ಚಿಕ್ಕೋಡಿ: ಜೈನ ಸಮಾವೇಶದಲ್ಲಿ ಒಂದೆ ವೇದಿಕೆಯಲ್ಲಿ ಕಾಣಿಸಿಕೊಂಡ ರಾಜಕೀಯ ವಿರೋಧಿಗಳು ಸಚಿವ ಸತೀಶ್ ಜಾರಕಿಹೋಳಿ ಹಾಗೂ ರಮೇಶ್ ಕತ್ತಿ ಮುಖಾಮುಖಿ ಆಗಿದ್ದಾರೆ.
ಹಾರೂಗೇರಿ ಪಟ್ಟಣದಲ್ಲಿ ನಡೆಯುತ್ತಿರುವ ಜೈನ ಸಮಾವೇಶ ದಕ್ಷಿಣ ಭಾರತ 103 ನೇ ತ್ರೈವಾರ್ಷಿಕ ಜೈನ ಸಮಾವೇಶದಲ್ಲಿ ಅಕ್ಕಪಕ್ಕವೆ ಕೂತು ವೇದಿಕೆ ಹಂಚಿಕೊಂಡ ರಮೇಶ್ ಕತ್ತಿ ಹಾಗೂ ಸತೀಶ್ ಜಾರಕಿಹೋಳಿ ವಾರದ ಮೂರು ದಿನಗಳ ಹಿಂದಷ್ಟೇ ಒಬ್ಬರ ವಿರುದ್ಧ ಒಬ್ಬರು ಹರಿಹಾಯ್ದಿದರು.
ಹುಕ್ಕೇರಿ ಮತಕ್ಷೇತ್ರದಲ್ಲಿ ಹೊರಗಿನವರ ಆಡಳಿತ ನಡೆಸಲು ಬಿಡಲ್ಲಾ ಎಂದು ಸತೀಶ್ ಜಾರಕಿಹೋಳಿ ವಿರುದ್ದ ಹರಿ ಹಾಯ್ದಿದ್ದ ರಮೇಶ್ ಕತ್ತಿ. ಇದಕ್ಕೆ ಕೌಂಟರ ಆಗಿ ಹುಕ್ಕೇರಿಯ ನಿಡಸೋಸಿ ಮಠಕ್ಕೆ ಭೇಟಿ ನೀಡಿ ಸಭೆ ಮಾಡಿದ್ದ ಸತೀಶ್ ಜಾರಕಿಹೊಳಿ.
ಸಮಯ ಬಂದಾಗ ಉತ್ತರ ಕೊಡುತ್ತೇನೆ ಪೋಸ್ ಕೊಡುವ ಕಲೆ ನಮ್ಮಲಿಲ್ಲ. ಕತ್ತಿ ಕುಟುಂಬಕ್ಕೆ ಅರ್ಜಂಟ್ ಇದ್ದಷ್ಟು ನನಗೆ ಇಲ್ಲ ಎಂದು ಕೌಂಟರ್ ಕೊಟ್ಟಿದ್ದ ಸತೀಶ್ ಜಾರಕಿಹೋಳಿ.