Wednesday, October 15, 2025
Google search engine
Homeಜಿಲ್ಲಾಆಪರೇಷನ್ ಮಹಾದೇವ್ ಯಶಸ್ಸಿಗೆ ಕಾರಣರಾದ ವೀರಯೋಧರಿಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾರಿಂದ ಸನ್ಮಾನ
spot_img

ಆಪರೇಷನ್ ಮಹಾದೇವ್ ಯಶಸ್ಸಿಗೆ ಕಾರಣರಾದ ವೀರಯೋಧರಿಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾರಿಂದ ಸನ್ಮಾನ

• ಭಾರತೀಯರ ಜೀವಕ್ಕೆ ಯಾವುದೇ ತೊಂದರೆ ಉಂಟು ಮಾಡಿದರೆ ಶಿಕ್ಷೆ ಶತಃಸ್ಸಿದ್ಧ ಎಂಬ ಸಂದೇಶ

• ಆಪರೇಷನ್ ಸಿಂದೂರ್ ಭರವಸೆ ತುಂಬಿದರೆ ಆಪರೇಷನ್ ಮಹಾದೇವ್ ನಂಬಿಕೆ ಹುಟ್ಟಿಸಿದೆ

ವೀರಾವೇಷದಿಂದ ಹೋರಾಡಿ ಆಪರೇಷನ್ ಮಹಾದೇವ್ ಅನ್ನು ಯಶಸ್ವಿಗೊಳಿಸಿದ ವೀರಯೋಧರನ್ನು ಇದೀಗ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಸನ್ಮಾನಿಸಿ ಗೌರವ ಸಲ್ಲಿಸಿದ್ದಾರೆ. ಈ ಮೂಲಕ ಅವರು ತಾವು ಭಾರತದ ಭದ್ರತಾ ಕಾರ್ಯತಂತ್ರಗಳ ಹಿಂದಿರುವ ಶಕ್ತಿ ಮಾತ್ರವೇ ಅಲ್ಲ, ಅದರ ಜೊತೆಗೆ ತಾವು ರಾಷ್ಟ್ರದ ವೀರ ಸೈನಿಕರಿಗೆ ಸ್ಫೂರ್ತಿ ಹಾಗೂ ರಕ್ಷಕರೂ ಆಗಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಆಪರೇಷನ್ ಮಹಾದೇವ್ ನಲ್ಲಿ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ತಂಡ ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳು ಭಾಗವಹಿಸಿದ್ದವು. ಅಸಾಧಾರಣ ಧೈರ್ಯ ಮತ್ತು ಬದ್ಧತೆ ಪ್ರದರ್ಶಿಸಿದ್ದವು. ಅವರ ಈ ಧೌರ್ಯ ಶೌರ್ಯಕ್ಕೆ ಗೌರವ ಸಲ್ಲಿಸಿರುವ ಅಮಿತ್ ಶಾ ಅವರು ಈ ಸಿಬ್ಬಂದಿಗಳ ಹೋರಾಟ ಇಡೀ ರಾಷ್ಟ್ರಕ್ಕೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ. ಗೃಹ ಸಚಿವರು ಹಿಂದಿನಿಂದಲೇ ಭದ್ರತಾ ಪಡೆಗಳ ಮನೋಬಲವನ್ನು ಉತ್ತೇಜಿಸುವ ಕೆಲಸ ಮಾಡುತ್ತಲೇ ಬಂದಿದ್ದು, ಈ ಸಿಬ್ಬಂದಿಗಳ ಸೇವೆಯನ್ನು ಗೌರವಿಸಲು ಮತ್ತು ರಾಷ್ಟ್ರೀಯ ಭದ್ರತೆಯ ದೃಢ ಸ್ತಂಭಗಳಾಗಿರುವ ಅವರಿಗೆ ಬಲ ತುಂಬಲು ಬೇಕಾದ ಎಲ್ಲಾ ಸಹಾಯವನ್ನು ಒದಗಿಸುತ್ತಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅದ್ಭುತ ನಾಯಕತ್ವ ಮತ್ತು ಗೃಹ ಸಚಿವರ ದೃಢ ಆಲೋಚನೆಗಳ ಫಲವಾಗಿ ಭಾರತವು ಭಯೋತ್ಪಾದನೆಯ ವಿರುದ್ಧ ಮಹತ್ವದ ಯುದ್ಧವನ್ನು ಕೈಗೊಂಡಿದೆ. ಜೊತೆಗೆ ಭದ್ರತೆ, ಅಭಿವೃದ್ಧಿ ಮತ್ತು ಸ್ವಾವಲಂಬನೆ ಸಾಧಿಸುವ ವಿಚಾರದಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದೆ. ಶಾ ಅವರ ದೃಢ ಮಾರ್ಗದರ್ಶನದಿಂದ ರಾಷ್ಟ್ರವು ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಆಂತರಿಕ ಭದ್ರತೆಗೆ ಸವಾಲು ಹಾಕುವ ಅಂಶಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ ಮತ್ತು ಕೈಗೊಳ್ಳುತ್ತಿದೆ.

ಕಳೆದ ಹಲವು ವರ್ಷಗಳಲ್ಲಿ ಅಮಿತ್ ಶಾ ಅವರ ದೂರದೃಷ್ಟಿಯ ದೃಷ್ಟಿಕೋನ ಮತ್ತು ದೃಢ ಸಂಕಲ್ಪವು ಭದ್ರತಾ ಪಡೆಗಳಿಗೆ ಭಾರಿ ವಿಶ್ವಾಸವನ್ನು ತುಂಬಿದೆ. ಅವರು ರಾಷ್ಟ್ರದ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿರುವುದನ್ನು ಈ ರಾಷ್ಟ್ರದ ನಾಗರಿಕರು ಕಂಡಿದ್ದಾರೆ. ಅಮಿತ್ ಶಾ ಅವರ ನೀತಿಗಳು ಭಾರತೀಯ ನಾಗರಿಕರ ಸುರಕ್ಷತೆಗೆ ಕುಂದುಂಟಾದರೆ ಶಿಕ್ಷೆ ಶತಃಸ್ಸಿದ್ಧ ಎಂಬ ಸ್ಪಷ್ಟ ಸಂದೇಶವನ್ನು ಭಯೋತ್ಪಾದಕರಿಗೆ ಸಾರಿವೆ.

ಆಪರೇಷನ್ ಸಿಂದೂರ್ ಮೂಲಕ ಗಡಿಯಾಚೆಗಿನ ಭಯೋತ್ಪಾದಕರ ಗುಪ್ತ ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಭಯೋತ್ಪಾದಕರು ಅಲ್ಲಿಂದ ಓಡಿಹೋಗುವಂತೆ ಮಾಡಲಾಯಿತು. ನಂತರ ನಡೆದ ಆಪರೇಷನ್ ಮಹಾದೇವ್ ಅಂತೂ ಪಹಲ್ಗಾಮ್ ದಾಳಿಗೆ ಕಾರಣರಾದ ಭಯೋತ್ಪಾದಕರನ್ನು ಸರ್ವನಾಶ ಮಾಡಿತು. ಭದ್ರತಾ ಪಡೆ ಈ ಮೂಲಕ ಭಯೋತ್ಪಾದಕರಿಗೆ ದೊಡ್ಡ ಹೊಡೆತವನ್ನೇ ನೀಡಿತು.

ಆಪರೇಷನ್ ಸಿಂದೂರ್ ದೇಶದ ಜನರಲ್ಲಿ ಭರವಸೆಯನ್ನು ತುಂಬಿದರೆ, ಆಪರೇಷನ್ ಮಹಾದೇವ್ ಜನರಲ್ಲಿ ನಂಬಿಕೆಯನ್ನು ಹುಟ್ಟಿಸಿದೆ. ಈ ಎರಡೂ ಕಾರ್ಯಾಚರಣೆಗಳು ಜನರಲ್ಲಿ ಸುರಕ್ಷತೆಯ ಭಾವನೆಯನ್ನು ಉಂಟುಮಾಡುವಲ್ಲಿ ಯಶಸ್ವಿಯಾಗಿವೆ ಮತ್ತು ವಿಶೇಷವಾಗಿ ಭಾರತವು ಈಗ ಯಾವುದೇ ಭಯೋತ್ಪಾದಕ ಘಟನೆಗಳನ್ನು ನೇರವಾಗಿ ಎದುರಿಸಬಲ್ಲದು ಎಂಬುದನ್ನು ಜಗತ್ತಿಗೆ ಸಾರಿವೆ.

ಶಾ ಅವರ ನಾಯಕತ್ವದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಪಹಲ್ಗಾಮ್ ದಾಳಿಗೆ ಕಾರಣರಾದ ಭಯೋತ್ಪಾದಕರನ್ನು ಸರ್ವನಾಶಪಡಿಸುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಈ ಗೆಲುವು ಕೇವಲ ಭದ್ರತಾ ಪಡೆಗಳಿಗೆ ಮಾತ್ರವಲ್ಲ, ಇಡೀ ರಾಷ್ಟ್ರದ ಆತ್ಮಗೌರವಕ್ಕೆ ಸಂದ ಗೆಲುವಾಗಿದೆ. ಹಾಗಾಗಿ ಇಂದು ಭಯೋತ್ಪಾದನೆಯ ವಿರುದ್ಧ ಭಾರತದ ಶ್ರೇಷ್ಠ ಶಸ್ತ್ರ ಏನೆಂದು ಕೇಳಿದರೆ ಅದು ಸಾರ್ವಜನಿಕರ ನಂಬಿಕೆ ಮತ್ತು ಭದ್ರತಾ ಸಿಬ್ಬಂದಿಯ ಶಕ್ತಿ ಎಂದು ಹೇಳಬಹುದಾಗಿದೆ.

ಶಾ ಅವರ ದೃಢ ನಿರ್ಧಾರಗಳಿಂದ ಭಯೋತ್ಪಾದಕ ಸಂಘಟನೆಗಳು ದುರ್ಬಲಗೊಂಡಿವೆ. ಭಾರತದ ಭಯೋತ್ಪಾದನೆಯ ವಿರುದ್ಧದ ಯುದ್ಧವು ಈಗ ರಾಷ್ಟ್ರದ ಅಸ್ಮಿತೆಯ ಅವಿಭಾಜ್ಯ ಭಾಗವಾಗಿದೆ. ಅದರಲ್ಲೂ ವಿಶೇಷವಾಗಿ ಈ ಯುದ್ಧವು ದೇಶದ ಗಡಿಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ಕೂಡ ಗಮನಾರ್ಹ. ಭಾರತದ ಜಾಗತಿಕ ಖ್ಯಾತಿಯನ್ನು ಹೆಚ್ಚಿಸಿರುವ ಶಾ ಅವರು, ಭಯೋತ್ಪಾದನೆಯ ವಿರುದ್ಧದ ಹೋರಾಟವು ದೇಶದ ಗಡಿಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ದೇಶದ ಆಂತರಿಕ ಶಕ್ತಿ ಕಾಪಾಡುವುದಕ್ಕೂ ಬಳಕೆಯಾಗುತ್ತಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಇಂದು ಭಾರತವು ಭಯೋತ್ಪಾದನೆಯ ವಿರುದ್ಧ ದೃಢವಾಗಿ, ಗಟ್ಟಿಯಾಗಿ ಹೋರಾಡುತ್ತಿದೆ. ಎಲ್ಲಾ ಭಾರತೀಯರು ಕೂಡ ತಮ್ಮ ದೇಶದ ಜೊತೆ ನಿಲ್ಲುವ ಮೂಲಕ ಈ ಭದ್ರತಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಗೆಲುವಿನ ಭಾಗವಾಗುತ್ತಿದ್ದಾರೆ.

ಶಾ ಅವರ ಅಪೂರ್ವ ನಾಯಕತ್ವದಿಂದ ಸ್ಫೂರ್ತಿ ಪಡೆದಿರುವ ಪ್ರತಿಯೊಬ್ಬ ಭಾರತೀಯ ನಾಗರಿಕರೂ ಇಂದು ಭದ್ರತಾ ಕಾರ್ಯಾಚರಣೆಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಜೊತೆಗೆ ದೇಶದ ರಕ್ಷಣೆಯನ್ನು ತನ್ನ ಜವಾಬ್ದಾರಿ ಎಂದು ಭಾವಿಸುತ್ತಾರೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಶಾ ಅವರ ದಿಟ್ಟ ಕ್ರಮಗಳು ಮತ್ತು ದೃಢ ಸಂಕಲ್ಪದಿಂದ ಭಾರತದ ಭದ್ರತಾ ವ್ಯವಸ್ಥೆ ಗಟ್ಟಿಯಾಗಿದೆ ಮತ್ತು ಆತ್ಮವಿಶ್ವಾಸವು ಬಹಳಷ್ಟು ಜಾಸ್ತಿಯಾಗಿದೆ.

RELATED ARTICLES
- Advertisment -spot_img

Most Popular

error: Content is protected !!