Thursday, October 16, 2025
Google search engine
Homeಜಿಲ್ಲಾರಾಜ್ಯದಲ್ಲಿಯೇ ಕೆಎಲ್ಇ ಪ್ರಭಾಕರ್ ಕೋರೆ ಆಸ್ಪತ್ರೆ ಕಾಗದ ರಹಿತ ಆಸ್ಪತ್ರೆಯಾಗಿ ಮಾರ್ಪಟ್ಟಿದೆ:ಡಾ,ಕರ್ನಲ್ ದಯಾನಂದ್
spot_img

ರಾಜ್ಯದಲ್ಲಿಯೇ ಕೆಎಲ್ಇ ಪ್ರಭಾಕರ್ ಕೋರೆ ಆಸ್ಪತ್ರೆ ಕಾಗದ ರಹಿತ ಆಸ್ಪತ್ರೆಯಾಗಿ ಮಾರ್ಪಟ್ಟಿದೆ:ಡಾ,ಕರ್ನಲ್ ದಯಾನಂದ್

ಬೆಳಗಾವಿ: ರಾಜ್ಯದಲ್ಲಿಯೇ ಕೆಎಲ್ಇ ಪ್ರಭಾಕರ್ ಕೋರೆ ಆಸ್ಪತ್ರೆ ಕಾಗದ ರಹಿತ ಆಸ್ಪತ್ರೆಯಾಗಿ ಮಾರ್ಪಟ್ಟಿದೆ ಎಂದು ಡಾ,ಕರ್ನಲ್ ದಯಾನಂದ್ ಹೇಳಿದರು.

 ಕೆಎಲ್ಇ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬದಲಾಗುತ್ತಿರುವ ಅಧುನಿಕ ದಿನಗಳಲ್ಲಿ ಕಾಗದ ರಹಿತ ವ್ಯವಹಾರ (ಪೇಪರ್ ಲೆಸ್) ಮಾಡುವುದು ಅನಿವಾರ್ಯವಿತ್ತು. ಇದನ್ನು ಮನಗಂಡ ಕೆಎಲ್ಇ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಕಾರ್ಯಾಧ್ಯಕ್ಷರಾದ ಪ್ರಭಾಕರ್ ಕೋರೆಯವರು ಕಾಗದ ರಹಿತ ವ್ಯಹವಾರ ಅನುವು ಮಾಡಿಕೊಟ್ಟಿದ್ದು ಕರ್ನಾಟಕದಲ್ಲಿಯೇ ಈಗ ಕೆಎಲ್ಇ ಆಸ್ಪತ್ರೆ ಕಾಗದ ರಹಿತ ವ್ಯವಹಾರ ನಡೆಸುತ್ತಿದೆ ಎಂದರು.

ಆಸ್ಪತ್ರಗೆ ದಾಖಲಾಗುವ ರೋಗಿಗಳ ರೋಗ ನಿರ್ಧಾರ, ಟೆಸ್ಟ್, ಔಷಧಿ ಹಾಗೂ ಉಪಚಾರಗಳ ಮಾಹಿತಿ ತಂತ್ರಜ್ಞಾನದ ಆಧಾರದ ಮೇಲೆ ಸಂಗ್ರಹಿಸಲಾಗುತ್ತದೆ.ಮುಂಬೈ ಮೂಲದ ಪ್ರೆಸ್ಕೊ ಪೇಪೆರ ಲೆಸ್ ಸೊಲ್ಯೂಷನ್ಸ್ ಕಂಪನಿಯ ಸಹಕಾರದಿಂದ ಸಧ್ಯ ಕೆ ಎಲ್ ಇ ಆಸ್ಪತ್ರೆ ಕಾಗದ ರಹಿತ ಆಸ್ಪತ್ರೆಯಾಗಿ ಬದಲಾಗಿದೆ. ರೋಗಿಗಳು ತಮಗೆ ಸಂಬಂಧಪಟ್ಟ  ಯಾವುದೇ ದಾಖಲೆಯನ್ನು ತಾವೇ ಪರೀಕ್ಷೆ ಮಾಡಿಕೊಳ್ಳಬಹುದು, ಮತ್ತು ರೋಗಿಯು ಎಷ್ಟೆ ವರ್ಷಗಳ ನಂತರ ಮತ್ತೆ ಆಸ್ಪತ್ರೆಗೆ ಬಂದರೂ ಸಹ ಅವರ ದಾಖಲೆ ಆಸ್ಪತ್ರೆಯಲ್ಲಿ ಲಭ್ಯವಿರುತ್ತದೆ. ಪ್ರತಿ ವರ್ಷ ಆಸ್ಪತ್ರೆಗೆ  50 ಸಾವಿರ ರೋಗಿಗಳ ದಾಖಲೆಗಳನ್ನು ಆಸ್ಪತ್ರೆ ನಿರ್ವಹಿಸುತ್ತಿದ್ದು ಸಧ್ಯ ಈಗ ಅದು ಕಾಗದ ರಹಿತವಾಗಿ(ಡಿಜಿಟಲೈಸ್)ಆಗಿ ಬದಲಾವಣೆಯಾಗಿದ್ದು ಇದರಿಂದ ಪ್ರತಿ ವರ್ಷ 1250 ರಿಂದ 1500 ಮರಗಳನ್ನು ಕಾಗದಗಳಿಗಾಗಿ ಕತ್ತರಿಸವುದನ್ನು ತಡೆಯುತ್ತದೆ ಎಂದರು.

ಇನ್ನು ನ್ಯೂರಾಲಬಿಟ್ಸ್ ಟೆಕ್ನಾಲಜೀಸ್ ನ ಸಹ ಸಂಸ್ಥಾಪಕ ಹಾಗೂ ಪ್ರೆಸ್ಕೊ ಅಭಿವೃದ್ಧಿ ಪಡಿಸಿದ ವಿಕ್ರಮ್ ದೋತ್ರೆ ಮಾತನಾಡಿ ಇದು ಪರಿಸರ ಸ್ನೇಹಿಯೂ ಹೌದು ಹಾಗೂ ರೋಗಿಗಳಿಗೂ ಹಾಗೂ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯಸಿಬ್ಬಂಧಿ ಸ್ನೇಹಿಯೂ ಹೌದು ಇದರಿಂದ ಪರಿಸರದ ಮೇಲೆ ಆಗುತ್ತಿರುವ ತೊಂದರೆಯನ್ನು ತಡೆಯಬಹುದು. ಇದು ಯಾವುದೇ ಕಾರಣಕ್ಕೂ ದುರ್ಬಳಕೆ ಆಗುವುದಿಲ್ಲ ಎಂದರು.ಅಲ್ಲದೆ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ಮಾಡುವ ಸಂದರ್ಭದಲ್ಲೂ ಸಹ ತೆಗೆದುಕೊಳ್ಳುವ ಬಹುತೇಕ ಸಮಯವನ್ನೂ ಸಹ ಇದರಿಂದ ಉಳಿತಾಯ ಆಗುತ್ತದೆ ಎಂದರು.ಅಲ್ಲದೆ ಪ್ರಿಟಿಂಗ್, ಝೇರಾಕ್ಸ್ ಸೇರಿದಂತೆ ವಿವಿಧ ಖರ್ಚುಗಳೂ ಸಹ ಉಳಿತಾಯ ಆಗುತ್ತದೆ ಎಂದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಸಿಬ್ಬಂಧಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular

error: Content is protected !!