ಬೆಳಗಾವಿ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡರ ಮಾರ್ಗದರ್ಶನ ಹಾಗೂ ರಾಜ್ಯ ಸಂಚಾಲಕ ಸುರೇಶ ಗಾವನ್ನವರ ಮತ್ತು ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ಸಲಹೆ ಸೂಚನೆಯ ಮೇರೆಗೆ ಬೆಳಗಾವಿ ತಾಲೂಕಾ ಘಟಕವು ಸಂಘಟನೆಯ ವಿಸ್ತರಣೆಯ ಭಾಗವಾಗಿ ಕೆ.ಎಚ್. ಕಂಗ್ರಾಳಿ, ಕಾಕತಿ, ಹೊನಗಾ, ಭೂತರಾಮನಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದರು. ಕರವೇ ಸಂಘಟನೆಯ ಉದ್ದೇಶಗಳು, ಧ್ಯೇಯಗಳು ಮತ್ತು ಕಾರ್ಯಪದ್ಧತಿ ಕುರಿತು ವಿವರವಾಗಿ ಪರಿಚಯ ಮಾಡಲಾಯಿತು.
ಸಂಘಟನೆಯ ಶಕ್ತಿಯನ್ನು ಗ್ರಾಮಮಟ್ಟದಿಂದಲೇ ಬೆಳಸುವುದು ಅತ್ಯಗತ್ಯ ಎಂಬ ಧೋರಣೆಯಿಂದ, ಈ ಹೊಸ ಗ್ರಾಮಗಳ ಶಾಖೆಯು ಕರವೇ ಪರಿವಾರಕ್ಕೆ ಸೇರ್ಪಡೆಗೊಂಡಿದ್ದು, ಕನ್ನಡ ನುಡಿ, ನಾಡು ಹಾಗೂ ಹಕ್ಕುಗಳ ರಕ್ಷಣೆಗೆ ಸಮರ್ಪಿತವಾಗಿರಲಿದೆ.
ಈ ಮೂಲಕ ಎಲ್ಲ ಗ್ರಾಮ ಸರಿಯಾಗಿ ಸಂಘಟಿತವಾಗಿ ಕಾರ್ಯನಿರ್ವಹಿಸಲು ಹಾದಿ ತೆರೆದಿದ್ದು, ಸ್ಥಳೀಯ ಮಟ್ಟದಲ್ಲಿ ಕನ್ನಡ ಚಳವಳಿಗೆ ಹೊಸ ಉಜ್ವಲತೆ ನೀಡಲಿದೆ.
ಈ ಸಂದರ್ಭದಲ್ಲಿ ಬೆಳಗಾವಿ ತಾಲೂಕಾ ಉಪಾಧ್ಯಕ್ಷರಾದ ಮಂಜುನಾಥ ರಾಠೋಡ, ತಾಲೂಕಾ ಪದಾಧಿಕಾರಿಗಳಾದ ಅರ್ಜುನ ಕಾಂಬಳೆ, ಭೀಮು ಕೊರವಿ, ಶ್ರೀಧರ ಹೊಳೆನ್ನವರ, ಸಂತೋಷ ಚಕ್ರಯಿ ಉಪಸ್ಥಿತರಿದ್ದರು.