ಬೆಳಗಾವಿ ಫೆ:10 : ಮಹಾನಗರಕ್ಕೆ ಹೊಂದಿಕೊಂಡಿರುವ ಮಾರೀಹಾಳ ಪೊಲೀಸರ ಠಾಣೆಯಲ್ಲಿ ಕಳೆದೊಂದು ವರ್ಷದಿಂದ ಪ್ರಕರಣಗಳ ಸಂಖ್ಯೆ ಎರುತ್ತಲೇ ಇದೆ. ವಿಷೇಶವಾಗಿ ಕಳ್ಳತನ, ಕೊಲೆ, ಗುಂಪು ಗಲಭೆ ಹಾಗೂ ಅಪಹರಣ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಇಲ್ಲಿನ ಪೊಲೀಸ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತಿದೆ.
ಬೆಳಗಾವಿ ಪೊಲೀಸ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಮಾರೀಹಾಳ ಪೊಲೀಸ ಠಾಣೆಯಲ್ಲಿ ಈಚೆಗೆ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು ಕೈ ಕಟ್ಟಿ ಕುಳಿತ್ತಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹಲವು ತಿಂಗಳುಗಳಿಂದ ಸರಣಿ ಕಳ್ಳತನ, ಕೊಲೆ, ಅಪಹರಣ, ಮಟ್ಕಾ, ಹೀಗೆ ಹಲವಾರು ಘಟನೆಗಳು ಜರುಗುತ್ತದರು. ಇವುಗಳ ಬಗ್ಗೆ ತೆಲೆ ಕಡಿಸಿಕೊಳ್ಳದೆ ನಿರ್ಲಕ್ಷ್ಯ ತೊರುತ್ತಿದ್ದಾರೆ. ನೆಮ್ಮದಿಯ ಜೀವನ ಕಳೆಯಬೇಕಿದ್ದ ಜನರು ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ.
ಭಾನುವಾರ ರಾತ್ರಿ ಮೊದಗಾ ಗ್ರಾಮದಲ್ಲಿ ಎರಡು ಅಂಗಡಿಗಳ ದರೋಡೆ ಹಾಗೂ ಮನೆಯೊಂದರಲ್ಲಿ ನಿಲ್ಲಿಸಿದ ಬೈಕನ್ನು ನಾಲ್ಕು ಜನರ ತಂಡವೊಂದು ಕಳ್ಳತನ ಮಾಡಿದ ಘಟನೆ ನಡೆದಿದೆ. ಅಲ್ಲದೇ ಕಳ್ಳರು ರಾಜಾರೋಷವಾಗಿ ಗ್ರಾಮಗಳಲ್ಲಿ ತಿರುಗುತ್ತಿರುವ ದೃಶ್ಯಗಳು ಸಿಸಿಟಿವಿ ಯಲ್ಲಿ ಸೆರೆಯಾಗಿವೆ. ಇದರಿಂದ ಮಾರೀಹಾಳ ಪೊಲೀಸ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ಈಗ ಕಳ್ಳರ ಹಾವಳಿ ಹೆಚ್ಚಿದ್ದು, ಜನರು ರಾತ್ರಿ ಹೊರ ಬರಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ.
ಸಿಬ್ಬಂದಿ ಕೊರತೆ :
ಮಾರೀಹಾಳ ಪೊಲೀಸ ಠಾಣೆಯಲ್ಲಿ ಅಂದಾಜು 15ಕ್ಕೂ ಹೆಚ್ಚಿನ ಸಿಬ್ಬಂದಿಗಳ ಕೊರತೆಯಿದೆ. ರಾತ್ರಿ ಪಾಳಯದಲ್ಲಿಯೇ ಹೆಚ್ಚಿನ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದು, ಕಳ್ಳರ ಬಂಧನದ ಕಾರ್ಯವು ಪೊಲೀಸರಿಗೂ ಸವಾಲಿನ ಕಾರ್ಯವಾಗಿದೆ.
ರಾತ್ರಿ ನಡೆದ ಕಳ್ಳತನ ಮಾಡಲು ಬಂದಿರುವ ಸಾಂದರ್ಭಿಕ ಸಿಸಿಟಿವಿ ದೃಶ್ಯ,
ವರದಿ: ಮಲ್ಲಿಕಾರ್ಜುನ ಹೆಗನಾಯಕ, ಸಂಪಾದಕರು, ಸಮರ್ಥ ನಾಡು ಕನ್ನಡ ದಿನಪತ್ರಿಕ