Wednesday, October 15, 2025
Google search engine
Homeರಾಜಕೀಯಡಿಸಿಸಿ ಬ್ಯಾಂಕ್ ಚುನಾವಣೆ ಅಕ್ಟೋಬರ್ 19 ರಂದು ಪಿಕ್ಸ್: ಬಾಲಚಂದ್ರ ಜಾರಕಿಹೊಳಿ
spot_img

ಡಿಸಿಸಿ ಬ್ಯಾಂಕ್ ಚುನಾವಣೆ ಅಕ್ಟೋಬರ್ 19 ರಂದು ಪಿಕ್ಸ್: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ: ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಸರ್ವ ಸಾಧಾರಣ ಸಭೆ ಜರುಗಿತು ಸಭೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭಾಗಿಯಾಗಿದ್ದರು. ಸಭೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಜನರಲ್ ಬಾಡಿ ಮೀಟಿಂಗ್ ಇತ್ತು ಸಭೆ ಮಾಡಿದ್ವಿ ಎಂದರು.


 ಇನ್ನು ಹಲವು ನಿರ್ದೇಶಕರು ಸಭೆಗೆ ಬಾರದ ವಿಚಾರಕ್ಕೆ ಎಲ್ಲರಿಗೂ ನಾವು ಆಹ್ವಾನ ಕೊಟ್ಟಿದ್ದೆವು. ಕೆಲವೊಂದು ಬಾರಿ ಎಲ್ಲರೂ ಬರಲ್ಲ ಲಕ್ಷ್ಮಣ ಸವದಿಯವರು ಬೆಂಗಳೂರಿಗೆ ಹೋಗಿದ್ದಾರೆ. ಅಕ್ಟೋಬರ್ 19 ನೇ ತಾರೀಕೂ ಎಲೆಕ್ಷನ್ ಪಿಕ್ಸ್ ಆಗಿದೆ ಎಂದರು. ಇನ್ನು ಕೊಲ್ಹಾಪುರ ಜಿಲ್ಲೆಯಲ್ಲಿ ಮೀಟಿಂಗ್ ಆದ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ವಾಮೀಜಿಯವರು ಮೀಟಂಗ್ ಕರೆದಿದ್ದರು ಅಲ್ಲಿ ನಮ್ಮವರೂ ಹೋಗಿದ್ದರು ಅಲ್ಲಿ ಸಭೆಯಾದರೆ ರಾಜಕೀಯ ಚರ್ಚೆ ಆಗಿರುತ್ತೆ. ನಾವು ಅಣ್ಣಾಸಾಹೇಬ್ ಜೊಲೆ ಹಾಗೂ ಎಲ್ಲರೂ ಸೇರಿ ಮೀಟಿಂಗ್ ಮಾಡಿದ್ವಿ ಎರಡ್ಮೂರು ತಾಲೂಕು ಎಲೆಕ್ಷನ್ ಆಗಬಹುದು ಎಲ್ಲವನ್ನೂ ಅನ್ ಅಪೋಸ್ ಮಾಡಲು ಆಗಲ್ಲ ಎಲ್ಲಿ ಅವಿರೋಧ ಆಗಲ್ವೋ ಅಲ್ಲಿ ಚುನಾಚಣೆ ಮಾಡ್ತಿವಿ ಎಂದರು.

ಸತೀಶ ಜಾರಕಿಹೊಳಿ,ಕೋರೆ, ಜೊಲ್ಲೆ, ಸವದಿಯವರ ನಾಯಕತ್ವದಲ್ಲಿ ಚುನಾವಣೆ ಮಾಡ್ತಿವಿ ಯಾವ ಭಿನ್ನಾಭಿಪ್ರಾಯ ಇಲ್ಲ ಎಲ್ಲರೂ ಕೂಡಿಯೇ ಹೋಗ್ತಿವಿ ಎಂದು ಹೇಳಿದರು. ಇನ್ನು ಬಾಲಚಂದ್ರ ಜಾರಕಿಹೊಳಿಯವರೇ ಡೈರೆಕ್ಟರ್ ನಾವು ಆಕ್ಟರ್ ಎಂಬ ಸತೀಶ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ನಸು ನಕ್ಕು ಎಲ್ಲರೂ ಡೈರೆಕ್ಟರ್ ಎಲ್ಲರೂ ಪ್ರೋಡ್ಯೂಸರ್ ಎಲ್ಲರೂ ಆಕ್ಟರ್ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಎಲ್ಲರೂ ಸೇರಿಯೇ ಎಲೆಕ್ಷನ್ ಮಾಡ್ತಿವಿ ಗ್ರಾಹಕರು,ನೌಕರರಿಗೆ ಎಲ್ಲರಿಗೂ ಒಳ್ಳೇದು ಮಾಡ್ತಿವಿ. ಕೋ- ಆಪರೇಟಿವ್ ಚುನಾವಣೆ ಯಾವುದೇ ಪಕ್ಷದ ಮೇಲೆ ಆಗೊಲ್ಲ ಪಕ್ಷಾತೀತವಾಗಿ ಚುನಾವಣೆ ಮಾಡ್ತಿವಿ ಎಂದರು.

ಇನ್ನು ಗೋಕಾಕದಲ್ಲಿ 9 ಪಿಕೆಪಿಎಸ್ಗಳು ನಕಲಿ ಇವೆ ಎಂದು ಮಹಾಂತೇಶ ಕಡಾಡಿ ದೂರು ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸೊಸೈಟಿ ನಕಲಿ ಮಾಡಲು ಆಗಲ್ಲ.ವ್ಯವಹಾರ ಸರಿಯಾಗಿಲ್ಲ ಎಂಬಂತೆ ಇರಬಹುದು ಎನಿದ್ದರೂ ಎಆರ್ ಒ ಸರಿ ಇದೆಯಾ ಎಂದು ಪರಿಶೀಲನೆ ಮಾಡ್ತಾರೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿಸರು.

ಇನ್ನು ಡಿಸಿಸಿ ಬ್ಯಾಂಕ್ ದುಡ್ಡಿನ ಮೇಲೆ ನಡೆಯುವ ಆಮಿಷ ಒಡ್ಡುತ್ತಿರುವ ವಿಚಾರ ದುಡ್ಡಿನ ಮೇಲೆ ಯಾವುದೇ ಎಲೆಕ್ಷನ್ ಆಗೊಲ್ಲ ಜನರ ಪ್ರೀತಿ ವಿಶ್ವಾಸ ಸಂಘಟನೆ ಇರಬೇಕು ಅವರ ಮೇಲೆ ಆ ತಾಲೂಕಿನ ಜನರ ಪ್ರೀತಿ ಇರಬೇಕು ಕೆಲವೊಂದು ಸಲ ದುಡ್ಡು ಖರ್ಚು ಮಾಡಬೇಕಾಗುತ್ತದೆ ಎಂದರು

ಕಡಾಡಿಯವರ ದುಡ್ಡು ಕೊಟ್ಟು ಖರೀದಿ ಮಾಡಲಾಗ್ತಿದೆ ಎಂಬ ಆರೋಪ ವಿಚಾರಕ್ಕೆ ಅವರ ಹೇಳಿಕೆ ವೋಟರ್ಸ್ ಗೆ ಅವಮಾನ ಮಾಡಿದಂತೆ ಅವರು ಹಾಗೆ ಅನ್ನಬಾರದು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಕಿತ್ತೂರು ಬೈಲಹೊಂಗಲ ಬೈಲಹೊಂಗಲ ಗೋಕಾಕ ಮೂಡಲಗಿಯಲ್ಲಿ ಸಪ್ಟಂಬರ್ ನಲ್ಲಿ ಅಭ್ಯರ್ಥಿ ಫೈನಲ್ ಮಾಡ್ತಿವಿ ಎಂದ ಬಾಲಚಂದ್ರ ಜಾರಕಿಹೊಳಿ‌ರಾಹುಲ್ ಜಾರಕಿಹೊಳಿ ಸ್ಪರ್ಧೆ ಮಾಡ್ತರಾ ಎಂಬ ಪ್ರಶ್ನೆ ಮಾಡಿದಾಗಅದನ್ನು ನಾವೂ ಸಹ ಮೀಡಿಯಾದಲ್ಲಿಯೇ ನೋಡ್ತಿದ್ದೆವೆ.ಈ ಕುರಿತು ನಾವು ಸತೀಶ್ ಹಾಗೂ ರಮೇಶ ಕುಳಿತು ಚರ್ಚೆ ಮಾಡಿದಾಗಲೇ ಫೈನಲ್ ಆಗೋದು ಎಂದರು‌ ಆ ಕುರಿತು ಇಲ್ಲಿಯವರೆಗೆ ಯಾವುದೇ ಚರ್ಚೆ ಆಗಿಲ್ಲ ಎಂದರು ಇನ್ನು ಡಿಸಿಸಿ ಬ್ಯಾಂಕ್ ನಿಂದ ನಮಗೆ ಅನ್ಯಾಯ ಆಗಿದೆ ಎಂಬ ರಮೇಶ ಹೇಳಿಕೆ ವಿಚಾರಕ್ಕೆ ಸಂಬಂಧಸಿದಂತೆ ಮೊದಲಿನಿಂದ ನಮ್ಮಿಂದ 7 ಜ‌ನ ಇರುತ್ತಿದ್ದರು ಆದರೂ ಸಹ ಯಾರಿಗೂ ಲೋನ್ ಕೊಡಿ ಮಾಡಿ ಎಂದು ನಾವು ಇನ್ಪ್ಲೂಯೆನ್ಸ್ ಮಾಡಲು ಹೋಗಿಲ್ಲ.ಮೊನ್ನೆ ಸೌಭಾಗ್ಯ ಲಕ್ಷ್ಮೀ ವಿಚಾರ ಬಂದಾಗ 80 ಕೋಟಿ ಬೆಳಗಾವಿ ಡಿಸಿಸಿ ಬ್ಯಾಂಕ್ ಹಾಗೂ 80 ಕೋಟಿ ಕೊಲ್ಹಾಪುರ ಡಿಸಿಸಿ ಬ್ಯಾಂಕ್ ಸೇರಿ 160 ಸಾಲ ನೀಡಿದೆ ಮಾರ್ಚ್ ಅಂತ್ಯಕ್ಕೆ ಬಡ್ಡಿ ಕಟ್ಟುವ ಜವಾಬ್ದಾರಿ ನೀಡಿದೆ.ಬ್ಯಾಂಕ್ನವರನ್ನು ಅಲ್ಲಿಯೇ ನೇಮಕ ಮಾಡುತ್ತೆವೆ.ಪ್ರೈವೇಟ್ ಕಂಪನಿಗೆ ನಾವು ಸಾಲ ಕೊಡಲೇಬೇಕಾಗುತ್ತದೆ.

ಖಾನಾಪುರದಲ್ಲಿ ಚನ್ನರಾಜ್ ಹಟ್ಟಿಹೊಳಿಯವರು ಆಕ್ಟಿವ್ ಆಗಿದ್ದಾರೆ ಅವರೇನಾದರೂ ನಿಮ್ಮನ್ನು ಸಂಪರ್ಕಿಸಿದ್ದಾರಾ ಎಂಬ ಪ್ರಶ್ನೆ‌ಗೆ ಇಲ್ಲ ಅಲ್ಲಿ ಅರವಿಂದ ಪಾಟೀಲ್ ಇದ್ದಾರೆ ರಾಮದುರ್ಗದಲ್ಲಿ ಅಶೋಕ್ ಪಟ್ಟಣ್ ಅವರು ನಿಲ್ತಾರೆ ಎಂದು ಸುದ್ದಿ ಇದೆ ನಮ್ಮ ಕ್ಯಾಂಡಿಡೇಟ್ ಗಳನ್ನು ಅಗಸ್ಟ ನಲ್ಲಿ ಹೇಳುತ್ತೆವೆ.

ಶಾಸಕರನ್ನು ನಾವು ಮನವೊಲಸಲು ಸಾಧ್ಯವಿಲ್ಲ. ಎಂಎಲ್ಎಗಳು ಯಾಕೆ‌ ಎಲೆಕ್ಷನ್ ನಿಲ್ಲೋಕೆ ಓಡಾಡ್ತಿದ್ದಾರೋ ಗೊತ್ತಿಲ್ಲ. ಎಂಎಲ್ಎಗಳೇ ಎಲೆಕ್ಷನ್ ನಿಲ್ತಾರ ಎಂದರೆ ನಾವು ಏನು ಮಾಡಲು ಆಗಲ್ಲ ಎಂದು ಬಾಲಚಂದ್ರ ಜಾರಕಿಹೊಳಿ‌ ಹೇಳಿದರು

RELATED ARTICLES
- Advertisment -spot_img

Most Popular

error: Content is protected !!