಟ್ಟ ಮತದಾರರನ್ನು ಖುದ್ದಾಗಿ ಅಧಿಕಾರಿಗಳು ಭೇಟಿ ನೀಡಿ ಪಟ್ಟಿ ಸಿದ್ಧಪಡಿಸಬೇಕು. ಎ.ಎಂ.ಎಫ್ ಗೆ ಸಂಬಂಧಿಸಿದಂತೆ ಸಣ್ಣ ಪುಟ್ಟ ರಿಪೇರಿಗಳಿದ್ದು, ಅವುಗಳನ್ನು ಎರಡು ದಿನದೊಳಗಾಗಿ ಪೂರ್ಣಗೊಳಿಸುವುದು. ಕ್ರಿಟಿಕಲ್ ಮತ್ತು ವಲ್ನರೇಬಲ್ ಮತಗಟ್ಟೆಗಳಿಗೆ ಭೇಟಿ ನೀಡಬೇಕು. ತಾಲೂಕಾವಾರು ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಸ್ಥಳ ಪರಿಶೀಲನೆ ನಡೆಸಿ, ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

 

ಈ ಸಂದರ್ಭದಲ್ಲಿ ಲೊಕೇಶ ಪಿ.ಎನ್. ಆಯುಕ್ತರು ಮಹಾನಗರ ಪಾಲಿಕೆ ಬೆಳಗಾವಿ, ಸೋಮಲಿಂಗ ಗೆಣ್ಣೂರ ವ್ಯವಸ್ಥಾಪಕ ನಿರ್ದೇಶಕರು ಸ್ಮಾರ್ಟ ಸಿ.ಟಿ ಬೆಳಗಾವಿ, ಸತ್ಯನಾರಾಯಣ ಭಟ್ ಜಂಟಿ ನಿರ್ದೇಶನಕರು, ಜಿಲ್ಲಾ ಕೈಗಾರಿಕೆ ಕೇಂದ್ರ ಬೆಳಗಾವಿ, ಜಂಟಿ ನಿರ್ದೇಶಕರು ಕೋ-ಆಪರೇಟಿವ ಅಡಿಟ್ ಬೆಳಗಾವಿ, ಜಿಲ್ಲಾ ಪಂಚಾಯತಿಯ ರೇಖಾ ಡೊಳ್ಳಿನವರ ಉಪಕಾರ್ಯದರ್ಶಿ (ಆಡಳಿತ), ಬಸವರಾಜ ಅಡವಿಮಠ ಉಪಕಾರ್ಯದರ್ಶಿ (ಅಭಿವೃದ್ಧಿ), ಗಂಗಾಧರ ದಿವಟರ್ ಯೋಜನಾ ನಿರ್ದೇಶಕರು, ಮಲ್ಲಿಕಾರ್ಜುನ ಕಲಾದಗಿ ಪಿ.ಡಿ. ಡಿ.ಯು.ಡಿ.ಸಿ, ಉಪ ವಿಭಾಗಾಧಿಕಾರಿ ಚಿಕ್ಕೋಡಿ, ಬೆಳಗಾವಿ, ತಹಶೀಲ್ದಾರರು ಚಿಕ್ಕೋಡಿ, ರಾಯಬಾಗ, ಅಥಣಿ, ನಿಪ್ಪಾಣಿ, ಕಾಗವಾಡ ಹಾಗೂ ಹುಕ್ಕೇರಿ ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular

error: Content is protected !!