Tuesday, April 29, 2025
Google search engine
Homeಅಂಕಣಕಾಯಕ ಬಂಧುಗಳ ತರಬೇತಿಗೆ ಚಾಲನೆ: ಕಾಯಕ ಬಂಧುಗಳ ಕಾರ್ಯ ಉತ್ತಮವಾಗಲಿ : ರವಿ ಎನ್...
spot_img

ಕಾಯಕ ಬಂಧುಗಳ ತರಬೇತಿಗೆ ಚಾಲನೆ: ಕಾಯಕ ಬಂಧುಗಳ ಕಾರ್ಯ ಉತ್ತಮವಾಗಲಿ : ರವಿ ಎನ್ ಬಂಗಾರೆಪ್ಪನವರ

ಬೆಳಗಾವಿ : ಕಾಯಕ ಬಂಧುಗಳು ಮತ್ತು ಕೂಲಿಕಾರ್ಮಿಕರು ಉದ್ಯೋಗ ಖಾತರಿ ಯೋಜನೆಯ ಜೊತೆಗೆ ಇತರ ಯೋಜನೆಗಳ ಮಾಹಿತಿಯನ್ನು ಪಡೆದಕೊಂಡು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ರವಿ ಎನ್ ಬಂಗಾರೆಪ್ಪನವರ ಹೇಳಿದರು.

ಸ್ಥಳೀಯ ತಾಲ್ಲೂಕ ಪಂಚಾಯತ ಸಭಾ ಭವನದಲ್ಲಿ ಶುಕ್ರವಾರ (ಜನೆವರಿ16) ರಂದು ಗ್ರಾಮೀಣಾವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಜಿಲ್ಲಾ ಪಂಚಾಯತ ಬೆಳಗಾವಿ, ತಾಲ್ಲೂಕ ಪಂಚಾಯತ ಬೆಳಗಾವಿ, ಗ್ರಾಮ ಸ್ವರಾಜ ಅಭಿಯಾನ- ಕರ್ನಾಟಕ, (ನಾಗರಿಕ ಸಮಾಜ ಸೇವಾ ಸಂಸ್ಥೆಗಳ ಒಕ್ಕೂಟ) ಕರ್ನಾಟಕ ಪ್ರಜ್ವಲ ಸಂಸ್ಥೆ ಬೆಳಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ತಾಲ್ಲೂಕ ಮಟ್ಟದ ಕಾಯಕ ಬಂಧುಗಳ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗುವಂತೆ ಸರ್ಕಾರದ ಅನೇಕ ಯೋಜನೆಗಳಿದ್ದು ಅವುಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪವಂತೆ ಮಾಡುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು. ಕಾಯಕ ಬಂಧುಗಳು ಕಾಮಗಾರಿ ಸ್ಥಳದಲ್ಲಿ ಯಾವ ರೀತಿ ಕೆಲಸವನ್ನು ನಿರ್ವಹಿಸಬೇಕು, ತಮ್ಮ ಜವಾಬ್ದಾರಿಗಳೇನು ಎಂಬದುದನ್ನು ಈ ತರಬೇತಿಯ ಮೂಲಕ ಪಡೆದುಕೊಂಡು ತಮ್ಮ ತಮ್ಮ ಗ್ರಾಮ ಪಂಚಾಯತಿ ಮಟ್ಟದಲ್ಲಿ ಉತ್ತಮ ಕಾಯಕ ಬಂಧುಗಳಾಗಿ ಕಾರ್ಯನಿರ್ವಹಿಸಬೇಕೆಂದು ಹೇಳಿದರು. ಬೆಳಗಾವಿ, ಹುಕ್ಕೇರಿ ಮತ್ತು ಖಾನಾಪೂರ ಸೇರಿ ತಲಾ 300 ರಂತೆ ಒಟ್ಟು 900 ಕಾಯಕ ಬಂಧುಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯನಿರ್ವಾಹಕ ಅಧಿಕಾರಿಗಳಾದ ರಮೇಶ ಹೆಡಗೆ ಅವರು ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 300 ಕಾಯಕ ಬಂಧುಗಳನ್ನು ಗುರುತಿಸಿ 7 ತಂಡಗಳಂತೆ ಪ್ರತಿ ತಂಡಗಳಿಗೆ 3 ದಿನಗಳಂತೆ ತರಬೇತಿ ನೀಡುತಿದ್ದು, ಈ ತರಬೇತಿಯ ಸದುಪಯೋಗವನ್ನು ಕಾಯಕ ಬಂಧುಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಸಭೆಯಲ್ಲಿ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಬಿ.ಡಿ ಕಡೇಮನಿ, ಡಿಐಇಸಿ ಸಂಯೋಜಕರು ಪ್ರಮೋದ ಗೋಡೆಕರ, ಕರ್ನಾಟಕ ಸೇವಾ ಸಂಸ್ಥೆ ಮುಖ್ಯಸ್ಥೆ ವೈಶಾಲಿ ಬಳಟಗಿ, ತಾಐಇಸಿ ಸಂಯೋಜಕ ರಮೇಶ ಮಾದರ. ರಾಜ್ಯ ಮಾಸ್ಟರ ಟ್ರೈನರ್ ಸುಜಾತಾ ಈ ಕೋರಿಶೆಟ್ಟಿ ಎಸ್.ಐ.ಆರ್.ಡಿ ಶ್ರೀಮತಿ ಕುಸುಮಾ ಅವಕ್ಕನ್ನವರ, ಎಡಿಎಮ್ ಪ್ರಭಾವತಿ ಕೋಲಕಾರ್ ತಾಲ್ಲೂಕ ಪಂಚಾಯತ ಸಿಬ್ಬಂದಿಗಳು, ಇದ್ದರು

RELATED ARTICLES
- Advertisment -spot_img

Most Popular

error: Content is protected !!