ಬೆಳಗಾವಿ: ಎಲ್ಲ ವಲಯಗಳಲ್ಲಿ ಕೇಂದ್ರ ಸರಕಾರ ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ವಿಶೇಷವಾಗಿ ಕಾರ್ಮಿಕರಿಗಾಗಿ ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ದೊರತು ಕಳೆದ ಆ.15ಕ್ಕೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ ಎಂದು ಕೇಂದ್ರ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಹಣಕಾಸು ಸಲಹೆಗಾರ್ತಿ ಮಧುಮತಿ ದಾಸ್ ಹೇಳಿದರು.
ಇಲ್ಲಿನ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯಮಟ್ಟದ ಪಾಲುದಾರರ ಕಾರ್ಯಕ್ರಮದಲ್ಲಿ ಮಾತನಾಡಿದರು. ಎರಡೂ ವರ್ಷದಲ್ಲಿ ಒಂದು ಲಕ್ಷ ಕೋಟಿ ರೂ. ವೆಚ್ಚದಲ್ಲಿ 3.5 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿಯನ್ನು ಬೆಂಬಲಿಸಲು ಎರಡೂ ಕಂತುಗಳಲ್ಲಿ ಮೊದಲ ಉದ್ಯೋಗ ಪಡೆದವರಿಗೆ 15 ಸಾವಿರ ವರೆಗೆ ವೇತನ ಪಡೆಯುವ ಯೋಜನೆ ಇದಾಗಿದೆ. ಇದರ ಸದುಪಯೋಗ ಎಲ್ಲ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜಗಾರ್ ಯೋಜನೆ ಕಾರ್ಮಿಕರಿಗೆ ಬಲ ನೀಡಲಿದೆ ಎಂದರು.
ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆಯೊಂದಿಗೆ ದೇಶದಲ್ಲಿರುವ ಎಲ್ಲ ರಾಜ್ಯ ಸರಕಾರಗಳು ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿಸಲು ಪ್ರೋತ್ಸಾಹ ನೀಡಬೇಕು. ಅಲ್ಲದೆ ಹೊಸ ಉದ್ಯೋಗ ಮಾಡುವವರಿಗೆ ಆದ್ಯತೆ ಅನುಸಾರ ಯುವಕ ಹಾಗೂ ಮಹಿಳೆಯರಿಗೆ ಸಾಮಾಜಿಕ ಭದ್ರತೆ ಕೊಡವುದು ಅತ್ಯವಶ್ಯಕವಾಗಿದೆ ಎಂದರು.
ಆಗಸ್ಟ್ ತಿಂಗಳ 1ರ ಬಳಿಕ ಹೊಸ ಉದ್ಯೋಗ ಸೃಷ್ಟಿ ಮಾಡುವ ಪ್ರತಿ ಉದ್ಯೋಗದಾತರಿಗೆ ಪ್ರತಿ ತಿಂಗಳು ಮೂರು ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಮ್ಯಾನಿಫ್ಯಾಕ್ಚರಿಂಗ್ ಸೆಕ್ಟರ್ ನಲ್ಲಿ ನಾಲ್ಕು ವರ್ಷಗಳ ಕಾಲ ಯೋಜನೆ ಲಾಭ ಇರುತ್ತದೆ. ಉಳಿದ ಎಲ್ಲ ವಲಯಗಳಿಗೆ ಎರಡೂ ವರ್ಷ ಮಾತ್ರ ಇರುತ್ತದೆ ಎಂದರು.
ಕಾರ್ಮಿಕ ಇಲಾಖೆಯ ಉಪನಿರ್ದೇಶಕ ರಘುರಾಮನ್, ಸಿಬಿಟಿ ಸದಸ್ಯ ಇಪಿಎಫ್ ಓ, ಡಾ. ಸಚಿನ ಸಬ್ನಿಸ್, ಅಡಿಷನಲ್ ಸೆಂಟ್ರಲ್ ಪ್ರೌಂಡೆಂಟ್ ಫಂಡ್ ಕಮಿಷ್ನರ್ ಹೆಡ್ ಕ್ವಾರ್ಟರ್ಸ್ ಬೆಂಗಳೂರು ಜೋನ್ ನ ಅನಿತಾ ದೀಕ್ಷಿತ್, ಸಿಬಿಟಿ ಸದಸ್ಯ ಮಧು ಧಾಮೋದರನ್, ಅಡಿಷನಲ್ ಸೆಂಟ್ರಲ್ ಪ್ರೌಂಡೆಂಟ್ ಫಂಡ್ ಕಮಿಷ್ನರಒನ್ ಕರ್ನಾಟಕ ( ಅದರ್ ದೆನ್ ಬೆಂಗಳೂರು ಆಂಡ್ ಗೋವಾ) ಆರೀಫ್ ಲೋಹನಿ, ಆರ್ ಪಿಎಸ್ ಸಿ1 ಜೆಡ್ ಓ ಬೆಂಗಳೂರು, ಶಶಾಂಕ ದಿನಕರ್, ಆರ್ ಪಿಎಫ್ ಸಿ ಒಬ್ ಜೆಡ್ ಓ ಹುಬ್ಬಳಿಯ ಪರಿಪೂರ್ಣನಾಥ್, ಮಿಹೀರ್ ಕುಮಾರ ಆರ್ ಪಿಎಸ್ ಒನ್ ಆರ್ ಓ ಮಲ್ಲೇಶ್ವರಂ, ರಮಕೇಶ್ ಮೀನಾ ಆರ್ ಪಿಎಫ್ ಸಿ ಒನ್ ಆರ್ ಓ ಹುಬ್ಬಳ್ಳಿ, ಪ್ರವರ್ತನಾ ಅಧಿಕಾರಿ ಮಹೇಶ ಗಿಂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.