ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಶಿಸ್ತಿನ ಸುಧಾರಣೆಯ ಸಂಕಲ್ಪ..
200 ಕೋಟಿ ಅನುದಾನದಲ್ಲಿ ಆಧುನಿಕ ಶೈಲಿಯಲ್ಲಿ ಅಭಿವೃದ್ಧಿಯಾಗುವ ಪುಣ್ಯಕ್ಷೇತ್ರ..
ಸಚಿವ ಸತೀಶ ಜಾರಕಿಹೊಳಿಯವರ ಸುಧಾರಣಾ ಸಂಕಲ್ಪಕ್ಕೆ ಶರಣೆಂದ ಭಕ್ತಸಮೂಹ..
ಸವದತ್ತಿ : ಉತ್ತರ ಕರ್ನಾಟಕ ಹಾಗೂ ರಾಜ್ಯದ ನೆರೆ ರಾಜ್ಯಗಳಲ್ಲಿ ಅತೀ ಭಕ್ತಿಭಾವದಿಂದ ಆರಾಧಿಸುವ, ನಡೆದುಕೊಳ್ಳುವ, ಇಲ್ಲಿಗೆ ಬಂದು ಭಕ್ತಿ ಭಾವದಿಂದ ಭಕ್ತರು ನಡೆದುಕೊಳ್ಳುವ ಶಕ್ತಿ ದೇವತೆ ಎಂದರೆ ಅದು ಸವದತ್ತಿ ತಾಲೂಕಿನ ಶ್ರೀ ರೇಣುಕಾ ಯಲ್ಲಮ್ಮ ದೇವಿ, ಆದಿಕಾಲದಿಂದಲೂ ಭಕ್ತರ ಬೇಡಿಕೆ ಈಡೇರಿಸುವ ಈ ಬಯಲುಸೀಮೆಯ ಭಾಗ್ಯದೇವತೆಯ ಸನ್ನಿಧಿಗೆ ಪ್ರತಿವರ್ಷ ರಾಜ್ಯ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರ ಆಗಮನವೇ ಈ ದೇವಿಯ ಮಹಿಮೆಯೇ ಸಾಕ್ಷಿಯಾಗಿದೆ..
ಇಂತಹ ಮಹಾನ್ ದೇವಿಯ ಸನ್ನಿಧಿಯನ್ನು ಸುಧಾರಣೆ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಭಕ್ತಸಮೂಹದಲ್ಲಿ ಇದ್ದಿದ್ದು, ಅದಕ್ಕೆ ಈಗ ಕಾಲ ಕೂಡಿ ಬಂದ ಹಾಗಿದೆ, ಯುವ ನೇತಾರ, ಸವದತ್ತಿ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಅವರು ಸತತ ಪ್ರಯತ್ನ ಪಟ್ಟು, ತಮ್ಮ ಗುರುಗಳಾದ ಸಚಿವ ಸತೀಶ ಜಾರಕಿಹೊಳಿ ಬೆನ್ನುಬಿದ್ದು, ತಮ್ಮ ಬಹುದಿನದ ಕನಸಾದ ಯಲ್ಲಮ್ಮ ದೇವಸ್ಥಾನದ ಹೊಸ ಶೈಲಿಯ ಅಭಿವೃದ್ಧಿಗೆ ಹಸಿರು ಸಿಗ್ನಲ್ ಪಡೆದುಕೊಂಡಿದ್ದು ಇಡೀ ಕ್ಷೇತ್ರಕ್ಕೆ ಸಂತಸದ ವಿಷಯವಾಗಿದೆ..
ಸಚಿವ ಸತೀಶ ಜಾರಕಿಹೊಳಿ ಅವರು, ಪ್ರವಾಸೋಧ್ಯಮ ಸಚಿವ ಎಚ್ ಕೆ ಪಾಟೀಲ ಅವರೊಂದಿಗೆ ಚರ್ಚೆ ಮಾಡಿ, ದೇವಸ್ಥಾನದ ಸುಧಾರಣೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಸುಮಾರು 200 ಕೋಟಿ ಅನುದಾನದಲ್ಲಿ, ಇಡೀ ಪುಣ್ಯಕ್ಷೇತ್ರವನ್ನೇ ನವೀಕರಣ ಮಾಡುವ ಸಂಕಲ್ಪ ಹೊಂದಿದ್ದು, ಸವದತ್ತಿ ಕ್ಷೇತ್ರದ ಜನತೆ ಹಾಗೂ ದೇವಿಯ ಭಕ್ತರಲ್ಲಿ ಹರ್ಷ ತಂದಿದೆ, ಕಾರಣ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ವಿಶ್ವಾಸ ವೈದ್ಯರಿಗೆ ಜನಸಮೂಹದಲ್ಲಿ ಜೈಕಾರದ ಪ್ರಶಂಸೆ ವ್ಯಕ್ತವಾಗಿದೆ..
ಈ ವಿಷಯದ ಕುರಿತಾಗಿ ಸವದತ್ತಿಯಲ್ಲಿ ಸುದ್ದಿಗಾರರೊಂದಿಗೆ ಸಚಿವ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಬರುವ ಚಳಿಗಾಲದ ಅಧಿವೇಶನದ ನಂತರ ತ್ವರಿತವಾಗಿ ಈ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದು, ಆದಷ್ಟು ಬೇಗ ದೇವಸ್ಥಾನದ ಸುಧಾರಣಾ ಕಾರ್ಯ ಪೂರ್ಣವಾಗುತ್ತದೆ, ಪ್ರವಾಸೋಧ್ಯಮ ಸಚಿವರು ವಿಶೇಷ ಕಾಳಜಿ ತೆಗೆದುಕೊಂಡಿದ್ದು, ಬರುವ ದಿನಗಳಲ್ಲಿ ರೇಣುಕಾ ಯಲ್ಲಮ್ಮ ದೇವಸ್ಥಾನ ಮಾದರಿ ದೇವಸ್ಥಾನ ಆಗುತ್ತದೆ ಎಂದಿದ್ದಾರೆ,
ಬರುವ ದಿನಗಳಲ್ಲಿ ಸವದತ್ತಿ ಕ್ಷೇತ್ರಕ್ಕೆ ಹೊಸ ಹೊಸ ಕೈಗಾರಿಕಾ ಉದ್ದಿಮೆಗಳನ್ನು ತರುವದು, ರೈಲ್ವೆ ಸಂಚಾರದ ವ್ಯವಸ್ಥೆ ಮಾಡುವದು ಯೋಜನೆಯನ್ನು ಇಟ್ಟುಕೊಂಡಿದ್ದು ಪರಿಸ್ಥಿತಿಗೆ ಅನುಗುಣವಾಗಿ ಜಾರಿಯಾಗುತ್ತವೆ ಎಂದಿದ್ದಾರೆ, ಕ್ಷೇತ್ರದ ಜನತೆ ತಮ್ಮ ಪಕ್ಷಕ್ಕೆ ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿದ್ದು, ಈಗ ಉತ್ತಮ ಶಾಸಕರು ಕೂಡಾ ಇರುವದರಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಯಾವುದೇ ಸಂಶಯ ಇಲ್ಲಾ ಎಂದಿದ್ದಾರೆ..
ಇನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ದೇವರು, ಧರ್ಮ, ಆದ್ಯಾತ್ಮದ ಬಗ್ಗೆ ಆಸಕ್ತಿ ಇಲ್ಲದವರು, ಅವರು ನಾಸ್ತಿಕರಂತೆ ಮಾತನಾಡುತ್ತಾರೆ, ಸಂಪ್ರದಾಯ ವಿರೋಧಿಗಳು ಎಂದು ಹೇಳುವ ಕೆಲ ಪೂರ್ವಾಗ್ರಹ ಪೀಡಿತ ಪಂಡಿತರಿಗೆ, ಸಚಿವರ ನಿಜ ವ್ಯಕ್ತಿತ್ವ ಏನೆಂದು ಇಂತಹ ಕಾರ್ಯಗಳಿಂದ ತಿಳಿಯಲಿ, ದೇವರು ದೇವಸ್ಥಾನದ ಸುಧಾರಣೆ, ಅಭಿವೃದ್ಧಿಯ ವಿಷಯದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಎಂದಿಗೂ ದಾರಾಳತೆಯ ಗುಣದವರೇ ಎಂಬುದಕ್ಕೆ ನೂರಾರು ನಿದರ್ಶನಗಳಲ್ಲಿ ಇದೂ ಒಂದು..
ವರದಿ ಪ್ರಕಾಶ್ ಬಸಪ್ಪ ಕುರಗುಂದ…