ಬೆಳಗಾವಿ : ಏಷ್ಯಾಕಪ್ ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಪಂದ್ಯ ಆಡಬಾರದು ಎಂದು ಶ್ರೀರಾಮ ಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.
ಶುಕ್ರವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದುಬೈನಲ್ಲಿ ಏಷ್ಯಾ ಕಪ್ ನಲ್ಲಿ ಭಾರತ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ನಮ್ಮ ವಿರೋಧ ಇದೆ. ಇದಕ್ಕೆ ಬಹಿಷ್ಕಾರ ಹಾಕಬೇಕು. ಪಂದ್ಯಕ್ಕೆ ಇನ್ನು ಎರಡು ದಿನ ಉಳಿದಿದ್ದರೂ ಕೂಡ ಈಗಾಗಲೇ ಈ ಸಂಬಂಧ ಕರ್ನಾಟಕ ಕ್ರಿಕೆಟ್ ಮಂಡಳಿಗೆ ಮನವಿ ಸಲ್ಲಿಸಿದ್ದೇನೆ. ಕೇಂದ್ರ ಸರಕಾರಕ್ಕೆ ನಾಚಿಕೆ, ಮಾನಾ ಮರ್ಯಾದೆ ಇದ್ದರೇ ಪಂದ್ಯ ರದ್ದುಗೊಳಿಸಬೇಕು. ಪೆಹಲ್ಗಾಮ್ ಘಟನೆಯ ಬಳಿಕ ಕೇಂದ್ರ ಸರಕಾರ ಘೋಷಿಸಿದಂತೆ ಪಾಕಿಸ್ತಾನದ ಜೊತೆಗೆ ಎಲ್ಲ ತರಹದ ಸಂಬಂಧವನ್ನು ಕಡಿತಗೊಳಿಸಬೇಕು. ಪೆಹಲ್ಗಾಮ್ ನಲ್ಲಿ ಹತ್ಯೆಯಾದ ಭೂಷಣ ಮನೆಗೆ ಭೇಟಿ ನೀಡಿದಾಗ ಅವರ ಮನೆಯವರು ಕಣ್ಣೀರು ಹಾಕುತ್ತಿದ್ದಾರೆ. 26 ಜನರನ್ನು ಕಳೆದುಕೊಂಡವರ ದುಖಃ ಇನ್ನೂ ಮಾಸಿಲ್ಲ. ಇಷ್ಟು ಆತುರವಾಗಿ ಪಾಕ್ ಜೊತೆಗೆ ಕ್ರಿಕೆಟ್ ಆಡುವ ಅವಶ್ಯಕತೆ, ಅನಿವಾರ್ಯತೆ ಏನಿದೆ.? ಕೇಂದ್ರ ಸರ್ಕಾರಕ್ಕೆ ನಾಚಿಕೆ, ಮಾನ ಮರ್ಯಾದೆಯಿಲ್ಲ ಎಂದು ವಾಗ್ದಾಳಿ ಮಾಡಿದರು.
78 ವರ್ಷಗಳಿಂದ ಪಾಕಿಸ್ತಾನ ಏನು ಮಾಡಿದೆ ಎಂಬುದು ನಿಮಗೆ ಗೊತ್ತಿಲ್ಲವೇ..? ಮೂರು ಬಾರಿ ಕೇಂದ್ರದಲ್ಲಿ ನಿಮ್ಮನ್ನು ಅಧಿಕಾರಕ್ಕೆ ತಂದಿದ್ದು ಯಾತಕ್ಕೆ.? ಹಿಂದೂಗಳು ಇಲ್ಲಿ ಸುರಕ್ಷಿತವಾಗಿ ಇರಬೇಕು ಎಂಬ ಉದ್ದೇಶದಿಂದ. ನಿಮಗೆ ದುಡ್ಡೇ ಅವಶ್ಯಕತೆ ಆಗಿದ್ದರೆ 100 ಕೋಟಿ ಹಿಂದೂಗಳು ನಿಮ್ಮನ್ನು ದುಡ್ಡಿನಲ್ಲಿ ಮುಳುಗಿಸುತ್ತೇವೆ. ಆದರೆ, ಈ ರೀತಿ ಹಿಂದೂಗಳನ್ನು ಹತ್ಯೆ ಮಾಡುವ ಭಯೋತ್ಪಾದಕರ ಜೊತೆಗೆ ಆಟ ಆಡಲು ಹೋಗಬೇಡಿ ಎಂದು ಕೇಂದ್ರಕ್ಕೆ ಎಚ್ಚರಿಕೆ ಕೊಟ್ಟರು.
ಎಪ್ರೀಲ್ 22ರ ನಂತರ ಪಾಕ್ ಜೊತೆಗಿನ ಎಲ್ಲವನ್ನು ಬಹಿಷ್ಕಾರ ಮಾಡಿದಿರಿ. ನೀರು, ರೈಲು, ವ್ಯಾಪಾರ, ವಹಿವಾಟು ಸೇರಿ ಎಲ್ಲ ಸಂಬಂಧವನ್ನು ಕಡಿತಗೊಳಿಸಿದಿರಿ. ಇಷ್ಟೇಲಾ ಮಾಡಿದ ಮೇಲೆ ಇಂದು ಕ್ರಿಕೆಟ್ ಆಡುವ ಅವಶ್ಯಕತೆ ಏನಿದೆ..? ನೀವು ರಾಷ್ಟ್ರಕ್ಕೆ ಮಾಡಿದ ದ್ರೋಹ. ನೂರು ಕೋಟಿ ಹಿಂದೂಗಳು ನಿಮ್ಮನ್ನು ಕ್ಷಮಿಸುವುದಿಲ್ಲ. ಸಿಂಧೂರ ಅಳಿಸಿ 26 ವಿಧವೆಯರನ್ನು ಭೇಟಿಯಾಗಿ ಅವರ ನೋವನ್ನು ನೀವು ಕೇಳಿದ್ದಿರಾ..? ಪಾಪಿ ಪಾಕಿಸ್ತಾನ ಭಯೋತ್ಪಾದಕರ ತಾಯಿ, ಕಾರ್ಖಾನೆ ಅಂತೆಲ್ಲಾ ಜಗತ್ತಿನ ವಿವಿಧ ದೇಶಗಳಿಗೆ ಹೋಗಿ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹೋಗಿ ಹೇಳಿ ಬಂದಿದ್ದು ಯಾವುದಕ್ಕೆ. ನಿಮಗೆ ದುಡ್ಡೇ ಮುಖ್ಯವಾಗಿದ್ದು, ಹಿಂದೂಗಳು ಮತ್ತು ದೇಶ ಮುಖ್ಯವಾಗಿಲ್ಲ. ಈಗಲೂ ಕಾಲ ಮಿಂಚಿಲ್ಲ. ನಾಡಿದ್ದು ಮ್ಯಾಚ್ ಇದೆ. ಪಾಕಿಸ್ತಾನ ಜೊತೆಗೆ ನಾವು ಆಡುವುದಿಲ್ಲ ಅಂತಾ ಘೋಷಿಸುವಂತೆ ಒತ್ತಾಯಿಸಿದರು.
ದೆಹಲಿಯ ನಾಲ್ಕು ಕಾನೂನು ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ಗೆ ಪಾಕಿಸ್ತಾನ ಜೊತೆಗೆ ಕ್ರಿಕೆಟ್ ಆಡುವುದನ್ನು ನಿಲ್ಲಿಸುವಂತೆ ಅರ್ಜಿ ಸಲ್ಲಿಸಿದರೆ, ನಾವು ಅರ್ಜಿಯನ್ನೆ ಸ್ವೀಕರಿಸಿಲ್ಲ ಎಂದು ಕೋರ್ಟ್ ಹೇಳಿದೆ. ಅಲ್ಲದೇ ಕ್ರಿಕೆಟ್ ಆಡಲಿ ಎಂದು ಹೇಳಿದ್ದಾರೆ. ಜಡ್ಜ್ ಗಳ ಮಕ್ಕಳು, ಬಿಸಿಸಿಐ-ಐಸಿಸಿಐ ಅಧ್ಯಕ್ಷರ ಮಕ್ಕಳು ಯಾರೂ ಪೆಹಲ್ಗಾಮ್ ನಲ್ಲಿ ಭಯೋತ್ಪಾದಕರ ಯಾವ ಮಕ್ಕಳು ಸತ್ತಿಲ್ಲ. ದೇಶದ ಮಾನ, ಮರ್ಯಾದೆ ಪ್ರಶ್ನೆಯಿಂದ ಭಾನುವಾರ ಪಾಕ್ ಜೊತೆಗಿನ ಪಂದ್ಯವನ್ನು ಬಹಿಷ್ಕರಿಸುವಂತೆ ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಷಾಗೆ ಆಗ್ರಹಿಸಿದರು.
ಮದ್ದೂರು ಘಟನೆ ಮೊದಲು ಅಲ್ಲ, ಕೊನೆಯದ್ದೂ ಅಲ್ಲ.
ಮುಸ್ಲಿಂ ಮಾನಸಿಕತೆ ಬದಲಾವಣೆ ಆಗೋವರೆಗೆ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಹಿಂದೂ ಸಮಾಜದ ಹೇಡಿ ವರ್ತನೆಯೆ ಇದಕ್ಕೆ ಕಾರಣ. ಹಿಂದೂ ಸಮಾಜ ಇದಕ್ಕೆ ಉತ್ತರ ಕೊಡುತ್ತದೆ. ಹಿಂದೂ ಹಬ್ಬ ಅಪಮಾನ ಮಾಡುವರ ಮನೆ ಹೊಕ್ಕು ಹೊಡೆಯುತ್ತೇವೆ. ಕಲ್ಲು ಎಸೆಯುವ ಮಾನಸಿಕತೆ ಬಿಡಬೇಕು ಎಂದು ಪ್ರಮೋದ ಮುತಾಲಿಕ್ ಎಚ್ಚರಿಸಿದರು.
ಶಿವಮೊಗ್ಗದಲ್ಲಿ ಸಾಗರದಲ್ಲಿ ಗಣೇಶನ ಮೇಲೆ ಉಗುಳಿದ್ದಾರೆ. ಮದರಸಾದಲ್ಲಿ ವಿಷ ತುಂಬುವ ಕೆಲಸ ಆಗುತ್ತಿದೆ. ರಾಜ್ಯದ ಐದು ಕಡೆ ಪಾಕ್ ಪರ ಘೋಷಣೆ ಕೂಗಿದ್ದಾರೆ. ಪಾಕ್ ಬೀಕಾರಿ ರಾಷ್ಟ್ರವಾಗಿದೆ. ಕಾಂಗ್ರೆಸ್ ನಾಯಕರಿಂದ ಮುಸ್ಲಿಂರ ಓಲೈಕೆಯೆ ಇದಕ್ಕೆ ಕಾರಣ.
ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯನ್ನು ಪೊಲೀಸ್ ಇಲಾಖೆ ನೀಡಬೇಕು. ಪೊಲೀಸರು ರಾಜಕೀಯ ನಾಯಕರ ಬಾಲ ಬಡಿಯಬೇಡಿ. ದೇಶಕ್ಕೆ ದ್ರೋಹ ಮಾಡುವ ಕೆಲಸ ಪೊಲೀಸರು ಮಾಡಬಾರದು. ಬಿಜೆಪಿಯವರಿಗೆ ಅಧಿಕಾರ ಇಲ್ಲ ಈಗ ಹಿಂದುತ್ವ ಎನ್ನುತ್ತಾರೆ. ಅಧಿಕಾರಕ್ಕೆ ಬಂದಾಗ ಹಿಂದೂಗಳನ್ನು ಮರೆಯುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳ ವಿರುದ್ಧ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.