ಬೆಂಗಳೂರು: ಭಾರತದ ಸಿಲಿಕಾನ್ ಸಿಟಿ (Silicon city of india), ತಂತ್ರಜ್ಞಾನ, ಆವಿಷ್ಕಾರಗಳ ತವರೂರು ನಮ್ಮ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ (US Embassy) ಪ್ರಾರಂಭವಾಗುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (MP Tejasvi Surya) ರವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಭಾರತ – ಅಮೆರಿಕ ದ್ವಿಪಕ್ಷೀಯ ಸಂಬಂಧ ವೃದ್ಧಿಯಲ್ಲಿ ಇದೊಂದು ಮೈಲಿಗಲ್ಲು ಆಗಿದ್ದು, ಪ್ರಧಾನಿ ನರೇಂದ್ರ ಮೋದಿ (PM Modi) ರವರ ಒತ್ತಾಸೆ, ವಿದೇಶಾಂಗ ಸಚಿವರಾದ ಡಾ ಎಸ್ ಜೈಶಂಕರ್ ರವರ (Minister Jaishankar) ಸಹಕಾರ ಮತ್ತು ಬೆಂಗಳೂರು (Bengaluru News) ದಕ್ಷಿಣ ಸಂಸದ ತೇಜಸ್ವೀ ಸೂರ್ಯ ರವರ ನಿರಂತರ ಪರಿಶ್ರಮದ ಫಲವಾಗಿ ನಮ್ಮ ಬೆಂಗಳೂರಿನಲ್ಲಿ ಯು ಎಸ್ ಕಾನ್ಸುಲೇಟ್ ಕಚೇರಿ ಪ್ರಾರಂಭವಾಗುತ್ತಿದೆ.
ಹಲವು ದಶಕಗಳಿಂದ ಬೆಂಗಳೂರು ನಗರವು ಜಾಗತಿಕ ಸಂಶೋಧನೆ, ಅವಿಷ್ಕಾರ, ಸಾಫ್ಟವೇರ್, ಬಯೋ ಟೆಕ್ನಾಲಜಿ ಮತ್ತಿತರ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದ್ದರೂ ಕೂಡ ವೀಸಾ ಪ್ರಕ್ರಿಯೆಗಳಿಗೆ ಹೈದರಾಬಾದ್, ಚೆನ್ನೈ, ಮುಂಬಯಿ ಗಳಿಗೆ ತೆರಳಬೇಕಾದ ಅನಿವಾರ್ಯತೆ ಇತ್ತು. ಬೆಂಗಳೂರಿನಲ್ಲಿ ಯು ಎಸ್ ಕಾನ್ಸುಲೆಟ್ ಕಚೇರಿ ಪ್ರಾರಂಭದಿಂದ ಲಕ್ಷಾಂತರ ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕನ್ನಡಿಗರ ಬಹುದಿನಗಳ ಬೇಡಿಕೆ ಈಡೇರುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.
ಸತತ ಪರಿಶ್ರಮ, ರಾಜತಾಂತ್ರಿಕ ಕ್ರಮಗಳ ಪ್ರತಿಫಲ
ಬೆಂಗಳೂರು ದಕ್ಷಿಣದ ಸಂಸದರಾಗಿ 2019 ರಲ್ಲಿ ಪ್ರಥಮ ಬಾರಿಗೆ ಆಯ್ಕೆಯಾದ ನಂತರ ಸಂಸದ ಶ್ರೀ ಸೂರ್ಯ ರವರು, ನವೆಂಬರ್ 18,2019 ರಂದು ಕೇಂದ್ರ ವಿದೇಶಾಂಗ ಸಚಿವರಾದ ಡಾ ಎಸ್ ಜೈಶಂಕರ್ ರನ್ನು ಭೇಟಿಯಾಗಿ ಬೆಂಗಳೂರಿನಲ್ಲಿ ಯು ಎಸ್ ರಾಯಭಾರ ಕಚೇರಿಯ ಅಗತ್ಯತೆ ಬಗ್ಗೆ ವಿವರಿಸಿ, ಅಂದಿನ ಯು ಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ರಲ್ಲಿ ಮನವಿ ಸಲ್ಲಿಸಿದ್ದರು. ಪ್ರಧಾನಿ ಶ್ರೀ ನರೇಂದ್ರ ಮೋದಿ ರವರು 2023ರ ಅಮೆರಿಕ ಭೇಟಿಯ ವೇಳೆಯಲ್ಲಿ ಈ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ರವರು, ಬೆಂಗಳೂರಿನಲ್ಲಿ ಯು ಎಸ್ ರಾಯಭಾರ ಕಚೇರಿ ಕಾರ್ಯಾರಂಭವು ಮಹತ್ವದ ಮೈಲಿಗಲ್ಲು ಆಗಿದ್ದು, ಬೆಂಗಳೂರು ಮತ್ತು ಕರ್ನಾಟಕದ ಜನತೆ ಬಹುದಿನಗಳಿಂದ ಕಾಯುತ್ತಿದ್ದ ಬೇಡಿಕೆ ಈಡೇರಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕ್ರಮ ಕೈಗೊಂಡಿದ್ದು ಸಾರ್ಥಕ. ಕರ್ನಾಟಕದ ಜನತೆ ಜಾಗತಿಕ ಆಶೋತ್ತರಗಳಿಗೆ ಸ್ಪಂದಿಸಲು ಇದೊಂದು ಅಪೂರ್ವ ವೇದಿಕೆಯಾಗಿದ್ದು, ಈ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗಿಯಾಗಿದ್ದು ನನಗೆ ಅತ್ಯಂತ ಖುಷಿ ನೀಡಿದೆ ಎಂದು ತಿಳಿಸಿದರು.
ಕನ್ನಡಿಗರ ಪರವಾಗಿ ಧನ್ಯವಾದ ಅರ್ಪಿಸಿದ ಸಂಸದ
ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಶ್ರೀ ಸೂರ್ಯ ರವರು, ನಮ್ಮ ಬೆಂಗಳೂರು ಅನ್ವೇಷಣೆ, ಸಂಶೋಧನೆ, ಅವಿಷ್ಕಾರದಲ್ಲಿ ಜಾಗತಿಕ ಪ್ರಾಮುಖ್ಯತೆಯ ನಗರವಾಗಿ ಹೊಮ್ಮಿದ್ದರೂ ನಗರದಲ್ಲಿ ಯು ಎಸ್ ಕಾನ್ಸುಲೆಟ್ ಕಚೇರಿ ಇಲ್ಲದ್ದರಿಂದ ಕನ್ನಡಿಗರು ದೂರದ ಹೈದರಾಬಾದ್, ಚೆನ್ನೈ ಗಳಿಗೆ ಅಲೆಯುವ ಸಂದರ್ಭ ಎದುರಾಗಿತ್ತು. ಅಮೆರಿಕ ರಾಯಭಾರ ಕಚೇರಿ ಪ್ರಾರಂಭ ಕೇವಲ ಅನುಕೂಲಕರ ದೃಷ್ಟಿಯಿಂದ ಅಷ್ಟೇ ಅಲ್ಲದೇ, ನಮ್ಮ ಬೆಂಗಳೂರನ್ನು ಜಾಗತಿಕ ಪ್ರಾಮುಖ್ಯ ಹೊಂದಿದ ನಗರಗಳ ಸಾಲಿಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದರಿಂದ ಭಾರತ – ಅಮೆರಿಕ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಸಹಕಾರಿಯಾಗಲಿದೆ. ಲಕ್ಷಾಂತರ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಇತರರಿಗೆ ಅನುಕೂಲವಾಗಲಿದ್ದು,ಕನ್ನಡಿಗರ ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಡಾ. ಎಸ್ ಜೈಶಂಕರ್ ರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಂಸದ ಸೂರ್ಯ ವಿವರಿಸಿದರು. ಯು ಎಸ್ ರಾಯಭಾರ ಕಚೇರಿಯ ಪ್ರಾರಂಭಕ್ಕೆ ಪ್ರಥಮ ಬಾರಿಗೆ ಸಂಸದರಾದ ದಿನದಿಂದಲೂ ಅವಿರತವಾಗಿ ಪ್ರಯತ್ನಿಸಿರುವ ಸಂಸದ ಸೂರ್ಯ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ ರವರ ಸಹಕಾರದಿಂದ ಲಕ್ಷಾಂತರ ಕನ್ನಡಿಗರಿಗೆ ಅನುಕೂಲವಾಗುತ್ತಿರುವುದು ಗಮನಾರ್ಹ.