ಬೆಳಗಾವಿ: ಇಲ್ಲಿನ ಕ್ಯಾಂಪ್ ನಲ್ಲಿರುವ ದಕ್ಷಿಣ ಮಹಾರಾಷ್ಟ್ರ ಮಂಡಳಿಯ ಜ್ಯೋತಿ ಸೆಂಟ್ರಲ್ ಸ್ಕೂಲ್ ಗೆ ಐಎಸ್ ಓ 9001 2015 ಮಾನ್ಯತೆ ದೊರೆತಿದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಕೆ ಪಾಟೀಲ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಸೇವೆಯನ್ನು ಗುರುತಿಸಿ ಈ ಐಎಸ್‌ಒ ಮಾನ್ಯೆತ ನೀಡಲಾಗುತ್ತದೆ. ಉದ್ಯಮ, ಆರೋಗ್ಯ ಮತ್ತು ಶಿಕ್ಷಣದ ಗುಣಮಟ್ಟವನ್ನು ನೋಡಿ ಈ ಕ್ಷೇತ್ರಗಳಲ್ಲಿ ಮಾತ್ರವೇ ಈ ಶ್ರೇಯಾಂಕದ ಮಾನ್ಯತೆ ನೀಡುತ್ತಾರೆ. ಜುಲೈ 23ರಂದು ಈ ಮಾನ್ಯತೆಯ ಪ್ರಮಾಣ ಪತ್ರ ನಮಗೆ ಸಿಕ್ಕಿದ್ದು, ಇದರಿಂದ ಸಂಸ್ಥೆಯ ಹಾಗೂ ಶಾಲೆಯ ಕೀರ್ತಿ ಹೆಚ್ಚಾಗಿದೆ ಎಂದರು.
2011ರಲ್ಲಿ ಆರಂಭಗೊಂಡಿರುವ ನಮ್ಮ ಸಿಬಿಎಸ್‌ಇ ಶಾಲೆಯಲ್ಲಿ ಮಕ್ಕಳ ವಿಶೇಷ ಬೆಳವಣಿಗೆಗೆ ಒತ್ತು ಕೊಡಲಾಗುತ್ತದೆ. ಈಗ ಈ ಪ್ರಮಾಣ ಪತ್ರ ಸಿಕ್ಕಿರುವುದು ಶಾಲೆಯ ಗುಣಮಟ್ಟದ ಕಲಿಕೆಗೆ ಮತ್ತಷ್ಟು ಸಹಕಾರಿಯಾಗಿದೆ. ನಮ್ಮ ಈ ಶಾಲೆಯಲ್ಲಿ ಮೊದಲಿನಿಂದಲೂ ವಿದ್ಯಾರ್ಥಿಗಳ ಪ್ರಗತಿಗೆ ಒತ್ತು ಕೊಡಲಾಗುತ್ತದೆ. ನಮ್ಮ ಶಾಲೆಯ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿನಿ ಎಸ್. ದಿವ್ಯಾ ಇತ್ತೀಚೆಗೆ ಧಾರವಾಡ ಐಐಐಟಿಗೂ ಆಯ್ಕೆಯಾಗಿದ್ದಾಳೆ. ಇದು ನಮ್ಮ ಸಂಸ್ಥೆಯಲ್ಲಿನ ಕಲಿಕೆಯ ಮೌಲ್ಯವನ್ನು ತೋರಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ಪಿ.ಡಿ. ಕಾಳೆ, ಆರ್.ವಿ. ಪಾಟೀಲ, ವಿ.ಎಲ್. ಪಾಟೀಲ, ಆರ್.ಎಸ್. ಪಾಟೀಲ, ಎನ್.ಬಿ. ಖಂಡೇಕಾರ, ನಿತಿನ ಘೋರ್ಪಡೆ, ಎಸ್.ವಿ. ಕಂಗ್ರಾಳಕರ ಸೇರಿದಂತೆ ಇತರರು ಇದರು.