David Warner: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಡೇವಿಡ್ ವಾರ್ನರ್ ಸದ್ಯ ಫ್ರಾಂಚೈಸಿ ಲೀಗ್ನಲ್ಲಿ ಮುಂದುವರೆದಿದ್ದಾರೆ. ಅದರಂತೆ ಇದೀಗ ಬಿಗ್ ಬ್ಯಾಷ್ ಲೀಗ್ನಲ್ಲಿ ಸಿಡ್ನಿ ಥಂಡರ್ ಪರ ಕಣಕ್ಕಿಳಿಯುತ್ತಿದ್ದಾರೆ. ಹಾಗೆಯೇ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಕರಾಚಿ ಕಿಂಗ್ಸ್ ಪರ ಕಣಕ್ಕಿಳಿಯಲು ವಾರ್ನರ್ ಒಪ್ಪಂದ ಮಾಡಿಕೊಂಡಿದ್ದಾರೆ.
ಇಂದು (ಜ.14) ದೇಶದೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಈ ಸಂಭ್ರಮಕ್ಕೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್ ಶುಭಾಶಯ ತಿಳಿಸಿರುವುದು ವಿಶೇಷ. ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ವಾರ್ನರ್ ಸಂಕ್ರಾಂತಿ ಹಬ್ಬಕ್ಕೆ ವಿಶಸ್ ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಂಕ್ರಾಂತಿ ಹಬ್ಬದ ಶುಭಾಯಶದ ಫೋಟೋ ಹಂಚಿಕೊಂಡಿರುವ ವಾರ್ನರ್, ಸೂರ್ಯನ ಬೆಳಕು ದಾರಿದೀಪವಾಗಲಿ. ಈ ಹಬ್ಬದ ದಿನವು ನಿಮಗೆ ಶಾಂತಿ, ಸಂತೋಷ ಮತ್ತು ಮೆರಗನ್ನು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಈ ಪೋಸ್ಟ್ ಅನ್ನು GMR ಸ್ಪೋರ್ಟ್ಸ್ ಹೆಚ್ಒ ವಿಕಾಶ್ ಕುಮಾರ್ ಹಾಗೂ ನಿರಂಜನ್ ಸರೀನ್ ಎಂಬುವರಿಗೆ ಟ್ಯಾಗ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಂಕ್ರಾಂತಿ ಹಬ್ಬದ ಶುಭಾಯಶದ ಫೋಟೋ ಹಂಚಿಕೊಂಡಿರುವ ವಾರ್ನರ್, ಸೂರ್ಯನ ಬೆಳಕು ದಾರಿದೀಪವಾಗಲಿ.
ಈ ಹಬ್ಬದ ದಿನವು ನಿಮಗೆ ಶಾಂತಿ, ಸಂತೋಷ ಮತ್ತು ಮೆರಗನ್ನು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಈ ಪೋಸ್ಟ್ ಅನ್ನು GMR ಸ್ಪೋರ್ಟ್ಸ್ ಹೆಚ್ಒ ವಿಕಾಶ್ ಕುಮಾರ್ ಹಾಗೂ ನಿರಂಜನ್ ಸರೀನ್ ಎಂಬುವರಿಗೆ ಟ್ಯಾಗ್ ಮಾಡಿದ್ದಾರೆ.