ಬೆಳಗಾವಿ : ಬಿಜೆಪಿ ಕಾರ್ಯಕರ್ತರ ಬಗ್ಗೆ ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ್ ಹಗರು ಮಾತನಾಡಿದ್ದಾರೆ ಎಂದು ಆರೋಪಿಸಿ ನೇಗಿನಾಳ ಗ್ರಾಮದಲ್ಲಿ ಇರೋ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಬುಧುವಾರ ಪೊಲೀಸರು ವಶಕ್ಕೆ ಪಡೆದುಕೊಂಡರು.
ಕುರಗುಂದ ಗ್ರಾಮದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿ ಕಿತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಕುರಗುಂದ ಕ್ರಾಸ್ ನಿಂದ ನೇಗಿನಾಳವರೆಗೆ ಪಾದಯಾತ್ರೆಗೆ ಬಿಜೆಪಿ ಆಗಮಿಸಿ ಬಾಬಾಸಾಹೇಬ್ ಪಾಟೀಲ್ ಅವರ ವಿರುದ್ಧ ಆಕ್ರೋಶ ಹೊರಹಾಕಿದರು.
ನೇಗಿನಾಳ ಗ್ರಾಮದಲ್ಲಿ ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯಕರ್ತರು. ಎರಡು ಕಡೆಗಳಲ್ಲಿ ಹೆಚ್ಚಿನ ಬೀಗಿ ಪೊಲೀಸ್ ಬಂದೋಬಸ್ತ ನಿಯೋಜನೆ ಮಾಡಲಾಗಿತ್ತು.